ಕರ್ಣಗೆ ಭವ್ಯಾಗೌಡ, ನಮೃತಾ ಜೋಡಿ.. BBK ಬ್ಯೂಟಿಗಳಿಗೆ ಬಂಪರ್‌ ಚಾನ್ಸ್‌
ಹೊಸ ಸೀರಿಯಲ್‌ ಟ್ರಯಾಂಗಲ್‌ ಲವ್!‌

ಕರ್ಣಗೆ ಭವ್ಯಾಗೌಡ, ನಮೃತಾ ಜೋಡಿ.. BBK ಬ್ಯೂಟಿಗಳಿಗೆ ಬಂಪರ್‌ ಚಾನ್ಸ್‌ಹೊಸ ಸೀರಿಯಲ್‌ ಟ್ರಯಾಂಗಲ್‌ ಲವ್!‌

ಜೀಕನ್ನಡದಲ್ಲಿ ಈಗ ಹೊಸ ಸೀರಿಯಲ್‌ ಕರ್ಣ ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಮೊದಲ ಪ್ರೋಮೋದಲ್ಲೇ ವೀಕ್ಷಕರ ಗಮನ ಸೆಳೆದ ಕರ್ಣನಿಗೆ ಯಾರು ಜೋಡಿಯಾಗ್ತಾರೆ?  ಯಾರು ನಾಯಕಿಯಾಗಿ ಆಯ್ಕೆ ಆಗ್ತಾರೆ ಅನ್ನೋ ಕುತೂಹಲ ವೀಕ್ಷಕರನ್ನ ಕಾಡ್ತಿತ್ತು.. ಇದೀಗ ಕೊನೆಗೂ ಈ ವಿಚಾರ ರಿವೀಲ್‌ ಆಗಿದೆ. ಕರ್ಣ ಸೀರಿಯಲ್‌ ನಲ್ಲಿ ಒಬ್ಬರಲ್ಲ.. ಇಬ್ಬರು ಹಿರೋಯಿನ್ಸ್. ಅದ್ರಲ್ಲಿ ಒಬ್ರು ಭವ್ಯ ಗೌಡ ಆಗಿದ್ದಾರೆ. ಇದೀಗ ಭವ್ಯ ಗೌಡ ಶೂಟಿಂಗ್‌ ನಲ್ಲಿ ಭಾಗಿಯಾಗಿರೋ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಾಗಾದ್ರೆ ಕರ್ಣನಿಗೆ ಜೋಡಿಯಾಗಲಿರೋ ಮತ್ತೊಬ್ಬ ನಟಿ ಯಾರು? ಟ್ರಯಾಂಗಲ್‌ ಲವ್‌ ಸ್ಟೋರಿಯಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಇಂದೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ! – ಫಲಿತಾಂಶ ಚೆಕ್‌ ಮಾಡೋದು ಹೇಗೆ?

ಕನ್ನಡತಿ ಸೀರಿಯಲ್​ ಮೂಲಕ ಸ್ಟಾರ್​ ಆಗಿ ಮಿಂಚಿದ ನಟ ಕಿರಣ್​ ರಾಜ್  ದೊಡ್ಡ ಮಟ್ಟದಲ್ಲಿ ಸದ್ದು ಮಾಡೋದಕ್ಕೆ ಸಜ್ಜಾಗಿದ್ದಾರೆ​. ಸಾಲು ಸಾಲು ಸಿನಿಮಾಗಳ ಆಫರ್​ ನಡುವೆಯೂ ಡಾಕ್ಟರ್​ ಕರ್ಣನ ಪಾತ್ರದ ಮೂಲಕ ಮತ್ತೆ ಸೀರಿಯಲ್​ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಕರ್ಣ ಸೀರಿಯಲ್‌ನ ಪ್ರೋಮೋ ರಿಲೀಸ್‌ ಆಗಿದ್ದು, ವೀಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಪ್ರೋಮೋ ರಿಲೀಸ್‌ ಆಗ್ತಿದ್ದಂತೆ ನಾಯಕಿ ಯಾರು? ಈ ಸೀರಿಯಲ್‌ ಗೆ ರಂಜಿನಿ ರಾಘವನ್‌ ನಾಯಕಿ ಆಗ್ಲಿ ಅಂತಾ ಅದೆಷ್ಟೋ ಫ್ಯಾನ್ಸ್‌ ಆಸೆ ಪಟ್ಟಿದ್ರು. ಇನ್ನೂ ಕೆಲವರು ಮೋಕ್ಷಿತಾ ಅಥವಾ ಭವ್ಯಗೌಡ ಬರಲಿ ಅಂತ ಹೇಳಿದ್ರು.. ಇದೀಗ ಕರ್ಣನ ಹಿರೋಯಿನ್‌ ಯಾರು ಅಂತಾ ರಿವೀಲ್‌ ಆಗಿದೆ. ಕರ್ಣನಿಗೆ ಜೋಡಿಯಾಗಿ ಒಬ್ಬರಲ್ಲ, ಇಬ್ಬರನ್ನ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ.

ಕರ್ಣನಿಗೆ ಜೋಡಿಯಾಗಿ ಕಲರ್ಸ್ ಕನ್ನಡದಲ್ಲಿ ಈ ಮೊದಲು ಗೀತಾ  ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ಭವ್ಯಾ ಗೌಡ ಕರ್ಣ ಧಾರಾವಾಹಿ ನಾಯಕಿ ಎಂದು ಹೇಳಲಾಗ್ತಿದೆ.. ಈಗಾಗಲೇ ಭವ್ಯ ಶೂಟಿಂಗ್ ನಲ್ಲಿ ಭಾಗಿಯಾಗಿರೋ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  ಈ ವಿಡಿಯೋದಲ್ಲಿ  ಭವ್ಯಾ ಗೌಡ ನಟಿಸುತ್ತಿರುವುದು ಇದೆ.  ಮತ್ತೊಂದು ವಿಡಿಯೋದಲ್ಲಿ ಭವ್ಯಾ ಗೌಡ ಮಳೆಯಲ್ಲಿ ನೆನೆದು ಡ್ಯಾನ್ಸ್​ ಮಾಡುತ್ತಾ ಇರುತ್ತಾರೆ. ಆಗ ಆಕಸ್ಮಿಕವಾಗಿ ಕಾಲು ಜಾರಿ ಬೀಳುವಷ್ಟರಲ್ಲಿ ಕಿರಣ್​ ರಾಜ್​ ಅಂದ್ರೆ ಕರ್ಣನ ಎಂಟ್ರಿ ಆಗುತ್ತೆ. ಹೀಗೆ ಕಿರಣ್​ ರಾಜ್​ ಹಾಗೂ ಭವ್ಯಾ ಗೌಡ ಮುಖಾಮುಖಿಯಾಗುತ್ತದೆ. ಕರ್ಣ ಸೀರಿಯಲ್​ನಲ್ಲಿ ಭವ್ಯಾ ಗೌಡ ಮೆಡಿಕಲ್ ಸ್ಟೂಡೆಂಟ್ ಆಗಿತ್ತಾರೆ. ಹಳದಿ ಬಣ್ಣದ ಚೂಡಿದಾರ್​ನಲ್ಲಿ ಭವ್ಯಾ ಗೌಡ ಕಾಣಿಸಿಕೊಂಡಿದ್ದಾರೆ. ಇದೇ ಕ್ಲಿಪ್​ ನೋಡಿದ ಭವ್ಯಾ ಗೌಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಇನ್ನು ಕರ್ಣನಿಗೆ ಮತ್ತೊಬ್ಬ ಜೋಡಿಯಾಗಿ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ, ನಾಗಿಣಿ 2 ಸೀರಿಯಲ್‌ ನಟಿ ನಮೃತಾ ಗೌಡ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. ನಮೃತಾ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ. ಯಾವಾಗ ಸೀರಿಯಲ್‌ ಗೆ ಎಂಟ್ರಿಕೊಡಲಿದ್ದಾರೆ ಅನ್ನೋ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.. ಕರ್ಣ ಧಾರಾವಾಹಿಯಲ್ಲಿ ಕಿರಣ್ ರಾಜ್ ಗೈನಕಾಲಜಿಸ್ಟ್ ಆಗಿ ನಟಿಸಲಿದ್ದಾರೆ. ಇದೀಗ ಇಬ್ಬರು ಹಿರೋಯಿನ್ಸ್‌ ಅನ್ನೋ ವಿಚಾರ ರಿವೀಲ್‌ ಆಗ್ತಿದ್ದಂತೆ, ಇದೊಂದು ಟ್ರಯಾಂಗಲ್‌ ಲವ್‌ ಸ್ಟೋರಿಯಾ ಅನ್ನೋ ಕುತೂಹಲ ಮೂಡಿದೆ.

ಇನ್ನು ಈ ಧಾರಾವಾಹಿ ಎಂಟ್ರಿ ಆಗೋ ಹೊತ್ತಿಗೆ ಯಾವ ಸೀರಿಯಲ್‌ ಎಂಟ್ರಿ ಕೊಡುತ್ತೆ? ಹಾಗೇ ಯಾವ ಧಾರಾವಾಹಿ ಅಂತ್ಯ ಕಾಣುತ್ತೆ ಎನ್ನುವ ಚರ್ಚೆಗಳು ಜೋರಾಗಿವೆ. ಸದ್ಯಕ್ಕೆ ಜೀ ಕನ್ನಡದಲ್ಲಿ ಯಾವ ಸೀರಿಯಲ್‌ ಮುಕ್ತಾಯ ಆಗಲ್ಲ ಎಂದು ಹೇಳಲಾಗ್ತಿದೆ. ಲಕ್ಷ್ಮೀ ನಿವಾಸ  ಧಾರಾವಾಹಿಯು ಈಗ ಒಂದು ಗಂಟೆ ಪ್ರಸಾರ ಕಾಣುತ್ತಿದೆ. ಈಗ ಇದನ್ನು ಅರ್ಧ ಗಂಟೆಗೆ ಇಳಿಸಲು ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ. ಹೀಗಾಗಿ 8 ಗಂಟೆಗೆ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರಸಾರ ಕಂಡರೆ, ಇನ್ನರ್ಧ ಗಂಟೆಗೆ ‘ಕರ್ಣ’ ಧಾರಾವಾಹಿ ಪ್ರಸಾರ ಕಾಣಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Shwetha M

Leave a Reply

Your email address will not be published. Required fields are marked *