ಅನಭಿಶಕ್ತ ದೊರೆ AUS ಅಧಃಪತನ – ಟ್ರೋಫಿ ಮೇಲೆ ಕಾಲಿಟ್ಟಿದ್ದೇ ತಪ್ಪಾಯ್ತಾ?
2023 To 2026.. ಅದೆಷ್ಟು ಸೋಲು?

ಆಸ್ಟ್ರೇಲಿಯಾ.. ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತಿನ ಅನಭಿಷಕ್ತ ದೊರೆ. ಅದ್ರಲ್ಲೂ ಐಸಿಸಿ ಟೂರ್ನಿಗಳು ಅಂತಾ ಬಂದಾಗ ಕಾಂಗರೂಗಳನ್ನ ಕಟ್ಟಿ ಹಾಕೋದೇ ಕಷ್ಟ ಇತ್ತು. ಆದ್ರೆ ಕಳೆದ 2 ವರ್ಷಗಳಿಂದ ಆಸೀಸ್ ಆಟಗಾರರ ನಸೀಬೇ ಬದ್ಲಾಗಿದೆ. ಬಿಗ್ ಈವೆಂಟ್ಸ್ ಅಂತಾ ಬಂದಾಗ ಆಸ್ಟ್ರೇಲಿಯಾ ಪಲ್ಟಿ ಹೊಡೀತಿದೆ. ಈ ಬಾರಿಯ ಟಿ-20 ವಿಶ್ವಕಪ್ನಲ್ಲಿ ಗ್ರೂಪ್ ಸ್ಟೇಜ್ನಲ್ಲೇ ಹೊರ ಬಿದ್ದಿದ್ದಾರೆ. 2026ರ ಟಿ-20 ವಿಶ್ವಕಪ್ನಲ್ಲಿ ಈಗ ರಣರೋಚಕ ಘಟ್ಟದಲ್ಲಿದೆ. ಆಲ್ರೆಡಿ ಸೂಪರ್ 8 ಪಂದ್ಯಗಳ ಲೆಕ್ಕಾಚಾರ ಸ್ಟಾರ್ಟ್ ಆಗಿದೆ. ಆದ್ರೆ ಬಿ ಗ್ರೂಪ್ನಲ್ಲಿರೋ ಆಸ್ಟ್ರೇಲಿಯಾ ಸೂಪರ್ 8 ಸುತ್ತಿಗೂ ಕಾಲಿಡದೇ ಟೂರ್ನಿಯಿಂದ ಹೊರ ಬಿದ್ದಿರೋದೇ ಎಲ್ಲರ ಅಚ್ಚರಿಗೂ ಕಾರಣವಾಗಿದೆ. ಟಿ-20 ವಿಶ್ವಕಪ್ ಜರ್ನಿಯಲ್ಲಿ ಒನ್ ಆಫ್ ದಿ ಮೋಸ್ಟ್ ಡೇಂಜರಸ್ ಟೀಂ ಆಗಿದ್ದ ಆಸೀಸ್ ಪಡೆ ಈ ಸಲ ಗ್ರೂಪ್ ಸ್ಟೇಜ್ನಲ್ಲೇ ಜರ್ನಿ ಮುಗಿಸಿದೆ.
ಇದನ್ನೂ ಓದಿ : 15 ವರ್ಷಗಳ ಬಳಿಕ ಕಾಂಗರೂ ಪಡೆಗೆ ಇದೆಂಥಾ ಅವಮಾನ? – ಮೊದಲ ಸುತ್ತಿನಲ್ಲೇ ಹೊರಬಿದ್ದ ಆಸ್ಟ್ರೇಲಿಯಾ
ಸೂಪರ್ 8ಗೆ ಕಾಲಿಟ್ಟ ಜಿಂಬಾಬ್ವೆ.. ಆಸೀಸ್ ಔಟ್!
