ಕರ್ಣನಿಗೆ ನಿಧಿಯೇ ಶಕ್ತಿ! – ನಿತ್ಯಾ ಮದುವೆ ನಡೆಯಲ್ವಾ?

ಕರ್ಣ ಮನೆಯವರಿಗೆ ಎಷ್ಟೇ ಒಳ್ಳೆದು ಮಾಡಿದ್ರೂ ಕೂಡ ಆತನ ವಿರುದ್ಧ ಕುತಂತ್ರಿಗಳು ಕತ್ತಿ ಮಸೆಯೋ ಕೆಲಸ ಮಾಡ್ತಾನೆ ಇದ್ದಾರೆ. ಈಗಾಗಲೇ ಕರ್ಣನ ತಂದೆ ಮದುವೆ ಆಗ್ಬಾರ್ದು ಅಂತಾ ಆತನ ಬಳಿ ಮಾತು ತೆಗೆದುಕೊಂಡಿದ್ರು.. ನಿಧಿ ಬಳಿ ಕೂಡ ರಮೇಶ ಚುಚ್ಚು ಮಾತನಾಡಿದ್ರು.. ಹೀಗಾಗಿ ನಿಧಿ ಕರ್ಣನಿಂದ ದೂರ ಉಳಿದಿದ್ರು. ಆದ್ರೀಗ ನಿಧಿಗೆ ರಮೇಶನ ಕುತಂತ್ರ ಬುದ್ಧಿ ಗೊತ್ತಾಗಿದೆ. ಇನ್ಮುಂದೆ ಕರ್ಣನಿಗೆ ನಾನೇ ಕಾವಲಾಗಿರ್ತೀನಿ ಅಂತ ಹೇಳಿದ್ದಾಳೆ.. ಇನ್ಮುಂದೆ ನಿಧಿ ಆಟ ಶುರು. ಆದ್ರೀಗ ವೀಕ್ಷಕರು ಮಾತ್ರ ಹೊಸ ಚರ್ಚೆ ಶುರು ಮಾಡ್ಕೊಂಡಿದ್ದಾರೆ. ಕರ್ಣನನ್ನ ಮದುವೆ ಆಗೊದ್ಯಾರು ಅಂತ ಕೇಳ್ತಿದ್ದಾರೆ.
ಇದನ್ನೂ ಓದಿ: ಭಾರತದ ಉಪರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿ – ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ.9ರಂದು ಚುನಾವಣೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಸೀರಿಯಲ್ ಆರಂಭದಲ್ಲೇ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದೆ. ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಇರ್ತೀನಿ ಅನ್ನೋ ಹಾಗೆ ಸಖತ್ ಸೌಂಡ್ ಮಾಡುತ್ತಿದ್ದಾನೆ ಕರ್ಣ. ಕರ್ಣ ಅನಾಥನಾದ್ರೂ ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ದಾನೆ. ಇಡೀ ಎಲ್ಲಾ ಆಸ್ತಿ ಕೂಡ ಕರ್ಣನ ಹೆಸರಿನಲ್ಲಿದೆ. ಆಸ್ತಿಯನ್ನ ಹೊಡಿಬೇಕು ಅಂತ ರಮೇಶ, ನಯನತಾರ ಹೊಂಚು ಹಾಕಿ ಕಾಯ್ತಿದ್ದಾರೆ. ಹೀಗಾಗಿ ಆತನ ಹಿಂದೆ ಇವರಿಬ್ರು ಸೇರ್ಕೊಂಡು ಒಂದಲ್ಲ ಒಂದು ಷಡ್ಯಂತರ ಮಾಡ್ತಿದ್ದಾರೆ. ಇಷ್ಟು ದಿನ ಕರ್ಣನ ಬಳಿ ರೂಡ್ ಆಗಿ ಬಿಹೇವ್ ಮಾಡ್ತಿದ್ದ ರಮೇಶ ಈಗ ಕರ್ಣನ ಜೀವಕ್ಕೆ ಸಂಚಕಾರ ತರಲು ಮುಂದಾಗಿದ್ದಾನೆ. ಇದೀಗ ಅಪಾಯದಲ್ಲಿದ್ದ ಕರ್ಣನನ್ನ ನಿಧಿ ಕಾಪಾಡಿದ್ದಾಳೆ.
ಕರ್ಣನಿಗೆ ಏನೇ ಸಮಸ್ಯೆ ಎದುರಾದ್ರೂ ನಿಧಿ ಬಂದು ಸಮಸ್ಯೆಯನ್ನ ಬರೆಹರಿಸ್ತಾ ಬಂದಿದ್ದಾಳೆ. ಕರ್ಣನ ತಮ್ಮ ಸಂಜಯ್ ಕಳ್ಳಾಟವನ್ನ ಎಲ್ಲರ ಮುಂದೆ ಬಯಲು ಮಾಡಿದ್ಲು. ಅದಾದ್ಮೇಲೆ, ನಯನತಾರ ವಂಚನೆಯನ್ನ ಕೂಡ ರಿವೀಲ್ ಮಾಡಿದ್ಲು.. ಇದ್ರಿಂದಾಗಿ ಕುತಂತ್ರಿಗಳಿಗೆ ಪೆಟ್ಟು ಬ್ರೇಕ್ ಬಿದ್ದಂತಾಗಿದೆ. ಹೀಗಾಗೇ ರಮೇಶ ನಿಧಿ ಬಳಿ ಚುಚ್ಚು ಮಾತುಳನ್ನ ಆಡಿದ್ದ. ಶ್ರೀಮಂತಿಕೆ ನೋಡಿ ಕರ್ಣನ ಹಿಂದೆ ನೀನು ನಿನ್ನ ಮನೆಯವರು ಬಿದ್ದಿದ್ದೀರಾ ಅಂತಾ ಹೇಳಿದ್ದ. ಇದ್ರಿಂದಾಗಿ ನಿಧಿ ತುಂಬಾ ಬೇಜಾರು ಮಾಡಿಕೊಂಡಿದ್ಲು. ಕರ್ಣನಿಂದ ಆದಷ್ಟು ದೂರವೇ ಉಳಿದಿದ್ಲು.. ಆದ್ರೀ ನಿಧಿ ಮುಂದೆ ರಮೇಶನ ಇನ್ನೊಂದು ಮುಖ ಬಯಲಾಗಿದೆ. ಕರ್ಣನನ್ನ ದೊಡ್ಡ ಅಪಾಯದಿಂದ ಪಾರು ಮಾಡಿದ್ದಾಳೆ.
