ಡಾ. ಕರ್ಣ ಅನಾಥ ಅಲ್ಲ! ಮಾರಿಗುಡಿಯಲ್ಲಿ ಕರ್ಣ ಜನ್ಮ ರಹಸ್ಯ! – ಅಣ್ಣಯ್ಯ- ಕರ್ಣ ಒಡಹುಟ್ಟಿದವರಾ?‌

ಡಾ. ಕರ್ಣ ಅನಾಥ ಅಲ್ಲ! ಮಾರಿಗುಡಿಯಲ್ಲಿ ಕರ್ಣ ಜನ್ಮ ರಹಸ್ಯ! – ಅಣ್ಣಯ್ಯ- ಕರ್ಣ ಒಡಹುಟ್ಟಿದವರಾ?‌

‌ಕರ್ಣ ಅನಾಥ.. ಮಗುವಿದ್ದಾಗ ಆತ ತೊಟ್ಟಿಯಲ್ಲಿ ಬಿದ್ದಿದ್ದ.. ರಾಮಕೃಷ್ಣ  ಎನ್ನುವರು ಆತನ್ನ ಕರ್ಕೊಂಡು ಸ್ವಂತ ಮೊಮ್ಮಗ ಎನ್ನುವಂತೆ ಬೆಳೆಸಿದ್ದಾರೆ. ಇರೋ ಆಸ್ತಿಯನ್ನೆಲ್ಲಾ ಕರ್ಣನ ಹೆಸ್ರಿಗೆ ಬರೆಸಿದ್ದಾರೆ. ಆದ್ರೆ ಆ ಮನೆಯಲ್ಲಿ ಅಜ್ಜಿ, ಅಮ್ಮನನ್ನ ಬಿಟ್ಟು ಉಳಿದವರೆಲ್ಲರೂ ಕರ್ಣನನ್ನುಕೀಳಾಗಿ ನೋಡ್ತಿದ್ದಾರೆ.. ಅನಾಥ ಅಂತ ಹೀಯಾಳಿಸೋದಲ್ಲದೆ, ಮನೆ ಕೆಲಸದವನಂತೆ ಟ್ರೀಟ್‌ ಮಾಡ್ತಿದ್ದಾರೆ. ಇದೀಗ ಕರ್ಣ ನಿಧಿ ಮನೆಯವರೊಂದಿಗೆ ಮಾರಿಗುಡಿಗೆ ಹೊರಟಿದ್ದಾನೆ. ಮಾರಿಗುಡಿಗೆ ಹೊರಡ್ತಿದ್ದಂತೆ ಆತನ ಜನ್ಮ ರಹಸ್ಯ ಕೂಡ ಮುನ್ನಲೆಗೆ ಬರ್ತಿದೆ.. ಇದೀಗ ಕರ್ಣನ ಜೀವಕ್ಕೆ ಅಪಾಯ ಕೂಡ ಎದುರಾಗಿದೆ.

ಇದನ್ನೂ ಓದಿ: OTTಯಲ್ಲೂ ರಿಲೀಸ್‌ ಆಯ್ತು ಸು ಫ್ರಮ್‌ ಸೋ! – ಸಿನಿಮಾ ಈ ದೃಶ್ಯಕ್ಕೆ ಕತ್ತರಿ!?