ಟಿ20 ವಿಶ್ವಕಪ್ ಇತಿಹಾಸವನ್ನ ಕೆದಕಿದ್ರೆ ಆಸ್ಟ್ರೇಲಿಯಾ ಟಫೆಸ್ಟ್ ಟೀಂ. ಹತ್ತೂ ಆವೃತ್ತಿಗಳಲ್ಲಿ 2 ಬಾರಿ ಸಲ ಮಾತ್ರ ಗ್ರೂಪ್ ಸ್ಟೇಜ್ನಿಂದ ಹೊರಬಿದ್ದಿದೆ. 2009 ರ ವಿಶ್ವಕಪ್ನಲ್ಲಿ ಆಸೀಸ್ ಪಡೆ ಎರಡೂ ಪಂದ್ಯಗಳಲ್ಲೂ ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ಎರಡನೇ ಸುತ್ತಿಗೇರದೇ ಔಟ್ ಆಗಿದೆ. ಈ ಸೀಸನ್ನಲ್ಲಿ 3 ಪಂದ್ಯಗಳನ್ನ ಆಡಿದ್ದ ಆಸೀಸ್ ಪಡೆ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆದ್ದಿತ್ತು. ಆದ್ರೆ ಆ ನಂತ್ರ ಝಿಂಬಾಬ್ವೆ ಹಾಗೂ ಶ್ರೀಲಂಕಾ ವಿರುದ್ಧ ಸೋಲು ಕಂಡಿತ್ತು. ಅಟ್ಲೀಸ್ಟ್ ಕೊನೇ ಮ್ಯಾಚ್ನಾದ್ರೂ ಗೆದ್ದು ಸೂಪರ್8ಗೆ ಹೋಗೋಣ ಅನ್ಕೊಂಡ್ರೆ ಜಿಂಬಾಬ್ವೆ ತಂಡ ಶಾಕ್ ಕೊಟ್ಟಿದೆ. ಮಂಗಳವಾರ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದ ವಾಶ್ಔಟ್ ಆಗಿತ್ತು. ಹೀಗಾಗಿ ಎರಡೂ ತಂಡಗಳಿಗೆ ಒಂದೊಂದು ಅಂಕ ನೀಡ್ಲಾಗಿತ್ತು. ಮೊದಲೇ 2 ಪಂದ್ಯ ಗೆದ್ದಿದ್ದ ಜಿಂಬಾಬ್ವೆ ಟೋಟಲ್ 5 ಅಂಕಗಳೊಂದಿಗೆ ಸೂಪರ್ 8ಗೆ ಲಗ್ಗೆ ಇಟ್ಟಿದೆ. ಅತ್ತ ಆಸೀಸ್ಗೆ ಇದ್ದ ಆಸೆಯೂ ಕೊನೆಗೊಂಡಿದೆ. ಆಕ್ಚುಲಿ ವಿಶ್ವಕ್ರಿಕೆಟ್ನಲ್ಲಿ ಅದೂ ಐಸಿಸಿ ಟೂರ್ನಿಗಳಂತ ಬಂದಾಗ ಟ್ರೋಫಿ ಗೆಲ್ಲೋದ್ರಲ್ಲಿ ಯಾವಾಗ್ಲೂ ಫಸ್ಟ್ ಪ್ಲೇಸಲ್ಲೇ ಇದ್ದ ಆಸ್ಟ್ರೇಲಿಯಾಗೆ ಕಳೆದ 2 ವರ್ಷಗಳಲ್ಲಿ ಯಾವುದೂ ಅಂದುಕೊಂಡಂತೆ ಆಗ್ತಿಲ್ಲ. ಅದಕ್ಕೆ ಕಾರಣ ಏನಂದ್ರೆ 2023ರ ವಿಶ್ವಕಪ್ ಫೈನಲ್ ಬಳಿಕ ನಡೆದ ಅದೊಂದು ಘಟನೆ ಅನ್ನೋ ಚರ್ಚೆಗಳು ನಡೀತಿವೆ.
ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿದ್ದೇ ಅಧಃಪತನಕ್ಕೆ ಕಾರಣನಾ?
