ಡಾಕ್ಟರ್‌ ಅಲ್ಲ.. ಫೈಟರ್‌ ಕರ್ಣ..  ನಯನತಾರ ಬಣ್ಣ ಕಳಚಿದ ನಿಧಿ

ಡಾಕ್ಟರ್‌ ಅಲ್ಲ.. ಫೈಟರ್‌ ಕರ್ಣ..  ನಯನತಾರ ಬಣ್ಣ ಕಳಚಿದ ನಿಧಿ

ಕರ್ಣನ ಮೇಲೆ ನಿಧಿಗೆ ಹುಚ್ಚು ಪ್ರೀತಿ.. ಮೂರ್ಹೊತ್ತು ಕರ್ಣನ ಗುಂಗಲ್ಲೇ ಕಾಲ ಕಳಿತಾ ಇರ್ತಾಳೆ. ಕಾಲೇಜಿಗೆ ಬಂದ್ರಂತೂ ಆಕೆ ಕರ್ಣನ ಹಿಂದೆಯೇ ಸುತ್ತಾಡ್ತಿರ್ತಾಳೆ. ಇದೀಗ ನಿಧಿ ಮಹಾ ವಂಚನೆಯೊಂದನ್ನ ಕರ್ಣನ ಮುಂದೆ ಬಯಲು ಮಾಡಿದ್ದಾಳೆ. ಡಾಕ್ಟರ್‌ ಕರ್ಣ ಈ ಫೈಟರ್‌ ಆಗಿದ್ದಾನೆ.. ಹಾಸ್ಪಿಟಲ್‌ ಕ್ಯಾಂಟಿನ್‌ನಲ್ಲಿ ಅವ್ಯವಹಾರ  ಆಹಾರಕ್ಕೆ ಮಾಡ್ತಿದ್ದವರಿಗೆ ಕರ್ಣ ಒಂದು ಗತಿ ಕಾಣಿಸಿದ್ದಾನೆ. ಇದೀಗ ಕರ್ಣನ ಅತ್ತೆ ಇನ್ನೊಂದು ಮುಖ ರಿವೀಲ್‌ ಆಗಿದೆ. ಮತ್ತೊಂದ್ಕಡೆ ಕರ್ಣ ರೌಡಿಗಳ ಜೊತೆ ಫೈಟ್‌ ಮಾಡ್ತಿದ್ರೆ ನಿಧಿ ಮಾತ್ರ ಪ್ರೇಮ ಲೋಕದಲ್ಲಿ ತೇಲಾಡ್ತಿದ್ದಾಳೆ. ಕರ್ಣ ನಡಿತಿದ್ದ ವಂಚನೆಯನ್ನ ತಡೆದಿದ್ದಾನೆ. ಇದೀಗ ಸತ್ಯ ಗೊತ್ತಾದ ಕರ್ಣ ಅತ್ತೆಗೆ ಪಾಠ ಕಲಿಸ್ತಾನಾ ಅನ್ನೋ  ವೀಕ್ಷಕರಲ್ಲಿ ಮೂಡಿದೆ.