ಕರ್ಣ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಕರ್ಣ ಕಸದ ತೊಟ್ಟಿಯಲ್ಲಿ ಸಿಕ್ಕಿದ್ರೂ ಈಗ ಶ್ರೀಮಂತ ಕುಟುಂಬದಲ್ಲಿ ಬದುಕ್ತಾ ಇದ್ದಾನೆ. ಈಗ ಫೇಮಸ್‌ ಡಾಕ್ಟರ್‌ ಕೂಡ ಆಗಿದ್ದಾನೆ. ಇಲ್ಲಿವರೆಗೂ ಕರ್ಣ ಅನಾಥ ಅಂತಾ ತೋರಿಸಿದ್ದು ಬಿಟ್ರೆ, ಆತನ ಹಿನ್ನೆಲೆ ಏನು ಅನ್ನೋದು ಯಾರಿಗೂ ಗೊತ್ತಿಲ್ಲ.. ಆದ್ರೆ ಆತನ ಮನೆಯವರೇ ಆಸ್ತಿ ಹೊಡೆಯಲು ಪಿತೂರಿ ನಡೆಸ್ತಿದ್ದಾರೆ. ಒಂದಾದ ಮೇಲೊಂದು ತೊಂದರೆ ಕೊಡ್ತಾ ಬಂದಿದ್ದಾರೆ. ಆದ್ರೀಗ ಕರ್ಣನ ಬಾಳಿಗೆ ನಿಧಿ, ನಿತ್ಯಾ ಎಂಟ್ರಿಯಾಗಿದೆ.. ನಿಧಿ ಕರ್ಣನಿಗೆ ಶೀರಕ್ಷೆ ಆಗಿದ್ದಾಳೆ. ಯಾವುದೇ ತೊಂದರೆ ಆಗೋದಿಕ್ಕೆ ಬಿಡ್ತಾ ಇಲ್ಲ.. ಮತ್ತೊಂದ್ಕಡೆ ನಿತ್ಯಾ ಕೂಡ ಕರ್ಣನ ಜೊತೆ ಕ್ಲೋಸ್‌ ಆಗ್ತಿದ್ದಾಳೆ. ಇದೀಗ ಮಾರಿಗುಡಿಗೆ ಹೋಗಲು ಕರ್ಣನನ್ನ ಕೂಡ ಕರೆದಿದ್ದಾಳೆ. ಇವೆಲ್ಲದ್ರ ಮಧ್ಯೆ ಈಗ ಸೀರಿಯಲ್‌ ಸ್ಟೋರಿಯಲ್ಲಿ ಬಿಗ್‌ ಟ್ವಿಸ್ಟ್‌ ಕೊಟ್ಟಿದ್ದಾರೆ ಡೈರೆಕ್ಟರ್‌.

ಹೌದು.. ಕರ್ಣನಿಗೆ ನಿಧಿ ಮೇಲೆ ಲವ್‌ ಆಗಿದೆ.. ಆದ್ರೆ ನಿಧಿ ಕಾರ್ತಿಕ್‌ ಹೆಸ್ರು ಹೇಳಿ ಕರ್ಣನನ್ನ ಉರಿಸ್ತಿದ್ದಾಳೆ. ನಿತ್ಯಾ ಮಾರಿಗುಡಿಗೆ ಹೋಗೋದಿಕ್ಕೆ ಇದೆ.. ಬನ್ನಿ ಅಂತಾ ಕರೆದಾಗ ಕರ್ಣ ಒಪ್ಪಿಕೊಂಡಿದ್ದಾನೆ. ಹೀಗಾಗಿ ಕರ್ಣ ಮಾರಿಗುಡಿಗೆ ನಿಧಿ ಜೊತೆ ಬೈಕ್‌ ನಲ್ಲಿ ಹೊರಟಿದ್ದಾನೆ.. ಆದ್ರೆ ಈ ವಿಚಾರ ಈಗ ನಯನತಾರಾಗೆ ಗೊತ್ತಾಗಿದೆ.. ಕರ್ಣ ಹೊರಡುವಾಗ ತಡೆದು ಎಲ್ಲಿಗೆ ಅಂತಾ ಕೇಳಿದ್ದಾಳೆ.. ಆಗ ಕರ್ಣ ಮಾರಿಗುಡಿಗೆ ಅಂತ ಹೇಳ್ತಿದ್ದಂತೆ ನಯನತಾರಾ ಶಾಕ್‌ ಆಗಿದ್ದಾಳೆ.. ನೋ ಕರ್ಣ ಮಾರಿಗುಡಿಗೆ ಹೋಗ್ಬಾರ್ದು.. ತಡಿಬೇಕು ಅಂತಾ ಹೇಳಿದ್ದಾಳೆ.. ಕರ್ಣ ಸೀರಿಯಲ್‌ ಗೆ ಅಷ್ಟೊತ್ತಿಗೆ ಅಣ್ಣಯ್ಯ ಸೀರಿಯಲ್‌ ಲಿಂಕ್‌ ಕೊಡಲಾಗಿದೆ.

