ನಿತ್ಯಾ ತೇಜಸ್‌ ಮದ್ವೆ ಕ್ಯಾನ್ಸಲ್? – ಪ್ರೀತಿ ಬಗ್ಗೆ ಬಾಯ್ಬಿಟ್ಟ ನಿಧಿ?
ಅಕ್ಕ, ತಂಗಿ.. ಕರ್ಣನ‌ ಜೋಡಿ ಯಾರು?

ನಿತ್ಯಾ ತೇಜಸ್‌ ಮದ್ವೆ ಕ್ಯಾನ್ಸಲ್? – ಪ್ರೀತಿ ಬಗ್ಗೆ ಬಾಯ್ಬಿಟ್ಟ ನಿಧಿ?ಅಕ್ಕ, ತಂಗಿ.. ಕರ್ಣನ‌ ಜೋಡಿ ಯಾರು?

ಕರ್ಣ ಸೀರಿಯಲ್‌ ನಲ್ಲಿ ನಿಧಿ ಕನಸಿನ ಲೋಕದಲ್ಲೇ ತೇಲಾಡ್ತಾ ಇರ್ತಾಳೆ.. ಕರ್ಣನನ್ನ ಮದುವೆ ಆಗ್ಬೇಕು ಅಂತಾ ಆಸೆ ಪಟ್ಟಿದ್ದಾಳೆ.. ಆದ್ರೆ ಕರ್ಣನಿಂದ ನಿಧಿಯನ್ನ ದೂರ ಮಾಡ್ಬೇಕು ಅಂತಾ ನಯನತಾರ, ರಮೇಶ್‌ ಮುಂದಾಗಿದ್ದಾರೆ.. ನಯನತಾರ ಈಗಾಗಲೇ ನಿಧಿಗೆ ಹುಡುಗ ಬೇರೆ ಹುಡುಕಿದ್ಲು.. ಆದ್ರೆ ಅವರಿಬ್ಬರ ಪ್ಲ್ಯಾನ್‌ ನ ನಿಧಿಯೇ ಉಲ್ಟಾ ಮಾಡಿದ್ಲು.. ಇದೀಗ ಕರ್ಣನನ್ನ ಪ್ರೀತಿ ಮಾಡ್ತಿರೋ ವಿಚಾರನಾ ನಿಧಿ ಎಲ್ಲರ ಮುಂದೆ ಬಾಯ್ಬಿಡ್ತಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಮತ್ತೊಂದ್ಕಡೆ ನಿತ್ಯಾ ತೇಜಸ್‌ ಮದ್ವೆ ನಡೆಯಲ್ವಾ ಅನ್ನೋ ಅನುಮಾನ ಕೂಡ ಕಾಡಿದೆ..

ಇದನ್ನೂ ಓದಿ: ದೀಪಾವಳಿಗೆ ದೆವ್ವವಾಗಿ ಬರಲಿದ್ದಾರೆ ರಶ್ಮಿಕಾ ಮಂದಣ್ಣ – ಹಾರರ್ ಸಿನಿಮಾದಲ್ಲಿ ನ್ಯಾಷನಲ್ ಕ್ರಷ್ ಹವಾ