ಹೌದು, ಕರ್ಣ ಜೊತೆ ನಿಧಿ ಆಚೆ ಹೋಗಿದ್ಲು. ಈ ವೇಳೆ ರಮೇಶ ಕಾಲ್ ಮಾಡಿ ಆಕ್ಸಿಡೆಂಟ್ ಆಗಿದೆ. ನನ್ನ ಬಂದು ಕಾಪಾಡು ಅಂತ ಹೇಳಿದ್ದಾನೆ. ಆಗ ಕರ್ಣ ರಮೇಶನ ನಂಬಿ ಹೋಗಿದ್ದಾನೆ. ಕರ್ಣ ಅಲ್ಲಿಗೆ ತಲುಪ್ತಿದ್ದಂತೆ ರಮೇಶ ಆತನನ್ನ ಸಾಯಿಸಲು ಪ್ಲ್ಯಾನ್ ಮಾಡಿದ್ದ. ಕರ್ಣನಿಗೆ ಇನ್ನೇನು ಪಿಕಪ್ ಡಿಕ್ಕಿ ಹೊಡೆಯುತ್ತೆ ಅನ್ನುವಷ್ಟರಲ್ಲಿ ನಿಧಿ ಆತನನ್ನ ಕಾಪಾಡಿದ್ದಾಳೆ. ಅಷ್ಟೇ ಅಲ್ಲ ರಮೇಶನಿಗೆ ಸರಿಯಾಗೇ ವಾರ್ನ್ ಮಾಡಿದ್ದಾಳೆ. ಇನ್ಮುಂದೆ ಕರ್ಣ ಸರ್‌ಗೆ ಯಾವುದೇ ತೊಂದ್ರೆ ಆಗಲ್ಲ.. ಇಷ್ಟು ದಿನ ಯಾರಿಂದ ತೊಂದ್ರೆ ಆಗ್ತಿತ್ತೋ ಅದಕ್ಕೂ ಅವಕಾಶ ಕೊಡಲ್ಲ.. ಅದು ಹತ್ರದವರೇ ಆಗಿರ್ಲಿ.. ದೂರದವೇ ಆಗಿರ್ಲಿ ಅಂತ ಹೇಳಿದ್ದಾಳೆ. ನಿಧಿ ಖಡಕ್ ಮಾತು ಸೀರಿಯಲ್ ಪ್ರೇಮಿಗಳಿಗೆ ಇಷ್ಟ ಆಗಿದೆ. ಇದೀಗ ಸೀರಿಯಲ್ ನೋಡಿದ ಫ್ಯಾನ್ಸ್ ಕರ್ಣನ ಸಮಸ್ಯೆಗೆ ನಿಧಿಯೇ ಮದ್ದು.. ಅಂತಾ ಹೇಳ್ತಿದ್ದಾರೆ.
ಮತ್ತೊಂದ್ಕಡೆ ಈಗ ನಿತ್ಯ ಮದುವೆ ಯಾಕೋ ನಿಲ್ಲೋತರ ಕಾಣ್ತಿದೆ. ನಿತ್ಯ ಪ್ರೀತಿಸ್ತಿರೋ ಹುಡುಗ ಪದೆ ಪದೇ ಸುಳ್ಳು ಹೇಳ್ತಿದ್ದಾನೆ. ಇಷ್ಟು ದಿನ ಅಪ್ಪ ಅಮ್ಮ ಮದುವೆ ಬರ್ತಾರೆ ಅಂತ ಹೇಳ್ತಿದ್ದ. ಈಗ ನೋಡಿದ್ರೆ ಮದುವೆಗೂ ಬರಲ್ಲ ಅಂತಾ ಹೇಳಿದ್ದಾನೆ. ಹೀಗಾಗಿ ಸೀರಿಯಲ್ ಡೈರೆಕ್ಟರ್ ದೊಡ್ಡ ಟ್ವಿಸ್ಟ್ ಇಟ್ಟಿದ್ದಾರೆ. ನಿಧಿ ಮದುವೆ ನಡೆಯೋದು ಡೌಟ್.. ಅಂತ ವೀಕ್ಷಕರು ಹೇಳ್ತಿದ್ದಾರೆ. ಒಂದ್ವೇಳೆ ಮದುವೆ ನಿಂತ್ರೆ ಕರ್ಣ ನಿತ್ಯಳನ್ನ ಮದುವೆ ಆಗೋ ಸನ್ನಿವೇಶವೂ ಕ್ರಿಯೇಟ್ ಆಗ್ಬೋದು ಅಂತಾ ವೀಕ್ಷಕರೇ ಚರ್ಚೆ ನಡೆಸ್ತಿದ್ದಾರೆ.

ನೋಡಿರಿ