ಇದನ್ನೂ ಓದಿ: IPL ಸೈಲೆಂಟ್.. ENGನಲ್ಲಿ ವೈಲೆಂಟ್ – ಕೊಹ್ಲಿಯನ್ನು ಕಾಪಿ ಮಾಡಿ ಕೆಟ್ಟ ಗಿಲ್

ಕರ್ಣ ಸೀರಿಯಲ್‌ ಆರಂಭದಲ್ಲೇ ವೀಕ್ಷಕರ ಮನಗೆದ್ದಿದೆ. ಡಾಕ್ಟರ್‌ ಕರ್ಣ ಈಗ ಕರುನಾಡಿನ ಕಣ್ಮನಿ ಆಗಿದ್ದಾನೆ.. ಇಂತಹ ಡಾಕ್ಟರ್ಸ್‌ ಈ ಸಮಾಜದಲ್ಲಿ ಇರ್ಬೇಕು.. ಹಣ, ಸ್ಟೇಟಸ್‌ಗಿಂತ ಜೀವವೇ ಮುಖ್ಯ ಅನ್ನೋದು ನಮ್ಮ ನಡುವೆ ಇರ್ಬೇಕು ಅಂತಾ ಸೀರಿಯಲ್‌ ಫ್ಯಾನ್ಸ್‌ ಹೇಳ್ತಿದ್ದಾರೆ. ಸಮಾಜದ ಮುಂದೆ ಹೀರೋ ಆಗಿ ಮಿಂಚುತ್ತಿರೋ ಕರ್ಣ ಮನೆಯಲ್ಲಿ ಮಾತ್ರ ಮನೆ ಕೆಲಸದವನಂತೆ ಇದ್ದಾನೆ.. ಕರ್ಣ ಮನೆಯವರನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಾನೆ.. ಆದ್ರೆ ಆತನ ಪ್ರೀತಿಗೆ ಸಿಕ್ಕ ರಿಸಲ್ಟ್‌ ತಿರಸ್ಕಾರ.. ಚುಚ್ಚು ಮಾತು.. ಇದೀಗ ನಿಧಿ ನಯನತಾರಾಳ ಇನ್ನೊಂದು ಮುಖ ಕರ್ಣನ ಮುಂದೆ ಬಯಲು ಮಾಡಿದ್ದಾಳೆ.

ಕಾಲೇಜಿಗೆ ಚಕ್ಕರ್ ಹಾಕುತ್ತಿದ್ದ ಸಂಜಯ್‌ ಬಂಡವಾಳವನ್ನು ನಿಧಿ ಎಲ್ಲರ ಮುಂದೆ ಬಯಲು ಮಾಡಿದ್ದಳು. ಇದರಿಂದ ಕೋಪಗೊಂಡ ಸಂಜಯ್, ಗರ್ಭಿಣಿಗೆ ನಿಧಿ ನೀಡುತ್ತಿದ್ದ ಇಂಜೆಕ್ಷನ್ ಬದಲಾಯಿಸಿದ್ದನು. ಇದರಿಂದ ನಿಧಿಯನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿತ್ತು. ಅದ್ರೆ ಕರ್ಣ ಸಾಕ್ಷಿ ಸಮೇತ ಬಂದು ನಿಧಿಯನ್ನ ಸಂಕಷ್ಟದಿಂದ ಪಾರು ಮಾಡಿದ್ದ. ಆದ್ರೆ ಕರ್ಣ ಮನೆಗೆ ಬರ್ತಿದ್ದಂತೆ ನಯನತಾರ ಹಾಗೂ ಕರ್ಣ ತಂದೆ ದೊಡ್ಡ ರಂಪಾಟ ಮಾಡಿದ್ದಾರೆ. ಸ್ವಂತ ಮಗನಿಗೆ ಅವಮಾನ ಆಗಿದ್ದಕ್ಕೆ ಕರ್ಣನನ್ನು ತಂದೆ ಮನೆಯಿಂದ ಹೊರಹಾಕಿದ್ರು. ಕರ್ಣ ಮಳೆಯಲ್ಲಿ ನೆನಿತಾ ಇದ್ರೂ ಆತನನ್ನ ಮನೆಗೆ ಸೇರಿಸಿಕೊಂಡಿರ್ಲಿಲ್ಲ. ಅದಾದ ಬಳಿಕ ಅಜ್ಜಿ ಬಂದು ಆತನನ್ನ ಮನೆಯೊಳಗೆ ಕರ್ಕೊಂಡು ಹೋಗಿದ್ರು.. ಇದೀಗ  ನಿಧಿ ಕರ್ಣನ ಮುಂದೆ ಮತ್ತೊಂದು ಅವ್ಯವಹಾರವನ್ನ ಬಯಲು ಮಾಡಿದ್ದಾಳೆ.

