ಕರಿಮಣಿ ಸೀರಿಯಲ್ ದಿಢೀರ್ ಮುಕ್ತಾಯ – ಕೊನೆಯ ದಿನದ ಸಂಚಿಕೆಯಲ್ಲಿ ಏನಾಗಲಿದೆ?

ಕರಿಮಣಿ ಸೀರಿಯಲ್ ದಿಢೀರ್ ಮುಕ್ತಾಯ – ಕೊನೆಯ ದಿನದ ಸಂಚಿಕೆಯಲ್ಲಿ ಏನಾಗಲಿದೆ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕರಿಮಣಿ’ ಧಾರಾವಾಹಿ ದಿಢೀರ್ ಮುಕ್ತಾಯಗೊಳ್ಳಲಿದೆ. ಅಂತಿಮ ಸಂಚಿಕೆಯ ಶೂಟಿಂಗ್ ಕೂಡಾ ಮುಗಿದಿದೆ. ಕರಿಮಣಿ ಧಾರಾವಾಹಿಯಲ್ಲಿ ವಿಲನ್ ಅರುಂಧತಿ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ಅನುಷಾ ರಾವ್ ಸೀರಿಯಲ್ ಮುಗಿಯುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಟ್ಟಿಂಗ್ ಪ್ರಚಾರ ಮಾಡಿದವರಿಗೆ ED ಗುನ್ನಾ – ಪ್ರಕಾಶ್ ರಾಜ್, ವಿಜಯ್ ದೇವರಕೊಂಡಗೆ ಸಮನ್ಸ್ ಜಾರಿ

ಕರಿಮಣಿ ಧಾರಾವಾಹಿ ಕಳೆದ ವರ್ಷ ಅಂದರೆ ಫೆಬ್ರವರಿ 19, 2024 ರಂದು ಪ್ರಸಾರ ಆರಂಭಿಸಿತು. ಮೊದಲು ರಾತ್ರಿ 9.30ಕ್ಕೆ ಕರಿಮಣಿ ಸೀರಿಯಲ್ ಪ್ರಸಾರವಾಗುತ್ತಿತ್ತು. ಇದೀಗ ‘ಕರಿಮಣಿ’ ಧಾರಾವಾಹಿ 400 ಸಂಚಿಕೆಗಳನ್ನು ಪೂರೈಸಿದೆ. ‘ಕರಿಮಣಿ’ ಧಾರಾವಾಹಿಯ ಅಂತಿಮ ಸಂಚಿಕೆ ಯಾವಾಗ ಪ್ರಸಾರವಾಗಲಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಶೂಟಿಂಗ್ ಸಂಪೂರ್ಣಗೊಂಡಿದ್ದು, ಶುಭಂ ಬೋರ್ಡ್ ಬೀಳಲು ಸದ್ಯದಲ್ಲೇ ಬೀಳಲಿದೆ.

ಧಾರಾವಾಹಿಯಲ್ಲಿ ವಿಲನ್ ಅರುಂಧತಿ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ಅನುಷಾ ರಾವ್ ತಮ್ಮ ಇನ್ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ,ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ನಮ್ಮ ಮನೆಯಂತಿದ್ದ ಸ್ಟುಡಿಯೋದಲ್ಲಿ ನನ್ನ ಕಟ್ಟ ಕಡೆಯ ಫೋಟೋ’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ‘ಕರಿಮಣಿ’ ಮನೆ ಇರುವ ಅಕ್ಷಯ ಸ್ಟುಡಿಯೋಸ್‌ನಲ್ಲಿ ತಾವು ಕ್ಲಿಕ್ಕಿಸಿದ ಕೊನೆಯ ಫೋಟೋವನ್ನ ಅನುಷಾ ರಾವ್‌ ಹಂಚಿಕೊಂಡಿದ್ದಾರೆ.

