ಕರಾವಳಿಯಲ್ಲಿ ಶೆಟ್ರೇ ಹೈಪ್ ಆದ್ರಾ? ಪ್ರಜ್ವಲ್‌ಗೆ ಡೈಲಾಗ್ ಕಮ್ಮಿ, ಡಮ್ಮಿನಾ?
ಕುರ್ಚಿಗಾಗಿ ಸೇಡು! ಕಂಬಳ ಕಥೆ ಹೇಗಿದೆ?

ಕರಾವಳಿಯಲ್ಲಿ ಶೆಟ್ರೇ ಹೈಪ್ ಆದ್ರಾ?  ಪ್ರಜ್ವಲ್‌ಗೆ ಡೈಲಾಗ್ ಕಮ್ಮಿ, ಡಮ್ಮಿನಾ?ಕುರ್ಚಿಗಾಗಿ ಸೇಡು! ಕಂಬಳ ಕಥೆ ಹೇಗಿದೆ?

ಕರಾವಳಿ ಸಿನಿಮಾ  ಪ್ರತಿಯೊಬ್ಬರಿಗೂ ಕೂಡ ಇದು ಇಷ್ಟ ಆಗುತ್ತೆ. ಮಣ್ಣಿನ ವಾಸನೆ, ಕಡಲ ತಡಿಯ ಕಥೆ ಜೊತೆ  ಅದ್ಧೂರಿ ಮೇಕಿಂಗ್‌ನಿಂದ ನಮ್ಮನ್ನ ಹಿಡಿದಿಟ್ಟುಕಳ್ಳುವಂತೆ ಮಾಡುತ್ತೆ ಈ ಸಿನಿಮಾ. ಕಂಬಳ ಅಂದ್ರೆ ಅದು ಕರಾವಳಿ.. ಕರಾವಳಿಯಲ್ಲಿ ಕೋಣದ ಕಂಬಳ ಪ್ರತಿಷ್ಠೆಯ ಪ್ರತೀಕವಾಗಿ ನೋಡುವ ಆದಿಶೇಷ ಅನ್ನೋ ವ್ಯಕ್ತಿ.. ಈತನೇ ಈ ಕಥೆಯ ವಿಲನ್‌.. ತನ್ನ ಪ್ರತಿಷ್ಠೆಗೆ ರಕ್ತ ಹರಿಸೋಕೆ  ರೆಡಿ.. ಇವರ ಮನೆಯಲ್ಲಿ  ಕೋಣದ ಕೆಲಸ ಮಾಡಿಕೊಡಿದ್ದ ಮಹಾಬಲ ಹಾಗೂ ಮಹಾವೀರ.. ಇವರಿಬ್ಬರು ಜೀವಕ್ಕೆ ಜೀವ ಕೊಡ ಸ್ನೇಹಿತರು.. ಆದ್ರೆ ಸಾವುಕರನ ದರ್ಪಕ್ಕೆ ಮಹಾಬಲ ಮತ್ತು ಮಹಾವೀರ ಒಟ್ಟಾಗಿ ಹೋರಾಡ್ತಾರೆ.. ಇದು 30 ವರ್ಷಗಳ ಹಿಂದಿನ ಕಥೆಯಾದ್ರೆ.. ಪ್ರಜ್ವಲ್ ದೇವರಾಜ್ 30 ವರ್ಷದ ನಂತ್ರ ಬಂದು ಏನ್ ಮಾಡ್ತಾರೆ. ದ್ವೇಷ, ಸೇಡು, ಕುರ್ಚಿಗಾಗಿ ನಡೆಯುವ ಒಣ ಪ್ರತಿಷ್ಠೆ ಹೇಗಿರುತ್ತೆ? ಪ್ರಜ್ವಲ್‌ಗೆ ಮತ್ತು ರಾಜ್‌ ಬಿ ಶೆಟ್ಟಿಯ ಪಾತ್ರವೇನು? ಯಾರು ಹೆಚ್ಚು ಕಾಲ ಸ್ಕ್ರೀನ್‌ನಲ್ಲಿ ಇರ್ತಾರೆ ಅನ್ನೋದ್ದನ್ನ ನೀವು ಥೆಯೇಟರ್‌ಗೆ ಹೋಗಿ ನೋಡಬೇಕು.

ಇದನ್ನೂ ಓದಿ: ಮದುವೆ ದಿನವೇ ಕೈಕೊಟ್ಟು ಓಡಿ ಹೋದ ಪಿಂಕಿ – ಗುಂಡಮ್ಮನ ಹತ್ರ ಓಡಿಬರ್ತಾನಾ ಜಿಮ್ ಸೀನ?