ಕರ್ಣ ಮಳೆಯಲ್ಲಿ  ನೆನೆದಿದ್ದಕ್ಕೆ ಆತನಿಗೆ ಕೋಲ್ಡ್‌ ಅಗಿತ್ತು. ಹೀಗಾಗಿ ಆತ ಪದೇ ಪದೆ ಸೀನುತ್ತಿದ್ದ. ಇದನ್ನ ನೋಡಿದ ನಿಧಿ ಶುಂಠಿ ಟೀ ಮಾಡಿಕೊಂಡು ಬಂದು ಕೊಟ್ಟಿದ್ಲು. ಅದಾದ ಬಳಿಕ ಕರ್ಣ ಹೊರಗಡೆ ಊಟ ಮಾಡೋದು ಬೇಡ ಎಂದು ನಿಧಿ ಆತನಿಗೆ ರಸಂ ಮಾಡಿಕೊಡ್ತೇನೆ ಅಂತಾ ಹಾಸ್ಪಿಟಲ್‌ ಕ್ಯಾಂಟಿನ್‌ ಕಡೆ ಹೋಗಿದ್ದಾಳೆ. ಈ ವೇಳೆ ಪೆಪ್ಪರ್‌ ಇಲ್ಲ ಎಂದು ಕ್ಯಾಂಟಿನ್‌ ಕಿಚನ್ ಒಳಗೆ ಹೋಗಿದ್ದಾಳೆ.. ಕಿಚನ್‌ ಪೂರ್ತಿ ಕೊಳಕಾಗಿತ್ತು.. ಎಲ್ಲಾ ಕೀಟಗಳು ಆಹಾರ ಪದಾರ್ಥದ ಮೇಲೆ ಓಡಾಡ್ತಿತ್ತು. ಇದನ್ನ ನೋಡಿದ ನಿಧಿ ಕರ್ಣನನ್ನ ಅಲ್ಲಿಗೆ ಕರ್ಕೊಂಡು ಬಂದಿದ್ದಾಳೆ. ಪೊಲೀಸ್‌ ಗೆ ಫೋನ್‌ ಮಾಡುವಷ್ಟರಲ್ಲಿ ನಿಧಿ ಕರ್ಣ ರೌಡಿಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಕರ್ಣ ರೌಡಿಗಳ ಜೊತೆ ಫೈಟ್‌ ಮಾಡಿದ್ದಾನೆ. ನಿಧಿಯನ್ನ ಅಪ್ಪಿಕೊಂಡು ಕರ್ಣ ರೌಡಿಗಳಿಗೆ ಸರಿಯಾಗೇ ಏಟು ಕೊಟ್ಟಿದ್ದಾನೆ.. ಕರ್ಣನ ಫೈಟ್‌ ನೋಡಿ ನಿಧಿ ಕಳೆದುಹೋಗಿದ್ರೆ, ಇತ್ತ ಕರ್ಣನ ಮುಂದೆ ಅತ್ತೆ ಇನ್ನೊಂದು ಮುಖ ಬಯಲಾಗಿದೆ.  ಇದಕ್ಕೆ ಕಾರಣ ಯಾರು ಅಂತಾ ಕೇಳಿದಾಗ ರೌಡಿಗಳು ನಯನತಾರ ಹೆಸ್ರು ಹೇಳಿದ್ದಾರೆ. ಇದ್ರಿಂದ ಕರ್ಣ ಶಾಕ್‌ ಆಗಿದ್ದಾನೆ. ಆದ್ರೀಗ ಕರ್ಣ ಮತ್ತೆ ಮನೆಯವರ ಕೋಪಕ್ಕೆ ಗುರಿಯಾಗೋದು ಫಿಕ್ಸ್‌. ಯಾಕಂದ್ರೆ ಹಾಸ್ಪಿಟಲ್‌ನಲ್ಲಿ ನಡೆತಾ ಇದ್ದ ವಂಚನೆಯನ್ನ ಕರ್ಣ ತಡೆದಿದ್ದಾನೆ. ಇದು ನಯನತಾರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.  ಅಂದ್ರೆ ಮನೆಯಲ್ಲಿ ಮತ್ತೆ ರಂಪಾಟ ಫಿಕ್ಸ್..‌ ಮತ್ತೆ ಕರ್ಣ ಮನೆಯವರ ಕೋಪಕ್ಕೆ ಗುರಿಯಾಗೋದಂತೂ ಪಕ್ಕಾ. ಇದೀಗ ಕರ್ಣನ ಜೀವನದಲ್ಲಿ ಒಳ್ಳೆಯದ್ದು ಆಗ್ಬೇಕಂದ್ರೆ ಕರ್ಣನ ಬಾಳಿಗೆ ನಿತ್ಯ ಎಂಟ್ರಿ ಕೊಡ್ಬೇಕು ಅಂತಾ ವೀಕ್ಷಕರು ಕಾಮೆಂಟ್‌ ಮಾಡ್ತಿದ್ದಾರೆ.

Shwetha M