ಕರಿಮಣಿ ಧಾರಾವಾಹಿಯ ಟಿಆರ್‌ಪಿ ಅಷ್ಟೇನು ಇಲ್ಲ. ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಶುರುವಾದ್ಮೇಲೆ ಸಂಜೆ 6 ಗಂಟೆಗೆ ಶಿಫ್ಟ್ ಆಯ್ತು. ಇದೀಗ ಮತ್ತೊಂದು ಬಿಗ್‌ಬಾಸ್ ಶೋಗೆ ತಯಾರಿ ನಡೆಯುತ್ತಿದೆ. ಇದೇ ಕಾರಣಕ್ಕೆ ‘ಕರಿಮಣಿ’ ಸೀರಿಯಲ್‌ನ ಎಂಡ್‌ ಮಾಡಲಾಗ್ತಿದ್ಯಾ ಎಂಬ ಅನುಮಾನ ಮೂಡಿದೆ.

ಈ ಧಾರಾವಾಹಿ ಕ್ಲೈಮ್ಯಾಕ್ಸ್‌ ಎಪಿಸೋಡ್‌ಗಳು ಪ್ರಸಾರವಾಗ್ತಿದ್ದು, ಕಲಾವಿದರು ಕೊನೆಯ ದಿನದ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ. ಈಗಾಗಲೇ ಕೊನೆಯ ಸಂಚಿಕೆಗಳು ಪ್ರಸಾರ ಆಗಲು ಶುರುವಾಗಿವೆ. ಹೀಗಾಗಿ ಕಲಾವಿದರು, ತಂತ್ರಜ್ಞರು ಕೂಡ ಭಾವುಕರಾಗಿದ್ದಾರೆ. ಈ ಬಗ್ಗೆ ವಾಹಿನಿಯಾಗಲೀ, ಧಾರಾವಾಹಿ ತಂಡವಾಗಲೀ ಪ್ರತಿಕ್ರಿಯೆ ಮಾಡಿಲ್ಲ. ಕರಿಮಣಿ ಧಾರಾವಾಹಿಯಲ್ಲಿ ಅರುಂಧತಿ ಮುಖವಾಡ ಕಳಚಿಬಿದ್ದಿದೆ. ಇನ್ನು ಕರ್ಣ ಮಾತ್ರ ಅರುಂಧತಿ ಮನುಷ್ಯಳಲ್ಲ, ನೀಚ ಹೆಣ್ಣು ಎನ್ನೋದು ಒಪ್ಪಿಕೊಳ್ಳಬೇಕಿದೆ. ಒಟ್ಟಿನಲ್ಲಿ ಅರುಂಧತಿ ಅಂತ್ಯದೊಂದಿಗೆ ಈ ಧಾರಾವಾಹಿ ಮುಕ್ತಾಯವಾಗಲಿದೆ.

ಈ ಧಾರಾವಾಹಿಯಲ್ಲಿ ಸ್ಪಂದನಾ ಸೋಮಣ್ಣ, ಅಶ್ವಿನ್‌ ಎಚ್, ಪ್ರಥಮಾ ಪ್ರಸಾದ್‌, ಅನುಷಾ ಹೆಗಡೆ, ಶ್ರೀಕಾಂತ್‌ ಮುಂತಾದವರು ನಟಿಸಿದ್ದಾರೆ. ಓರ್ವ ಮಲತಾಯಿ ಹೇಗೆ ಗಂಡನ ಮೊದಲ ಪತ್ನಿ ಮಗನನ್ನು ಬೆಳೆಸುತ್ತಾಳೆ? ಹೇಗೆ ಅವನು ತನ್ನ ಹೆತ್ತ ತಾಯಿ ವಿರುದ್ಧ ನಿಲ್ಲುವಂತೆ ಮಾಡ್ತಾಳೆ ಎಂಬ ಕಥೆ ಧಾರಾವಾಹಿಯಲ್ಲಿದೆ.

Sulekha