ಸೆಲೆಬ್ರಿಟಿಗಳನ್ನೂ ಕಾಡಿದ ಕರಿಮಣಿ ಮಾಲೀಕ.. – ಎಲ್ಲೆಲ್ಲೂ ನಲ್ಲನ ಗುಂಗು!

ಸೆಲೆಬ್ರಿಟಿಗಳನ್ನೂ ಕಾಡಿದ ಕರಿಮಣಿ ಮಾಲೀಕ.. – ಎಲ್ಲೆಲ್ಲೂ ನಲ್ಲನ ಗುಂಗು!

ವಾಟ್ಸಾಪ್​ ಸ್ಟೇಟಸ್​​ಗಳಲ್ಲಿ ಓನಲ್ಲ.. ಫೇಸ್​ಬುಕ್​ನಲ್ಲೂ ನೀನಲ್ಲ.. ಇನ್ಸ್​ಟಾಗ್ರಾಂ ರೀಲ್ಸ್ ತುಂಬಾ ಮಲ್ಲಿಗೆ, ಸಂಪಿಗೆಯದ್ದೇ ಘಮ. ಯಾವ ಸೋಶಿಯಲ್ ಮೀಡಿಯಾಗೇ ಹೋದ್ರೂ ಈಗ ಕರಿಮಣಿ ಮಾಲೀಕನೇ ಕುಣೀತಿದ್ದಾನೆ. ಸ್ಕೂಲ್​ಗೆ ಹೋಗೋ ಮಕ್ಕಳಿಂದ ಹಿಡಿದು ಕಟ್ಟೆ ಮೇಲೆ ಕೂರುವ ವೃದ್ಧರವರೆಗೂ ಎಲ್ರೂ ಇದೇ ಹಾಡಿಗೆ ಮೈ ಬಳುಕಿಸುತ್ತಿದ್ದಾರೆ. ಅಷ್ಟೇ ಯಾಕೆ ಸೆಲೆಬ್ರಿಟಿಗಳೂ ಕೂಡ ಉಪ್ಪಿ ಹಾಡಿಗೆ ಫಿದಾ ಆಗಿದ್ದಾರೆ. ಸೀರಿಯಲ್, ಸಿನಿಮಾ, ರಿಯಾಲಿಟಿ ಶೋ ಸ್ಟಾರ್​ಗಳ ಕರಿಮಣಿ ಮಾಲೀಕ ಕ್ರೇಜ್ ಹೇಗಿದೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಮಡದಿಗೆ ಸೀರೆ ಇಷ್ಟ ಆಗಿಲ್ಲ ಅಂತಾ ಅಂಗಡಿ ಸಿಬ್ಬಂದಿಗೆ ಥಳಿಸಿದ ಭೂಪ!

1999ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಪ್ರೇಮಾ ಅಭಿನಯದ ಉಪೇಂದ್ರ ಚಿತ್ರದ ಹಾಡು ಇದು. 25 ವರ್ಷಗಳ ಹಿಂದಿನ ಹಾಡು ಕಳೆದೊಂದು ತಿಂಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸುನಾಮಿ ಎಬ್ಬಿಸಿದೆ. ಸೆಲೆಬ್ರಿಟಿಗಳು ಕೂಡ ಇದೇ ಹಾಡಿಗೆ ರೀಲ್ಸ್ ಮಾಡಿ ಅಪ್​ಲೋಡ್ ಮಾಡ್ತಿದ್ದಾರೆ. ಯಾವೆಲ್ಲಾ ಸ್ಟಾರ್ಸ್ ಕರಿಮಣಿ ಮಾಲೀಕನನ್ನು ಮೆಚ್ಚಿಕೊಂಡಿದ್ದಾರೆ ಅನ್ನೋದನ್ನ ಹೇಳ್ತಾ ಹೋಗ್ತೇನೆ. ಕನ್ನಡತಿ, ಅಮೃತಧಾರೆ ಸೀರಿಯಲ್ ಖ್ಯಾತಿಯ ಸಾರಾ ಅಣ್ಣಯ್ಯ ಮಲ್ಲಿಗೆ ಸಂಪಿಗೆ ಅಂತಾ ಪೋಸ್ ಕೊಟ್ಟಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ತಮ್ಮ ಸೀರಿಯಲ್ ಪಾರ್ಟ್ನರ್ ಜೀವ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ನಿರೂಪಕ ನಿರಂಜನ್ ದೇಶಪಾಂಡೆ ಹಾಗೂ ಪತ್ನಿ ಯಶಸ್ವಿನಿ ಕೂಡ ಓ ನಲ್ಲ ನೀ ನಲ್ಲ ಅಂತಾ ಡಿಫ್ರೆಂಟ್ ಆಗಿ ಮೈ ಬಳುಕಿಸಿದ್ದಾರೆ. ಅಷ್ಟೇ ಅಲ್ಲದೇ ಸೀತಾರಾಮ ಸೀರಿಯಲ್ ಕಲಾವಿದರು ಶೂಟಿಂಗ್ ಬ್ರೇಕ್ ಟೈಮಲ್ಲಿ ಇದೇ ಸಾಂಗ್​ಗೆ ರೀಲ್ಸ್ ಮಾಡಿದ್ದಾರೆ. ಕುಣಿದು ಕುಪ್ಪಳಿಸುತ್ತಾ ಮೈಂಡ್ ರಿಲೀಫ್ ಮಾಡಿಕೊಂಡಿದ್ದಾರೆ. ಸೀತಾರಾಮ ಧಾರಾವಾಹಿಯಲ್ಲೇ ಪ್ರಿಯಾ ಪಾತ್ರ ಮಾಡುತ್ತಿರುವ ಮೇಘನಾ ಕೂಡ ಕರಿಮಣಿ ಮಾಲೀಕ ನೀನಲ್ಲ ಅಂತಾ ಡ್ಯಾನ್ಸ್ ಮಾಡಿದ್ದಾರೆ.

