ಅಕ್ಕನಿಗಾಗಿ ನಿಧಿ ಪ್ರೀತಿ ತ್ಯಾಗ – ನಡೆದೇ ಬಿಡ್ತು ನಿತ್ಯಾ, ಕರ್ಣ ಕಲ್ಯಾಣ!

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಕರ್ಣ ಸೀರಿಯಲ್ ಈಗ ರೋಚಕತೆಯಿಂದ ಕೂಡಿದೆ. ಟಿ ಆರ್ ಪಿ ರೇಸ್‌ನಲ್ಲೂ ಮುಂದಿದೆ. ಇತ್ತೀಚೆಗಷ್ಟೇ ಕರ್ಣನಿಗೆ ನಿಧಿ ಮೇಲೆ ಪ್ರೀತಿ ಹುಟ್ಟಿತ್ತು. ಪ್ರೀತಿಯ ಅಲೆಯಲ್ಲಿ ಇಬ್ಬರು ತೇಲಾಡ್ತಿದ್ರು. ಇವರಿಬ್ಬರೇ ಮದ್ವೆ ಆಗ್ತಾರೆ ಅಂತಾ ಅಂದ್ಕೊಂಡಿದ್ರು. ಆದ್ರೀಗ ಸೀರಿಯಲ್ ಡೈರೆಕ್ಟರ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಕರ್ಣನ ಜೊತೆ ನಿತ್ಯಾ ಮದುವೆ ಆಗಿದೆ.
ಇದನ್ನೂ ಓದಿ:ವಾಹನ ಸವಾರರೇ ಎಚ್ಚರ! – ವಾಹನಕ್ಕೆ ನಂಬರ್ ಪ್ಲೇಟ್ ಇಲ್ಲ ಅಂದ್ರೆ ನಿಮ್ಮ ಮೇಲೆ ಬೀಳುತ್ತೆ 420 ಕೇಸ್!
ಕರ್ಣ-ನಿಧಿ ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ. ಮೊನ್ನೆಯಷ್ಟೆ ಮತ್ತಿನ ಅಮಲಿನಲ್ಲಿ ಕರ್ಣ ನಿಧಿಗೆ ಮೊದಲ ಬಾರಿ ಪ್ರಪೋಸ್ ಮಾಡಿದ್ದ. ಇದಕ್ಕಿಂತ ಮುಂಚೆಯೇ ನಿಧಿ ಕರ್ಣನಿಗೆ ಪ್ರಪೋಸ್ ಮಾಡಿದ್ದಳು. ಆದರೆ, ಇದಕ್ಕೆ ಕರ್ಣನ ಕಡೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ. ಬಳಿಕ ನಿಧಾನವಾಗಿ ಕರ್ಣ ನಿಧಿ ಕಡೆ ವಾಲುತ್ತ ತನ್ನ ಪ್ರೀತಿಯನ್ನು ಕೂಡ ಹೇಳಿಕೊಂಡಿದ್ದ.. ಇದಕ್ಕೆ ಕರ್ಣನ ತಂದೆ ರಮೇಶನಿಂದ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಆದ್ರೀಗ ಸೀರಿಯಲ್ ನಲ್ಲಿ ಬಿಗ್ ಟ್ವಸ್ಟ್ ಸಿಕ್ಕಿದೆ. ನಿಧಿ ಅಕ್ಕ ನಿತ್ಯಾ ತೇಜಸ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು.. ಇವರ ಎಂಗೇಜ್ಮೆಂಟ್ ಕೂಡ ಆಗಿದೆ. ಆದ್ರೆ ಆತನ ಮನೆಯಲ್ಲಿ ಈ ಮದುವೆ ಒಪ್ಪಿಗೆ ಇಲ್ಲ. ನಿತ್ಯಾ ಮನೆಯವರು ಸೇರಿಕೊಂಡು ಈ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಇದೀಗ ಝೀ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕರ್ಣ ನಿಧಿಯ ಅಕ್ಕ ನಿತ್ಯಾಳನ್ನು ಮದುವೆ ಆಗುವುದನ್ನು ತೋರಿಸಲಾಗಿದೆ.
ಜೀ ಕನ್ನಡ ರಿಲೀಸ್ ಮಾಡಿರುವ ಪ್ರೋಮೋದಲ್ಲಿ ಮಂಟಪದಲ್ಲಿ ಕರ್ಣ ಕುಳಿತಿದ್ದಾನೆ. ನಿಧಿ ವಧುವಾಗಿ ಬರ್ತಾಳೆ ಅಂದ್ಕೊಂಡಿದ್ರೆ, ನಿಧಿ ಜಾಗದಲ್ಲಿ ನಿತ್ಯಾ ಇದ್ದಾಳೆ. ಆದ್ರೆ ನಿಧಿ ಈ ಸ್ಥಿತಿಯಲ್ಲಿ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಕರ್ಣ ನಿಧಿಯನ್ನು ನೋಡಿಕೊಂಡೆ ನಿತ್ಯಾಳ ಕೊರಳಿಗೆ ತಾಳಿ ಕಟ್ಟಿರುವುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಬಳಿಕ ಸಪ್ತಪದಿ ತುಳಿಯುವಾಗ ನಿತ್ಯಾ ಕಾಲು ಉಳುಕಿದಾದ ಬೈಮಿಸ್ಟೇಕ್ ಆಗಿ ಕರ್ಣ, ನಿತ್ಯಾಳ ಕೈ ಹಿಡಿಯುತ್ತಾನೆ, ಆಗ ಅವನಿಗೆ ನಿತ್ಯಾಳ ನಾಡಿ ಮಿಡಿತ ಗೊತ್ತಾಗುತ್ತದೆ. ಆ ನಾಡಿಮಿಡಿತದಿಂದ ನಿತ್ಯಾ ಪ್ರಗ್ನೆಂಟ್ ಎಂಬ ವಿಷಯ ಡಾಕ್ಟರ್ ಕರ್ಣನಿಗೆ ಅರಿವಾಗಿದೆ.
ಇದೀಗ ಕರ್ಣನಿಗೆ ಮದುವೆ ಮಂಟಪದಲ್ಲೇ ಮಹಾ ಸತ್ಯ ಗೊತ್ತಾಗಿದೆ. ಮಗುವಿಗಾಗಿ ನಿತ್ಯಾಳನ್ನ ಒಪ್ಪಿಕೊಳ್ತಾನಾ ಅಥವಾ ಈ ವಿಚಾರವನ್ನ ಎಲ್ಲರ ಮುಂದೆ ಬಯಲು ಮಾಡಿ ನಿತ್ಯಾಗೆ ಡಿವೋರ್ಸ್ ಕೊಡ್ತಾನಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ನೋಡಿರಿ