ಕರ್ಣ ಸೀರಿಯಲ್‌ ಸ್ಟೋರಿ ಹೊಸ ತಿರುವು ಪಡೆದುಕೊಳ್ತಿದೆ.. ಕರ್ಣನಿಗೆ ಕಾವಲಾಗಿರ್ತೀನಿ ಅಂತಾ ನಿಧಿ ಪಣ ತೊಟ್ಟಿದ್ದಾಳೆ.. ಈಗಾಗಲೇ ಕರ್ಣನ ತಂಟೆಗೆ ಬಂದ್ರೆ ಸುಮ್ನೆ ಇರಲ್ಲ ಅಂತ ರಮೇಶನಿಗೆ ವಾರ್ನ್‌ಕೂಡ ಮಾಡಿದ್ಲು.. ನಿಧಿ ಕರ್ಣನ ಜೊತೆಗಿದ್ರೆ ತಮಗೆ ಸಂಕಷ್ಟ ತಪ್ಪಿಲ್ಲ ಅನ್ನೋದು ಕುತಂತ್ರಿಗಳಿಗೆ ಅರಿವಾಗಿದೆ.. ಹೀಗಾಗಿ ನಿಧಿ ಮದುವೆ ಮಾಡಿಸೋ ಮೂಲಕ ಕರ್ಣನಿಂದ ದೂರ ಮಾಡ್ಬೇಕು ಅಂತ ನಯನತಾರ ಪ್ಲ್ಯಾನ್‌ ಮಾಡಿದ್ರು.. ಹೀಗಾಗಿ ಹುಡುಗನ ಕಡೆಯವರನ್ನ ಕೂಡ ಕರೆಸಿದ್ಲು.. ಆದ್ರೆ ನಿಧಿ ನಯನತಾರಾ ಪ್ಲ್ಯಾನ್‌ನ ಉಲ್ಟಾ ಹೊಡೆದಿದ್ದಾಳೆ. ನನ್ನನ್ನ ಮದುವೆ ಆದ್ರೆ ಹುಡುಗ ಕೆಲಸ ಬಿಟ್ಟು ಇಲ್ಲಿಗೆ ಬರ್ಬೇಕು.. ನಾನು ದುಡಿದು ಮನೆ ನಿಭಾಯಿಸ್ತೀನಿ ಅಂತಾ ಹೇಳಿದ್ಲು.. ನಿಧಿ ಮಾತನ್ನ ಕೇಳಿದ ಆ ಹುಡುಗ ಆಕೆಗೆ ಹೊಡೆಯಲು ಬಂದಿದ್ದ.. ಈ ವೇಳೆ ಕರ್ಣ ತಡೆದಿದ್ದಾನೆ.. ಬಳಿಕ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಿದ್ದಾನೆ. ಅಷ್ಟೇ ಅಲ್ಲ ನಿಧಿ ಮದುವೆ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ ಅಂತಾ ರಮೇಶನಿಗೂ ವಾರ್ನ್‌ ಮಾಡಿದ್ದಾನೆ ಕರ್ಣ. ಇದೀಗ ನಿಧಿ ಕರ್ಣನ್ನ ಪ್ರೀತಿಸ್ತಿರೋ ವಿಚಾರನಾ ಎಲ್ಲರ ಮುಂದೆ ರಿವೀಲ್‌ ಮಾಡ್ತಾಳಾ? ಮನೆಯವರು ಈ ಪ್ರೀತಿಗೆ ಒಪ್ಪಿಗೆ ಸೂಚಿಸ್ತಾರಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಆದ್ರೆ ನಿಧಿ ತಾನು ಒಬ್ಬ ಹುಡುಗನನ್ನ ಪ್ರೀತಿಸ್ತಿದ್ದೀನಿ ಅಂತಾ ಮಾತ್ರ ಹೇಳ್ಬೋದು.. ಆದ್ರೆ ಕರ್ಣನನ್ನ ಪ್ರೀತಿಸ್ತಿದ್ದೀನಿ ಅಂತಾ ಇಷ್ಟು ಬೇಗ ಹೇಳೋದು ಡೌಟ್..‌