2023ರ ಏಕದಿನ ವಿಶ್ವಕಪ್.. ಇದನ್ನಂತೂ ಭಾರತೀಯರು ಮರೆಯೋಕೆ ಸಾಧ್ಯನೇ ಇಲ್ಲ. ಯಾಕಂದ್ರೆ ಭಾರತದಲ್ಲೇ ನಡೆದ ಆ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಭಾರತ ಅಜೇಯವಾಗಿ ಫೈನಲ್ಗೆ ಕಾಲಿಟ್ಟಿತ್ತು. ಟ್ರೋಫಿ ಗೆಲ್ಲೋಕೆ ಇನ್ನೊಂದೇ ಹೆಜ್ಜೆ ಬಾಕಿ. ಬಟ್ ಬ್ಯಾಡ್ಲಕ್ ಅಂದ್ರೆ ಆಸ್ಟ್ರೇಲಿಯಾ ತಂಡ ಭಾರತವನ್ನ ಸೋಲಿಸಿ ಟ್ರೋಫಿಯನ್ನ ಗೆದ್ದು ಬೀಗಿದ್ರು. ಇಷ್ಟೇ ಆಗಿದ್ರೆ ಏನೂ ಆಗ್ತಿರಲಿಲ್ಲ. ಆದ್ರೆ ಕಪ್ ಗೆದ್ದವ್ರ ಸೊಕ್ಕು ಅದೆಷ್ಟರ ಮಟ್ಟಿಗಿತ್ತು ಅಂದ್ರೆ ಟ್ರೋಫಿ ಮೇಲೆ ಕಾಲಿಟ್ಟು ದರ್ಪ ಮೆರೆದಿದ್ರು. ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್ ಟ್ರೋಫಿ ಗೆದ್ದ ಖುಷಿಯಲ್ಲಿ ಅದೇ ಟ್ರೋಫಿ ಮೇಲೆ ಕಾಲಿಟ್ಟು ಫೋಟೋಗೆ ಪೋಸ್ ಕೊಟ್ಟಿದ್ದ. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ವು. ಭಾರತೀಯರಂತೂ ಕುದ್ದು ಹೋಗಿದ್ರು. ನಾವೇನಾದ್ರೂ ಕಪ್ ಗೆದ್ದಿದ್ರೆ ದೇವರ ರೀತಿಯಲ್ಲಿ ಪೂಜೆ ಮಾಡ್ತಿದ್ವಿ. ಇವ್ರು ಕಾಲ ಕೆಳಗೆ ಇಟ್ಕೊಂಡಿದ್ದಾರೆ. ಇದು ದುರಹಂಕಾರ ಅಲ್ದೇ ಮತ್ತೇನು ಅಂತಾ ಅಂತೆಲ್ಲಾ ಕೆಂಡ ಕಾರಿದ್ರು. ಇತರೆ ಆಟಗಾರರು ಕೂಡ ಅದ್ರಲ್ಲೇನಿದೆ ಅಂತಾ ಅಸಡ್ಡೆಯಿಂದಲೇ ಸಮರ್ಥನೆ ಮಾಡಿಕೊಂಡಿದ್ರು. ಮಿಚೆಲ್ ಮಾರ್ಷ್ ಅಂತೂ ಇನ್ನೂ ಒಂದು ಸಲ ಅದೇ ರೀತಿ ಕುಳಿತುಕೊಳ್ಳುವ ಅನ್ನೋ ಮೂಲಕ ಎಲ್ಲೆ ಮೀರಿದ್ರು.
1 ಲಕ್ಷ ಜನರನ್ನ ಮೌನವಾಗಿಸಿದ್ದೇವೆ ಎಂದಿದ್ದ ಪ್ಯಾಟ್ ಕಮಿನ್ಸ್!
