ಕರ್ಣ- ನಿಧಿ ಮದುವೆ ಮಾಡಿಸುತ್ತಾಳಾ ನಿತ್ಯಾ? – ಹೊಟ್ಟೆಯಲ್ಲಿರುವ ಮಗುವಿನ ರಹಸ್ಯವೂ ಬಯಲು..!

ಕರ್ಣ- ನಿಧಿ ಮದುವೆ ಮಾಡಿಸುತ್ತಾಳಾ ನಿತ್ಯಾ? – ಹೊಟ್ಟೆಯಲ್ಲಿರುವ ಮಗುವಿನ ರಹಸ್ಯವೂ ಬಯಲು..!

ಕರ್ಣ ಧಾರಾವಾಹಿ ಈಗ ರೋಚಕ ತಿರುವು ಪಡೆದಿದೆ. ಕರ್ಣ ಮತ್ತು ನಿಧಿ ಪ್ರೇಮಿಗಳು ಎಂಬ ಸತ್ಯ  ಬಯಲಾಗಿದೆ. ಜೊತೆಗೆ ನಿತ್ಯಾ ಹೊಟ್ಟೆಯಲ್ಲಿರುವ ಮಗುವಿನ ಅಪ್ಪ ಯಾರು ಅನ್ನೋದು ಕೂಡಾ ಗೊತ್ತಾಗಿದೆ.

ಇದನ್ನೂ ಓದಿ: ಬೀದಿಗೆ ಬಿದ್ದ ಶಕುಂತಲಾಗೆ ಗೌತಮ್‌ ಆಸರೆ! – ಮನೆಗೆ ಚಿಕ್ಕಮ್ಮನ ಕರ್ಕೊಂಡು ಬರ್ತಾನಾ?

ಕರ್ಣ ಧಾರಾವಾಹಿಯಲ್ಲಿ ಈಗ ಕರ್ಣನ ಮದುವೆ ನಡೆಯಲಿದೆ. ನಿತ್ಯಾ ಸ್ವತಃ ಕರ್ಣ ಮತ್ತು ನಿಧಿ ವಿವಾಹಕ್ಕೆ ಮುಂದಾಗಿದ್ದಾಳೆ. ಇಷ್ಟು ದಿನ ಕರ್ಣ ಹಾಗೂ ನಿತ್ಯಾ ಗಂಡ ಹೆಂಡತಿ ಎಂದೇ ಮನೆಯವರು ನಂಬಿಕೊಂಡಿದ್ದರು. ನಿತ್ಯಾ ಮಗುವಿನ ರಹಸ್ಯವೂ ಯಾರಿಗೂ ಗೊತ್ತಿರಲಿಲ್ಲ. ಈಗ ಧಾರಾವಾಹಿಯಲ್ಲಿ ಎಲ್ಲವೂ ಅಂದುಕೊಂಡಂತೆ ಸರಾಗವಾಗಿ ಸಾಗುತ್ತಿದೆ.

ಕರ್ಣನ ತಂದೆ ರಮೇಶ್ ಮೋಸದಿಂದ ಕರ್ಣ ಹಾಗೂ ನಿತ್ಯಾಳ ಮದುವೆ ಮಾಡಿಸುತ್ತಾನೆ. ಈ ಮದುವೆಗೂ ಮೊದಲು ಕರ್ಣನು ನಿಧಿಯನ್ನು ಪ್ರೀತಿ ಮಾಡುತ್ತಾ ಇರುತ್ತಾನೆ. ಈ ವಿಷಯ ಗೊತ್ತಾಗಿಯೇ ನಿತ್ಯಾ ಹಾಗೂ ಕರ್ಣನ ಮದುವೆ ಮಾಡಿಸುತ್ತಾನೆ ರಮೇಶ್. ಈ ಮೂಲಕ ಮಗನ ಮೇಲೆ ದ್ವೇಷ ಸಾಧಿಸುತ್ತಾನೆ. ಆದರೆ, ಇಷ್ಟು ದಿನ ಈ ವಿಷಯ ಗುಟ್ಟಾಗಿ ಇಡಲಾಗಿತ್ತು. ಈಗ ನಿತ್ಯಾಳಿಗೆ ನಿಧಿ ಹಾಗೂ ಕರ್ಣನ ಪ್ರೀತಿ ವಿಷಯ ಗೊತ್ತಾಗಿದೆ. ಎಲ್ಲರ ಸಮ್ಮುಖದಲ್ಲಿ ಆಕೆ ಕರ್ಣ ಹಾಗೂ ನಿಧಿ ಮದುವೆ ಮಾಡಿಸುತ್ತಾಳೆ. ಅಲ್ಲದೆ ತನ್ನ ಮಗುವಿಗೆ ತೇಜಸ್ ಕಾರಣ ಎಂಬುದನ್ನು ನಿಧಿ ಹೇಳುತ್ತಾಳೆ.

ಇದೀಗ ಕರ್ಣ ಮತ್ತು ನಿಧಿ ಮದುವೆಯ ಪ್ರೋಮೋ ರಿಲೀಸ್ ಆಗಿದೆ. ಆದರೆ, ಈ ಪ್ರೋಮೋ ನೋಡಿದ ವೀಕ್ಷಕರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.. ಏಕೆಂದರೆ ಕರ್ಣ ಹಾಗೂ ನಿಧಿ ಲವರ್ಸ್ ಎಂಬುದು ತುಂಬಾನೇ ದೊಡ್ಡ ತಿರುವು. ಇದರ ಜೊತೆಗೆ ನಿತ್ಯಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ತೇಜಸ್ ತಂದೆ ಅನ್ನೋ ಸತ್ಯ ಕೂಡಾ ಬಯಲಾಗಿದೆ. ಇಷ್ಟು ಬೇಗ ಸೀರಿಯಲ್‌ನಲ್ಲಿ ಎಲ್ಲವೂ ಸರಾಗವಾಗಿ ಸಾಗುತ್ತಿದೆ. ಇಷ್ಟು ಬೇಗ ಧಾರಾವಾಹಿಯಲ್ಲಿ ಆ ಟ್ವಿಸ್ಟ್ ತಂದಿದ್ದು ಯಾಕೆ ಎಂಬ ವಿಚಾರವನ್ನು ವೀಕ್ಷಕರು ಕೂಡಾ ಸಂದೇಶದ ಮೂಲಕ ಕೇಳುತ್ತಿದ್ದಾರೆ.

Sulekha