ಇನ್ನು ನಿತ್ಯಾ ಮದುವೆ ನಡೆಯೋದು ಡೌಟ್‌ ಅಂತಾ ವೀಕ್ಷಕರೇ ಹೇಳ್ತಿದ್ದಾರೆ.. ತೇಜಸ್‌ ಹಾಗೂ ನಿತ್ಯಾ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದ್ರೆ ತೇಜಸ್‌ ಮನೆಯಲ್ಲಿ ಈ ಮದುವೆ ಒಪ್ಪಿಗೆ ಸೂಚಿಸಿಲ್ಲ.. ಆತನ ಮನೆಯವರು ಕೂಡ ನಿತ್ಯಾಗೆ ಬಾಯಿಗೆ ಬಂದಹಾಗೆ ಬೈದಿದ್ದರು. ನಿನಗೆ ಯೋಗ್ಯತೆ ಇಲ್ಲ.  ಗತಿಗೆಟ್ಟವಳು, ನಮ್ಮ ಮನೆಗೆ ಬಂದು ಕುಟುಂಬ ಹಾಳೋ ಮಾಡೋದು ಬೇಡ ಅಂತೆಲ್ಲ ಬೈದಿದ್ದರು. ಈ ಮಾತನ್ನ ಕೇಳಿದ ನಿತ್ಯ ತುಂಬಾ ಬೇಜಾರು ಮಾಡಿಕೊಂಡಿದ್ದಾಳೆ.  ಯಾಕಂದ್ರೆ ನಿತ್ಯಾ ಸಣ್ಣ ವಯಸ್ಸಿನಲ್ಲೇ ಅಪ್ಪ ಅಮ್ಮನನ್ನ ಕಳೆದುಕೊಂಡಿದ್ದಾಳೆ. ಮದುವೆ ಆದ್ಮೇಲೆ ಗಂಡನ ಮನೆಯಲ್ಲಿ ಅತ್ತೆ-ಮಾವನ ಪ್ರೀತಿ ಸಿಗಬೇಕು ಅಂತಾ ಕನಸು ಕಂಡಿದ್ಲು.. ಇದೀಗ ತೇಜಸ್‌ ತಂದೆ-ತಾಯಿ ಇಷ್ಟೆಲ್ಲ ಕೆಟ್ಟದಾಗಿ ಮಾತನಾಡಿದಾಗ ನಾನು ಹೇಗೆ ಮದುವೆ ಆಗಲಿ ಅನ್ನೋದು ಕಾಡೋದಿಕ್ಕೆ ಶುರುವಾಗಿದೆ.. ಇದೀಗ ನಿತ್ಯಾ ಇದೇ ವಿಚಾರವಾಗಿ ತೇಜಸ್‌ ಜೊತೆ ಬ್ರೇಕಪ್‌ ಮಾಡಿಕೊಳ್ಬೋದು ಅಂತಾ ವೀಕ್ಷಕರು ಲೆಕ್ಕಾಚಾರ ಹಾಗ್ತಿದ್ದಾರೆ.

ಮತ್ತೊಂದ್ಕಡೆ ರಮೇಶ ಕರ್ಣ ಮದುವೆ ಆಗ್ಬಾರ್ದು ಅಂತಾ ಆಜ್ಞೆ ಮಾಡಿದ್ದ.. ಅಗ್ರಿಮೆಂಟ್‌  ಗೆ ಕೂಡ ಸೈನ್‌ ಮಾಡಿಸಿಕೊಂಡಿದ್ದ. ಈ ಒಪ್ಪಂದ್ದ ಅಜ್ಜಿಗೆ ಗೊತ್ತಾಗ್ತಿದ್ದಂತೆ ಅಗ್ರಿಮೆಂಟ್‌ನ ಆಕೆ ಹರಿದು ಹಾಕಿದ್ದಾಳೆ. ಬಳಿಕ ಕರ್ಣ ಮದುವೆ ಆಗದಿದ್ರೆ ಸಾಯೋದಾಗಿ ಬೆದರಿಕೆ ಕೂಡ ಹಾಕಿದ್ದಳು. ಹೀಗಾಗಿ ಕರ್ಣ ಮದುವೆ ಆಗಲು ರೆಡಿ ಆಗಿದ್ದಾನೆ. ಈಗ ನಿತ್ಯಾಗೆ ಏನೇ ಸಮಸ್ಯೆ ಬಂದರೂ ಕೂಡ ಅದನ್ನು ಕರ್ಣ ಪರಿಹಾರ ಮಾಡ್ತಾನೆ. ಹೀಗಾಗಿ ಇವರಿಬ್ಬರು ಮದುವೆ ಆಗೋ ಸಂದರ್ಭ ಬಂದರೂ ಬರಬಹುದು. ನಿಧಿಗೆ ತಾನು ಪ್ರೀತಿಸಿದ ಹುಡುಗ ಸಿಗೋದು ಡೌಟ್ ಅಂತಾ ವೀಕ್ಷಕರೇ ಊಹೆ ಮಾಡ್ತಿದ್ದಾರೆ.

Shwetha M