ಇಷ್ಟು ದಿನ ಕರ್ಣ ಅನಾಥ.. ರಾಮಕೃಷ್ಣ ಅವ್ರ ಮನೆಯಲ್ಲಿದ್ದಾನೆ ಅನ್ನೋದನ್ನ ಮಾತ್ರ ಇಷ್ಟು ದಿನ ತೋರಿಸಲಾಗಿತ್ತು.. ಆದ್ರೆ ಆತನ ಹಿನ್ನೆಲೆ ಏನು ಎಂಬುದು ಅಲ್ಲಿ ಯಾರಿಗೂ ತಿಳಿದಿಲ್ಲ. ಆದರೆ, ಕುಟುಂಬದವರೆಲ್ಲರೂ ಸೇರಿ ಈಗ ಮಾರಿಗುಡಿಗೆ ಹೊರಟಿದ್ದಾರೆ. ಮಾರಿಗುಡಿ ಅಣ್ಣಯ್ಯ ಧಾರಾವಾಹಿ ಕಥೆಯಲ್ಲಿ ನಾಯಕ ಶಿವಣ್ಣನ ಊರು. ಆತ ಮಾರಿಗುಡಿ ಶಿವು ಎಂದೇ ಫೇಮಸ್. ಈಗ ಕರ್ಣ ಧಾರಾವಾಹಿಯಲ್ಲೂ ಮಾರಿಗುಡಿ ಊರನ್ನು ತೋರಿಸಲಾಗುತ್ತಿದೆ.  ಮಾರಿಗುಡಿಗೆ ಹೋದರೆ ಆತನ ಹಿನ್ನೆಲೆ ಗೊತ್ತಾಗಿ ಬಿಡುತ್ತದೆ ಎನ್ನುವ ಚಿಂತೆ ಆತನ ಅತ್ತೆಗೆ ಕಾಡಿದೆ. ಹೀಗಾಗಿ ನಯನತಾರಾ ಕರ್ಣನನ್ನ ಕೊಲ್ಲಬೇಕು ಅಂತ ರೌಡಿಗಳನ್ನ ಕಳುಹಿಸಿದ್ದಾಳೆ.. ಕರ್ಣ ನಿಧಿ ಹೋಗ್ತಿರುವಾಗ ರೌಡಿಗಳು ಬಂದು ಅಟ್ಯಾಕ್‌ ಮಾಡಿದ್ದಾರೆ.. ಈ ವೇಳೆ ನಿಧಿ ಅಜ್ಜಿ ಇಲ್ಲಿಂದ ವಾಪಾಸ್‌ ಹೋಗೋಣ ಎಂದು ಹೇಳಿದ್ದಾರೆ.. ಆದ್ರೆ ಜೋಗತಿ ಬಂದು.. ವಾಪಸ್‌ ಹೋಗ್ಬಾರ್ದು.. ನೀವು ಪ್ರಯಾಣ ಮುಂದುವರಿಸಬೇಕು ಅಂದಿದ್ದಾರೆ. ಅಷ್ಟೊತ್ತಿಗೆ ಮತ್ತೊಬ್ಬ ಚಾಕು ಹಿಡಿದುಕೊಂಡು ಬಂದು ಕರ್ಣನ ಮೇಲೆ ಅಟ್ಯಾಕ್‌ ಮಾಡಿದ್ದಾನೆ. ಇದೀಗ ಕರ್ಣನ ಯಾರು ಕಾಪಾಡ್ತಾರೆ.. ನಿಧಿನಾ? ನಿತ್ಯಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಇನ್ನು ಮಾರಿಗುಡಿಗೆ ಹೋದರೆ ಕರ್ಣನ ಜನ್ಮ ರಹಸ್ಯ ಗೊತ್ತಾಗುತ್ತಾ?  ಕರ್ಣ ಹಾಗೂ ಶಿವುಗೂ ಇರೋ ಕನೆಕ್ಷನ್ ಏನು ಎಂಬ ಕುತೂಹಲ ಮೂಡಿದೆ. ಮುಂದಿನ ದಿನಗಳಲ್ಲಿ ಎರಡೂ ಧಾರಾವಾಹಿಗಳ ಕಥೆಯನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.

Shwetha M