ಫಲಿಸಲಿಲ್ಲ ಚಿಕಿತ್ಸೆ.. ಸ್ಯಾಂಡಲ್‌ವುಡ್‌ ಯುವ ನಟ ಸಂತೋಷ್‌ ಬಾಲರಾಜ್‌ಇನ್ನಿಲ್ಲ

ಫಲಿಸಲಿಲ್ಲ ಚಿಕಿತ್ಸೆ.. ಸ್ಯಾಂಡಲ್‌ವುಡ್‌ ಯುವ ನಟ ಸಂತೋಷ್‌ ಬಾಲರಾಜ್‌ಇನ್ನಿಲ್ಲ

ಸ್ಯಾಂಡಲ್‌ವುಡ್‌ ನಟ ಸಂತೋಷ್‌ ಬಾಲರಾಜ್‌(34) ನಿಧನರಾಗಿದ್ದಾರೆ. ಜಾಂಡೀಸ್‌ನಿಂದ ಬಳಲುತ್ತಿದ್ದ ನಟ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಸಾರಿಗೆ ಬಸ್‌ ಸಂಚಾರ ಬಂದ್‌ – ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಮೇಲೆ ಕಲ್ಲೆಸೆತ

ಹಿರಿಯ ನಿರ್ಮಾಪಕ‌ ಆನೆಕಲ್ ಬಾಲ್ ರಾಜ್ ಪುತ್ರ ಸಂತೋಷ್ ಬಾಲರಾಜ್ ಕಳೆದ ಕೆಲವು ದಿನಗಳಿಂದ ಜಾಂಡೀಸ್‌ನಿಂದ ಬಳಲುತ್ತಿದ್ರು. ನಟ ಸಂತೋಷ್ ಅವರನ್ನ ಕುಮಾರಸ್ವಾಮಿ ಲೇಔಟ್​ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಕೆಲ ದಿನಗಳ ಹಿಂದೆ ನಟ ಕೋಮಾಗೆ ಹೋಗಿದ್ರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಸಂತೋಷ್ ಬಾಲ್​ರಾಜ್ ಅವರು ಅಮ್ಮನ ಜೊತೆಗೆ ವಾಸವಾಗಿದ್ದರು. ಕರಿಯ-2 ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ಸಂತೋಷ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಕೆಂಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರೂ ಆ ಸಿನಿಮಾದಿಂದ ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ಸಿಕ್ಕಲಿಲ್ಲ. ನಂತರ ನಟಿಸಿದ ಗಣಪ ಹಾಗೂ ಕರಿಯ 2 ಚಿತ್ರ ತಕ್ಕಮಟ್ಟಕ್ಕೆ ಯಶಸ್ಸು ಕಂಡಿದ್ದವು. ನಂತರದ ದಿನಗಳಲ್ಲಿ ಒಂದಷ್ಟು ಸಿನಿಮಾದಲ್ಲಿ ನಟಿಸಿದರೂ ಯಾವ ಚಿತ್ರ ಕೂಡಾ ಅಷ್ಟರ ಮಟ್ಟಿಗೆ ಕೈ ಹಿಡಿಯಲಿಲ್ಲ. ಸಂತೋಷ್ ಅಭಿನಯದ ಸತ್ಯ ಚಿತ್ರ ಇನ್ನೂ ರಿಲೀಸ್‌ ಆಗ್ಬೇಕಿತ್ತು.

Shwetha M