ಇನ್ನು ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಸ್ಪರ್ಧಿಗಳಾದ ವಿನೋದ್ ಗೊಬ್ಬರಗಾಲ ಹಾಗೂ ಖುಷಿ ಕೂಡ ಡಿಫ್ರೆಂಟ್ ಆಗಿ ರೀಲ್ಸ್ ಮಾಡಿದ್ದಾರೆ.  ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾ ಹಾಗೂ ಌಂಕರ್ ಅನುಶ್ರೀ ಮನಸಿನೊಳಗೆ ಖಾಲಿ ಖಾಲಿ ಅಂತಾ ತಮ್ಮ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದಾರೆ. ನಟ, ನಿರೂಪಕ ಮಾಸ್ಟರ್ ಆನಂದ್ ಹಾಗೂ ಪತ್ನಿ ಯಶಸ್ವಿನಿ ಓ ನನ್ನ ನೀ ನಲ್ಲ ಹಾಡಿಗೆ ಕಾಮಿಡಿ ಟಚ್ ಕೊಟ್ಟಿದ್ದಾರೆ.

ಸ್ಯಾಂಡಲ್​ವುಡ್​ ಡಿಂಪಲ್ ಕ್ವೀನ್ ರಚಿತಾ ರಾಮ್ ಸೀರೆಯುಟ್ಟು ಚೆಂದದ ನಗೆ ಬೀರಿದ್ದಾರೆ. ಅವ್ರ ವೈಯ್ಯಾರದ ಜೊತೆ ಕರಿಮಣಿ ಮಾಲೀಕ ನೀನಲ್ಲ ಸಾಂಗ್ ವೈರಲ್ ಆಗಿದೆ. ಇನ್ನು ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಕೂಡ ಓ ನಲ್ಲ ನೀ ನಲ್ಲ ಅಂತಾ ಉಪ್ಪಿ ಸಾಂಗ್​ಗೆ ಲಿಪ್ ಸಿಂಕ್ ಮಾಡಿದ್ದಾರೆ.

ಇನ್ನು ಈ ಸಾಂಗ್ ಇಷ್ಟೆಲ್ಲಾ ವೈರಲ್ ಆಗ್ತಿರಬೇಕಾದ್ರೆ ಸೋಶಿಯಲ್ ಮೀಡಿಯಾದಲ್ಲಿ ಹಾಡಿನ ಒರಿಜಿನಲ್ ಸಿಂಗರ್ ಯಾರು ಅನ್ನೋ ಬಗ್ಗೆಯೂ ಚರ್ಚೆ ಆಗ್ತಿದೆ. ಉಪೇಂದ್ರ ಸಿನಿಮಾದ ಏನಿಲ್ಲ ಏನಿಲ್ಲ ಹಾಡನ್ನು ಹಾಡಿದ್ದು  ಗಾಯಕಿ ಪ್ರತಿಮಾ ರಾವ್​. ಆದ್ರೆ ಪ್ರತಿಮಾ ರಾವ್ ಅವ್ರು ಈಗ ಭಾರತದಲ್ಲಿ ಇಲ್ಲ. ಅಲ್ಲದೆ ತಮ್ಮ ಹೆಸರನ್ನೂ ಕೂಡ ಬದಲಿಸಿಕೊಂಡಿದ್ದಾರೆ. ಆಸ್ಟ್ರೆಲಿಯಾದಲ್ಲಿ ಸಿಡ್ನಿಯಲ್ಲಿ ವಾಸವಾಗಿರುವ ಅವರು ತಮ್ಮ ಹೆಸರನ್ನು ರಾಧಿಕಾ ರಾವ್​ ಎಂದು ಬದಲಾಯಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಮತ್ತು ಯುಟ್ಯೂಬ್‌ನಲ್ಲಿ ಆ್ಯಕ್ಟೀವ್ ಆಗಿರೋ ಪ್ರತಿಮಾ ರಾವ್ ತಾವೇ ಹಾಡಿರೋ ಏನಿಲ್ಲ ಹಾಡನ್ನ ಮತ್ತೆ ಹಾಡಿದ್ದಾರೆ. ತಮ್ಮದೇ ಸ್ಟೈಲ್​ನಲ್ಲಿ ಇದಕ್ಕೆ ಹೊಸ ಟಚ್ ಕೊಟ್ಟಿದ್ದಾರೆ. ಒಟ್ನಲ್ಲಿ ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಕರಿಮಣಿ ಮಾಲೀಕನ ಕ್ರೇಜ್ ಕಮ್ಮಿ ಆಗ್ತಿಲ್ಲ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಎಲ್ರೂ ಸ್ಟೆಪ್ಸ್ ಹಾಕ್ತಿದ್ದಾರೆ.

Shwetha M