ಇನ್ನು ಕಪ್ ಗೆದ್ದ ಖುಷಿಯಲ್ಲಿ ಆಗಿನ ನಾಯಕ ಪ್ಯಾಟ್ ಕಮಿನ್ಸ್ ನಾಲಗೆ ಹರಿಬಿಟ್ಟಿದ್ರು. ಭಾರತದಲ್ಲೇ ಟೂರ್ನಿ ನಡೆದು ಭಾರತ ಫೈನಲ್ಗೆ ಬಂದಿದ್ರಿಂದ ಮೋದಿ ಸ್ಟೇಡಿಯಂನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ರು. ಪ್ಯಾಟ್ ಕಮಿನ್ಸ್ ಅಂತೂ ಅಹ್ಮದಾಬಾದ್ ನಲ್ಲಿ ನಾವು ಒಂದು ಲಕ್ಷ ಜನರನ್ನು ಮೌನವಾಗಿಸುತ್ತೇವೆ ಎಂದು ದುರಂಹಕಾರದ ಹೇಳಿಕೆ ನೀಡಿದ್ದ. ಆತನ ದರ್ಪಕ್ಕೆ ಕಾರಣವೂ ಇತ್ತು. ಯಾಕಂದ್ರೆ 2021ರ ಟಿ20 ವಿಶ್ವಕಪ್, 2023ರ ಡಬ್ಲ್ಯೂಟಿಸಿ ವಿಶ್ವ ಚಾಂಪಿಯನ್ ಶಿಪ್ ಜೊತೆಗೆ 2023ರ ಏಕದಿನ ವಿಶ್ವಕಪ್ ಗಳನ್ನು ಗೆದ್ದ ಕಾಂಗರೂಗಳು ಜಗತ್ತಲ್ಲಿ ನಮ್ಮ ಮುಂದೆ ಯಾರೂ ಸರಿಸಾಟಿನೇ ಇಲ್ಲ ಅನ್ನೋ ಮೈಂಡ್ಸೆಟ್ನಲ್ಲಿದ್ರು. ಆದ್ರೆ ಅದೇನು ಕಾಕತಾಳಿಯವೋ ಅಥವಾ ಕೋ ಇನ್ಸಿಡೆಂಟೋ ಗೊತ್ತಿಲ್ಲ ವಿಶ್ವಕಪ್ ಗೆದ್ಮೇಲೆ ಆಸೀಸ್ ಪಡೆಗೆ ಐಸಿಸಿ ಕಪ್ಗಳು ಮರೀಚಿಕೆಯಾಗಿವೆ. ಸಾಲು ಸಾಲು ಟೂರ್ನಿಗಳಲ್ಲಿ ಸೋತು ಸುಣ್ಣವಾಗ್ತಿದ್ದಾರೆ. ಕ್ಯಾಪ್ಟನ್ಸ್ ಚೇಂಜ್ ಮಾಡ್ತಿದ್ರೂ ನಸೀಬು ಬದ್ಲಾಗ್ತಿಲ್ಲ.
ಟ್ರೋಫಿ ಮೇಲೆ ಕಾಲಿಟ್ಟಿದ್ದೇ ತಪ್ಪಾಯ್ತಾ?
