ಕರ್ಣನಿಂದ ಭವ್ಯಾ ಔಟ್‌? : ಫ್ಯಾನ್ಸ್‌ ಡಿಮ್ಯಾಂಡ್‌.. ಹೊಸ ನಾಯಕಿ? – ಸೀರಿಯಲ್‌ ಮುಂದೂಡಿಕೆಗೆ ಇದೇ ಕಾರಣ?

ಕರ್ಣನಿಂದ ಭವ್ಯಾ ಔಟ್‌? : ಫ್ಯಾನ್ಸ್‌ ಡಿಮ್ಯಾಂಡ್‌.. ಹೊಸ ನಾಯಕಿ? – ಸೀರಿಯಲ್‌ ಮುಂದೂಡಿಕೆಗೆ ಇದೇ ಕಾರಣ?

ಬಹು ನಿರೀಕ್ಷಿತ ಕರ್ಣ ಸೀರಿಯಲ್‌ ನಿನ್ನೆ ಟೆಲಿಕಾಸ್ಟ್‌ ಆಗ್ಬೇಕಿತ್ತು. ಸೀರಿಯಲ್‌ ಪ್ರೇಮಿಗಳು ಕೂಡ ಕರ್ಣನನ್ನ ತೆರೆಮೇಲೆ ನೋಡಲು ಕಾಯ್ತಾ ಇದ್ರು.. ಆದ್ರೆ ಏಕಾಏಕಿ ಸೀರಿಯಲ್‌  ಅನ್ನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ. ಅಷ್ಟೇ ಅಲ್ಲ ಕೆಲ ಪ್ರೋಮೋ ಕೂಡ ಡಿಲೀಟ್‌ ಆಗಿದೆ.

ಇದನ್ನೂ ಓದಿ: ICUನಲ್ಲಿ ತಾಯಿ.. ENGಗೆ ಗಂಭೀರ್ – ತಂಡಕ್ಕಾಗಿ ಗೌತಮ್ ಅತಿದೊಡ್ಡ ತ್ಯಾಗ

ಕನ್ನಡತಿ ಸೀರಿಯಲ್‌ ಖ್ಯಾತಿಯ ಕಿರಣ್‌ ರಾಜ್‌ ಕರ್ಣ ಸೀರಿಯಲ್ ನಲ್ಲಿ ಲೀಡ್‌ ರೋಲ್‌ ಮಾಡ್ತಿದ್ದಾರೆ.. ಮೊದಲ ಪ್ರೋಮೋದಲ್ಲೇ ಆಗ್ತಿದ್ದಂತೆ ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿತು. ಗೈನಕಾಲಜಿಸ್ಟ್‌ ಆಗಿ ಕಿರಣ್‌ ರಾಜ್‌ ಕಾಣಿಸಿಕೊಂಡಿದ್ದಾರೆ. ಮೊದಲ ಪ್ರೋಮೋದಲ್ಲೇ ಕರ್ಣನನ್ನ ನೋಡಿ ಸೀರಿಯಲ್‌ ಫ್ಯಾನ್ಸ್‌ ಖುಷಿಪಟ್ಟಿದ್ರು.. ಅಂದಿನಿಂದ ಕರ್ಣ ನ ಆಗಮನಕ್ಕಾಗಿ ಸೀರಿಯಲ್‌ ಫ್ಯಾನ್ಸ್‌ ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಜೂನ್‌ 16 ರಿಂದ ರಾತ್ರಿ 8ಕ್ಕೆ ‘ಕರ್ಣ’ ಬರಲಿದ್ದಾನೆ ಅಂತ ಅನೌನ್ಸ್ ಆದ್ಮೇಲೆ ವೀಕ್ಷಕರು ಈ ದಿನಕ್ಕಾಗಿ ವೇಯ್ಟ್ ಮಾಡುತ್ತಿದ್ದರು. ಆದ್ರೀಗ ವೀಕ್ಷಕರಿಗೆ ನಿರಾಸೆಯಾಗಿದೆ.. ಯಾಕಂದ್ರೆ, ಕರ್ಣ ಸೀರಿಯಲ್‌ ಪ್ರಸಾರದ ದಿನಾಂಕವನ್ನ ಮುಂದೂಡಿಕೆ ಮಾಡಲಾಗಿದೆ. ಅಷ್ಟೇ ಅಲ್ಲ ಕೆಲ ಪ್ರೋಮೋ ಕೂಡ ಡಿಲೀಟ್‌ ಮಾಡಲಾಗಿದೆ.. ಹಾಗಾದ್ರೆ ಸೀರಿಯಲ್‌ ಹೀರೋಯಿನ್‌ ಚೇಂಜ್‌ ಆಗ್ತಾರಾ ಅನ್ನೋ ಕುತೂಹಲ ಕೂಡ ವೀಕ್ಷಕರನ್ನ ಕಾಡ್ತಿದೆ.

