ನಿಧಿಗಾಗಿ ರೊಚ್ಚಿಗೆದ್ದ ಕರ್ಣ! – ಮದ್ವೆ ಬಗ್ಗೆ ಮೌನ ಮುರಿದ ಡಾಕ್ಷರ್!
ಕುತಂತ್ರಿಗಳ ಆಟ.. ನಿತ್ಯಾ ಮದ್ವೆ ಕತೆ?

ಇಷ್ಟು ದಿನ ಕರ್ಣಣನಿಗೆ ಆಗ್ತಿದ್ದ ಮೋಸ, ಅನ್ಯಾಯವನ್ನ ನಿಧಿ ತಡಿತಾ ಇದ್ಲು.. ಕುತಂತ್ರಿಗಳಿಂದ ಆತನನ್ನ ರಕ್ಷಣೆ ಮಾಡ್ತಾ ಬಂದಿದ್ಲು.. ನಿಧಿ ಕರ್ಣನ ಜೊತೆ ಇದ್ರೆ ತಮಗೆ ಕಷ್ಟ ಅಂತಾ ಗೊತ್ತಾಗ್ತಿದ್ದಂತೆ ನಯನತಾರಾ, ರಮೇಶ ಆಕೆಯ ವಿರುದ್ಧ ದೊಡ್ಡ ಸಂಚು ಮಾಡಿದ್ರು.. ಇದೀಗ ಕಡೆಗೂ ನಿಧಿಗೆ ಕರ್ಣ ಕಾವಲಾಗಿದ್ದಾನೆ.. ನಯನತಾರಾ, ರಮೇಶನ ಬಲೆಗೆ ಬೀಳ್ತಿದ್ದ ನಿಧಿಯನ್ನ ಕಾಪಾಡಿದ್ದಾನೆ.. ಅಷ್ಟೇ ಅಲ್ಲ.. ರಮೇಶನ ವಿರುದ್ಧವೇ ಕರ್ಣ ರೊಚ್ಚಿಗೆದ್ದಿದ್ದಾನೆ..
ಇದನ್ನೂ ಓದಿ: ಸರ್ಕಾರದ ತಪ್ಪಿಗೆ ಚಿನ್ನಸ್ವಾಮಿಗೆ ಶಿಕ್ಷೆ – ವಿಶ್ವಕಪ್ ಶಿಫ್ಟ್ ನಿಂದ ಎಷ್ಟೆಲ್ಲಾ ಲಾಸ್?
ಕರ್ಣ ಸೀರಿಯಲ್ ಸ್ಟೋರಿ ಕೂಡ ದಿನದಿಂದ ದಿನಕ್ಕೆ ರೋಚಕತೆ ಮೂಡಿಸಿದೆ. ಅತೀ ಕಡಿಮೆ ಸಮಯದಲ್ಲೇ ಡಾ ಕರ್ಣ ಕರುನಾಡಿನ ಜನರ ಮನಗೆದ್ದಾಗಿದೆ. ಕರ್ಣನನ್ನ ನಿಧಿ ಪ್ರೀತಿಸುತ್ತಿದ್ದಾಳೆ.. ಆತನಿಗೆ ಒಳಿತಾಗ್ಬೇಕು ಅಂತಾ ಬಯಸ್ತಾ ಇದ್ದಾಳೆ.. ಆತನಿಗೆ ಯಾರಾದ್ರೂ ತೊಂದ್ರೆ ಕೊಟ್ರೆ ಸಹಿಸೋದಿಲ್ಲ.. ಯಾರೇ ಆದ್ರೂ ಅವ್ರಿಗೆ ಶಿಕ್ಷೆಯಾಗೋ ತನಕ ಬಿಡೋದಿಲ್ಲ.. ಈಗಾಗಲೇ ಕರ್ಣನ ವಿರುದ್ಧ ಸಂಚು ರೂಪಿಸ್ತಿದ್ದ ಕುತಂತ್ರಿಗಳಿಗೆ ನಿಧಿ ಸರಿಯಾಗೇ ಪಾಠ ಕಲಿಸಿದ್ಲು.. ಅಷ್ಟೇ ಅಲ್ಲ.. ಕರ್ಣ ಸರ್‌ಗೆ ತೊಂದ್ರೆ ಕೊಟ್ಟವರು ಯಾರೇ ಆಗಿರ್ಲಿ.. ಅವರನ್ನ ಸುಮ್ನೆ ಬಿಡೋದಿಲ್ಲ ಅಂತಾ ವಾರ್ನ್ ಕೂಡ ಮಾಡಿದ್ಲು.. ಆದ್ರೆ ಕರ್ಣ ಹಾಗಲ್ಲ.. ಯಾರು ಎಷ್ಟೇ ತೊಂದ್ರೆ ಕೊಟ್ರು ನೋವನ್ನ ನುಂಗಿಕೊಂಡು ಸುಮ್ನೆ ಇರ್ತಿದ್ದ.. ಆದ್ರೀಗ ಮೊದಲ ಬಾರಿಗೆ ಕರ್ಣ ರೆಬಲ್ ಆಗಿದ್ದಾನೆ.. ಅದೂ ಕೂಡ ನಿಧಿ ಮದುವೆ ವಿಚಾರವಾಗಿ..