2024ರ ಟಿ-20 ವಿಶ್ವಕಪ್ ನಲ್ಲಿ ಸೂಪರ್ -8 ಹಂತದಲ್ಲೇ ಆಸ್ಟ್ರೇಲಿಯಾ ಔಟ್
2025 ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ಸೋಲು
2025 ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು
2026 ರ ಟಿ-20 ವಿಶ್ವಕಪ್ ನಲ್ಲಿ ಗ್ರೂಪ್ ಹಂತದಲ್ಲೇ ಆಸ್ಟ್ರೇಲಿಯಾ ಔಟ್
ಆಸ್ಟ್ರೇಲಿಯಾ ಮಹಿಳಾ ತಂಡ 2024 ಟಿ20 ವಿಶ್ವಕಪ್ ಫೈನಲ್ ಗೆ ಅರ್ಹತೆ ಪಡೀಲಿಲ್ಲ
ಮಹಿಳಾ ತಂಡ 2025 ಮಹಿಳೆಯರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋಲು
ಌಕ್ಚುಲಿ ಕ್ರಿಕೆಟ್ ಹುಟ್ಟುಹಾಕಿದ್ದು ಇಂಗ್ಲೆಂಡೇ ಆದ್ರೂ ಅದನ್ನ ಆಳ್ತಾ ಇದ್ದದ್ದು ಮಾತ್ರ ಆಸ್ಟ್ರೇಲಿಯಾ. ಯಾಕಂದ್ರೆ ಅತೀ ಹೆಚ್ಚು ಐಸಿಸಿ ಕಪ್ಗಳನ್ನ ಗೆದ್ದಿರೋದೂ ಅವ್ರೇ. ಟೋಟಲ್ಲಾಗಿ 10 ಟ್ರೋಫಿಗಳನ್ನ ಗೆದ್ದಿದ್ದಾರೆ. ಹಾಗೇ ನಾಲ್ಕೂ ಮಾದರಿಯ ಐಸಿಸಿ ಕಪ್ಗಳನ್ನ ಗೆದ್ದಿರೋ ಏಕೈಕ ತಂಡವೂ ಅವ್ರದ್ದೇ. ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಹೀಗೆ ನಾಲ್ಕೂ ಮಾದರಿಯ ಕಪ್ ಗೆದ್ದಿರೋ ತಂಡ. ಇನ್ನು ಭಾರತ ಸೆಕೆಂಡ್ ಪ್ಲೇಸ್ನಲ್ಲಿದ್ದು 7 ಕಪ್ಗಳನ್ನ ಗೆದ್ದಿದೆ. ಬಟ್ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಕಪ್ ಗೆಲ್ಲೋಕೆ ಆಗಿಲ್ಲ. ಹೀಗೆ ಒಂದು ಕಾಲದಲ್ಲಿ ಕ್ರಿಕೆಟ್ ಲೋಕವನ್ನೇ ಆಳ್ತಿದ್ದ ಆಸ್ಟ್ರೇಲಿಯಾ ಈಗ ಸೋತು ಸೋತು ಸುಣ್ಣವಾಗ್ತಿದೆ. ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಮೇಲೆ ಅವನತಿ ಆರಂಭವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕರ್ಮ ರಿಟರ್ನ್ಸ್ ಅಂತೆಲ್ಲಾ ಪೋಸ್ಟ್ಗಳು ಹರಿದಾಡ್ತಿವೆ. ಇನ್ನು ಆಸೀಸ್ ಪಡೆಯ ಸೋಲಿಗೆ ಕಾರಣಗಳೂ ಇವೆ. ಈ ಬಾರಿಯ ಟೂರ್ನಿಗೆ ಮ್ಯಾಚ್ ವಿನ್ನಿಂಗ್ ಪ್ಲೇಯರ್ಸ್ ಅನ್ನಿಸಿಕೊಂಡವ್ರು ಇಂಜುರಿಯಿಂದಾಗಿ ಟೀಮ್ನಲ್ಲಿರಲಿಲ್ಲ. ಹಾಗೇ ಆಡಿದಂತ ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ಬರ್ಲಿಲ್ಲ. ಒಟ್ನಲ್ಲಿ ಕ್ರಿಕೆಟ್ ಲೋಕದಲ್ಲಿ ನಾವೇ ದೊರೆ ಅಂತಾ ಮೆರೀತಿದ್ದ ಆಸೀಸ್ ಪತನವಾಗ್ತಿದೆ. ಭಾರತ ಸಾಲು ಸಾಲು ಟೂರ್ನಿಗಳನ್ನ ಗೆದ್ದು ರಿಯಲ್ ಬಾಸ್ ಆಗಿದ್ದಾರೆ. ಹಾಗೇ ಟ್ರೋಫಿಗಳನ್ನ ಮಕ್ಕಳಂತೆ ಜೋಪಾನ ಮಾಡೋ ಭಾರತೀಯರನ್ನ ನೋಡಿ ಇವ್ರೆಲ್ಲಾ ಕಲೀಬೇಕು.

ನೋಡಿರಿ