ಹೌದು.. ಕರ್ಣ ಸೀರಿಯಲ್‌ ನಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಲೀಡ್‌ ರೋಲ್‌ ನಲ್ಲಿ ಕಾಣಿಸಿಕೊಂಡಿದ್ರು. ವಾಹಿನಿ ಕೂಡ ಇದ್ರ ಪ್ರೋಮೋ ರಿಲೀಸ್‌ ಮಾಡಿತ್ತು. ಆದ್ರೆ ವೀಕ್ಷಕರು ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ರು.. ಭವ್ಯಾ ಹಾಗೂ ನಮ್ರತಾ ಕರ್ಣನಿಗೆ ಸೂಟ್‌ ಆಗಲ್ಲ.. ಭವ್ಯಾ ಗೌಡ ಓವರ್‌ ಆಕ್ಟಿಂಗ್‌ ಇಷ್ಟ ಆಗಲ್ಲ.. ಸೋ ಆ ನಟಿಯರು ಕರ್ಣನಿಗೆ ಜೋಡಿ ಆಗೋದು ಬೇಡ ಎಂದು ಸೀರಿಯಲ್‌ ಫ್ಯಾನ್ಸ್‌ ಹೇಳ್ತಾ ಬಂದಿದ್ರು.. ಬಳಿಕ ಸೀರಿಯಲ್‌ ನಾಯಕಿಯನ್ನ ಚೇಂಜ್‌ ಮಾಡಲಾಗಿದೆ ಅನ್ನೋ ಸುದ್ದಿಯೂ ವೈರಲ್‌ ಆಗಿತ್ತು.. ಇದ್ರ ಬೆನ್ನಲ್ಲೇ ಸೀರಿಯಲ್‌ ಅನ್ನ ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ಜೀಕನ್ನಡ ವಾಹಿನಿ ಅಪ್‌ಡೇಟ್‌ ನೀಡಿ, ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಜೀಕನ್ನಡ ವಾಹಿನಿ, ಜೂನ್‌ 16.. ಕನ್ನಡ ಕಿರುತೆರೆ ಪ್ರಿಯರು ಈ ದಿನಕ್ಕಾಗಿ ಕಾಯುತ್ತಿದ್ದರು. ಯಾಕಂದ್ರೆ, ಇವತ್ತು ರಾತ್ರಿ 8 ಗಂಟೆಯಿಂದ ಬಹುನಿರೀಕ್ಷಿತ ಧಾರಾವಾಹಿ ಕರ್ಣ  ಪ್ರಸಾರವಾಗಬೇಕಿತ್ತು. ಆದ್ರೀಗ ನೋಡಿದರೆ ಕರ್ಣ  ಸೀರಿಯಲ್‌ ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗಿದೆ. ಇಡೀ ಕರ್ನಾಟಕ ಕಾಯ್ತಾ ಇದೆ ಅನ್ನೋದು ಗೊತ್ತು. ಕೊಟ್ಟ ಮಾತಿನಂತೆ ರಾತ್ರಿ 8ಕ್ಕೆ ‘ಕರ್ಣ’ ಬಂದೇ ಬರ್ತಾನೆ! ಶೀಘ್ರದಲ್ಲೇ!’’ ಎಂದು  ಪೋಸ್ಟ್‌ ಮಾಡಿದೆ. ಅಷ್ಟೇ ಅಲ್ಲ ಕೆಲ ಪ್ರೋಮೋ ಕೂಡ ಸೋಶಿಯಲ್‌ ಮೀಡಿಯಾ ಪೇಜ್‌ ನಿಂದ ಡಿಲೀಟ್‌ ಮಾಡಲಾಗಿದೆ. ಮೊದಲ ಪ್ರೋಮೋ ಮಾತ್ರ ಇದೆ. ಆದ್ರೆ ಈ ದಿಢೀರ್ ಬದಲಾವಣೆಗೆ  ಕಾರಣ ಖಾಸಗಿ ವಾಹಿನಿಯ ಲೀಗಲ್‌ ನೋಟಿಸ್.‌ ಹೌದು ಭವ್ಯಾ ಗೌಡ ಬಿಗ್‌ ಬಾಸ್‌ ಸೀಸನ್‌ 11 ರಲ್ಲಿ ಸ್ಪರ್ಧಿಸಿದ್ರು. ಈ ಶೋ ಆದ ಬಳಿಕ 6 ತಿಂಗಳು ಬೇರೆ ವಾಹಿನಿಯಲ್ಲಿ ಕೆಲಸ ಮಾಡುವಂತಿಲ್ಲ ಎಂಬ ರೂಲ್ಸ್‌ ಇದ್ಯಂತೆ ಹೀಗಾಗಿ ಭವ್ಯ ಗೌಡ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಸೀರಿಯಲ್‌ ಮತ್ತೆ ಯಾವಾಗ ಬರುತ್ತೆ ಅನ್ನೋದ್ರ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ಸಿಗ್ಬೋದು.

Shwetha M