ಹೌದು.. ಕರ್ಣ ತುಂಬಾನೇ ಸಾಧು.. ಯಾರು ಎಷ್ಟೇ ತೊಂದ್ರೆ ಕೊಟ್ರು.. ನೋವು ಮಾಡಿದ್ರೂ ಅದನ್ನ ಸಹಿಸಿಕೊಂಡೇ ಇರ್ತಾನೆ.. ಯಾವುದೇ ಕಾರಣಕ್ಕೂ ಎದುರು ಮಾತನಾಡಲ್ಲ.. ಕರ್ಣ ಒಳ್ಳೆತನವನ್ನ ಎಲ್ಲರೂ ಮಿಸ್‌ಯೂಸ್ ಮಾಡಿಕೊಂಡಿದ್ದೇ ಹೆಚ್ಚು.. ಈ ಬಗ್ಗೆ ವೀಕ್ಷಕರು ಕೂಡ ಅಸಮಧಾನ ಹೊರ ಹಾಕಿದ್ರು.. ಕರ್ಣನನ್ನ ಒಳ್ಳೆಯವನು ಅಂತಾ ತೋರಿಸೋದು ಓಕೆ.. ಆದ್ರೆ ದಡ್ಡನ ತರ ತೋರಿಸ್ಬೇಡಿ ಅಂತಾ ಕಾಮೆಂಟ್ ಮಾಡಿದ್ರು.. ಆದ್ರೀಗ ಕರ್ಣ ಮೊದಲ ಬಾರಿಗೆ ರೊಚ್ಚಿಗೆದ್ದಿದ್ದಾನೆ.. ಅದೂ ಕೂಡ ನಿಧಿ ವಿಚಾರವಾಗಿ..
ಹೌದು.. ಕರ್ಣನ ವಿರುದ್ಧ ಮನೆಯವರೇ ಇಷ್ಟು ದಿನ ಪಿತೂರಿ ನಡೆಸ್ತಾ ಇದ್ರು.. ಆತನ ಆಸ್ತಿ ಹೊಡಿಬೇಕು.. ಹೆಸ್ರು ಹಾಳು ಮಾಡ್ಬೇಕು ಅಂತಾ ರಮೇಶ, ನಯನತಾರಾ ಹೊಂಚು ಹಾಕಿ ಕಾಯ್ತಾ ಇದ್ದಾರೆ.. ಈಗಾಗಲೇ ರಮೇಶ, ನಯನತಾರಾ ಸಾಕಷ್ಟು ಜನರಿಗೆ ವಂಚನೆ ಮಾಡಿದ್ರು.. ಇದನ್ನ ನಿಧಿ ಕರ್ಣನ ಮುಂದೆ ಬಯಲು ಮಾಡಿದ್ಲು.. ಅದಾದ್ಮೇಲೆ ಈಗ ಕುತಂತ್ರಿಗಳು ನಿಧಿ ವಿರುದ್ಧ ಸಮರ ಸಾರಿದ್ದಾರೆ.. ಇದ್ರ ಮೊದಲ ಹಂತ ನಿಧಿ ಮದುವೆ.. ನಿಧಿ ಕರ್ಣನ ಜೊತೆ ಇದ್ರೆ ತಮಗೆ ಆಪತ್ತು ಎಂದು ನಯನತಾರ ನಿಧಿಗೆ ಮದುವೆ ಮಾಡಿಸ್ಬೇಕು ಅಂತಾ ಪ್ಲ್ಯಾನ್ ಮಾಡಿದ್ಲು.. ನಿಧಿ ಅಜ್ಜಿ ಜೊತೆ ಮಾತನಾಡಿ, ಹುಡುಗನ ಮನೆಯವರನ್ನ ಕೂಡ ಕರೆಸಿ, ಹುಡುಗ ನೋಡೋ ಶಾಸ್ತ್ರ ಮಾಡಿಸಿದ್ಲು.. ಆದ್ರೆ ನಿಧಿ ಅಲ್ಲೂ ಕೂಡ ಕುತಂತ್ರಿಗಳಿಗೆ ಚಮಕ್ ಕೊಟ್ಲು.. ಈ ಮದುವೆ ನನಗೆ ಓಕೆ. ನಾನು ಮದುವೆ ಆಗಿ ಹೋದ್ರೆ ಅಜ್ಜಿ ಒಬ್ರೇ ಇರ್ತಾರೆ.. ಅದ್ಕೆ ನೀವು ಕೆಲಸ ಬಿಟ್ಟು ಬಂದ್ರೆ ನಾನು, ನೀವು ಒಟ್ಟಿಗೆ ಇರ್ಬೋದು ಅಂತ ಹೇಳಿದ್ದಾಳೆ. ಅಷ್ಟೊತ್ತಿಗೆ ಆ ಹುಡುಗ ನಿಧಿಗೆ ಹೊಡೆಯಲು ಮುಂದಾಗಿದ್ದಾನೆ.. ಆಗ ಕರ್ಣ ಬಂದು ತಡೆದು, ಕೈ ಎತ್ತೋ ಅಧಿಕಾರ ಕೊಟ್ಟೋರು ಯಾರು ಎಂದು ಪ್ರಶ್ನಿಸಿದ್ದಾನೆ? ಇಂತ ಸಂಬಂಧ ಎಷ್ಟು ಹುಡುಕಿದ್ರೂ ಸಿಗಲ್ಲ ಎಂದು ನಯನತಾರ ಹೇಳಿದ್ದಕ್ಕೆ.. ಇಂಥ ಸಂಬಂಧ ಯಾರಿಗೂ ಸಿಗೋದು ಬೇಡ ಎಂದಿದ್ದಾನೆ.. ಅಷ್ಟೊತ್ತಿಗೆ ರಮೇಶ ಈ ಮದ್ವೆ ನಿಧಿ ಒಪ್ಪಿಕೊಳ್ಳಬೇಕು ಎಂದಿದ್ದಕ್ಕೆ ನಿಧಿ ಲೈಫ್‌ನಲ್ಲಿ ಏನ್ ಮಾಡ್ಬೇಕು ಅನ್ನೋ ಅಧಿಕಾರ ನಿಮ್ಗೂ ಇಲ್ಲ.. ನಿಮ್ಮ ಮಾತು ಕೇಳ್ಬೇಕು ಅನ್ನೋ ಅವಶ್ಯಕತೆ ಅವರಿಗೂ ಇಲ್ಲ ಅಲ್ವಾ ಅಂತಾ ಕರ್ಣ ಜೋರಾಗಿ ಹೇಳಿದ್ದಾನೆ.. ಇದೀಗ ಕರ್ಣ ರೆಬಲ್ ಆಗಿದ್ದನ್ನ ನೋಡಿ ಸೀರಿಯಲ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.. ಇದು ಆಕ್ಷ್ಯುವಲೀ ಚೆನ್ನಾಗಿರೋದು.. ಆದ್ರೆ ನಿಧಿ ಪರವಾಗಿ ಮಾತನಾಡಿದ ಕರ್ಣನಿಗೆ ಕುತಂತ್ರಿಗಳು ತೊಂದ್ರೆ ಕೊಡೋದು ಪಕ್ಕಾ ಅಂತ ವೀಕ್ಷಕರು ಹೇಳಿದ್ದಾರೆ..
ಮತ್ತೊಂದ್ಕಡೆ ನಿತ್ಯ ಮದುವೆ ಕತೆ ಏನು ಅನ್ನೋ ಪ್ರಶ್ನೆ ಕಾಡ್ತಾ ಇದೆ.. ತೇಜಸ್ ಮನೆಯವರಿಗೆ ಈ ಮದುವೆ ಇಷ್ಟ ಇಲ್ಲ.. ನಿತ್ಯ ಮದುವೆ ಇನ್ನೂ ಒಪ್ಪಿಗೆ ಸೂಚಿಸಿಲ್ಲ.. ಇದು ಎಲ್ಲರ ಮುಂದೆ ಬಯಲಾಗಿದೆ.. ನಿಶ್ಚಿತಾರ್ಥ ಏನೋ ನಡೆದಿದೆ. ಮದುವೆ ಕತೆ ಏನು ಅನ್ನೋ ಪ್ರಶ್ನೆ ಮೂಡಿದೆ.. ನಿತ್ಯಾ ಮದುವೆಯನ್ನ ಕರ್ಣ ಮಾಡಿಸ್ತಾನಾ ಅಥವಾ ಅರ್ಧಕ್ಕೆ ಮದುವೆ ನಿಲ್ಲುತ್ತಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡ್ತಿದೆ.. ಒಟ್ಟಿನಲ್ಲಿ ಮುಂಬರುವ ಎಪಿಸೋಪ್ ಸಾಕಷ್ಟು ಟ್ವಿಸ್ಟ್ ಆಂಡ್ ಟರ್ನ್‌ನಿಂದ ಕೂಡಿದೆ..

ನೋಡಿರಿ