ನೀವು ನಾನ್ ರಾಜ್ ಬಿ ಶೆಟ್ಟಿ ಫ್ಯಾನ್‌, ನಾನ್ ಪ್ರಜ್ವಲ್ ದೇವರಾಜ್ ಫ್ಯಾನ್ ಅಂತ ಚಿತ್ರ ನೋಡೋಕೆ ಹೋದ್ರೆ ನೀವು ಮಿತ್ರ ಅವರ ಫ್ಯಾನ್‌ ಆಗಿ ಹೋರ ಬರ್ತೀರಾ.. ಈ ಚಿತ್ರದ ಮುಖ್ಯ ಪಾತ್ರನೇ  ನಟ ಮಿತ್ರ ಅವರ ‘ಮಹಾಬಲ’ ಎಂಬ ಪಾತ್ರ. ಸಾಮಾನ್ಯವಾಗಿ ಕಾಮಿಡಿ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಿತ್ರ, ಇಲ್ಲಿ ಗಂಭೀರವಾದ ಮತ್ತು ತೂಕವುಳ್ಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೇ ಇಡೀ  ಚಿತ್ರವನ್ನ ನುಂಗಿ ಹಾಕಿದ್ದಾರೆ ಅಂತಾನೇ ಹೇಳಬಹುದು. ಕರಾವಳಿಯಲ್ಲಿ ಮಿತ್ರನೇ ಪಾತ್ರವೇ ಹೈಲೈಟ್..

ಇನ್ನು ನಟ ರಾಜ್ ಬಿ ಶೆಟ್ಟಿ ಅವರ ನಟನೆ ಬಗ್ಗೆ ಹೇಳಬೇಕಿಲ್ಲ.. ತನಗೆ ಕೊಟ್ಟ ಪಾತ್ರವನ್ನ ಅಟ್ಟುಕಟ್ಟಾಗಿ ಮಾಡಿದ್ದಾರೆ. ಮಹಾವೀರ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೆಕೆಂಡ್ ಆಫ್‌ನಲ್ಲಿ ಎಂಟ್ರಿಕೊಡುವ ರಾಜ್ ಬಿ ಶೆಟ್ಟಿ, ಅತಿಥಿ ಪಾತ್ರವಾದ್ರು, ಆ  ಪಾತ್ರವೇ ಇಡೀ ಸಿನಿಮಾವನ್ನ ಆವರಿಸುತ್ತೆ.. ಮಹಾವೀರ ಮತ್ತು ಮಹಾಬಲ ಸ್ನೇಹಿತರ ಕಂಬಳ ಗದ್ದೆಯ ಹೋರಾಟದ ಕಥೆ ಈ ಕರಾವಳಿ ಕಥೆ..

ಇನ್ನೂ ಎಲ್ಲದ್ದಕ್ಕಿಂತ ಹೆಚ್ಚಾಗಿ ನಟ ಪ್ರಜ್ವಲ್ ದೇವರಾಜ್ ಅವರ ಪಾತ್ರದ ಬಗ್ಗೆ ಹೇಳಲೇ ಬೇಕು..  ಈ ಚಿತ್ರದಲ್ಲಿ ಬಹಳ ಡಿಫರೆಂಟ್ ಗೆಟಪ್‌ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ.  ಪ್ರಜ್ವಲ್ ಅವರ ನಟನೆ ಮತ್ತು ಗತ್ತು ಸಿನಿಮಾಗೆ ದೊಡ್ಡ ಬಲ ನೀಡಿದೆ. ಆದ್ರೆ ಈ ಸಿನಿಮಾದಲ್ಲಿ ಪ್ರಜ್ವಲ್ ವಾಯ್ಸ್‌ ಇಲ್ಲ, ಬೇರೆ ವಾಯ್ಸ್‌ ಡಬ್ ಮಾಡಲಾಗಿದೆ. ಹಾಗಂತ ಇಲ್ಲಿ ಪ್ರಜ್ವಲ್ ದೇವರಾಜ್‌ಗೆ ಹೆಚ್ಚು ಡೈಲಾಗ್ ಇಲ್ಲ.. ಹೀಗಾಗಿ ಅವರ ವಾಯ್ಸ್ ಇದಿದ್ರೆ ಚೆನ್ನಾಗಿ ಇರ್ತೀತ್ತು ಅನ್ಸುತ್ತೆ.. ಹಾಗಂತ ಇಲ್ಲಿ ಪ್ರಜ್ವಲ್ ದೇವರಾಜ್‌ ಗಿಂತ ರಾಜ್‌ ಬಿ ಶೆಟ್ಟಿಗೆ ಹೆಚ್ಚು ಹೈಪ್ ಕೊಟ್ಟಿಲ್ಲ. ಯಾರಿಗೆ ಎಷ್ಟು ಸ್ಕ್ರೀನ್ ಕೊಡಬೇಕು ಅಷ್ಟು ನಿರ್ದೇಶಕರು ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ಎಲ್ಲೂ ಕೂಡ ಒಟ್ಟಿಗೆ ಬರಲ್ಲ. ಅದು ಯಾಕೆ ಅನ್ನೋದು ನೀವು ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ.

ಹಾಗೇ ವಿಲವ್ ರಮೇಶ್ ಇಂದಿರಾ ಕೂಡ ಸಖತ್ ಆಗಿಯೇ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ.. ಇಡೀ ಚಿತ್ರದಲ್ಲಿ ಇವರ ಆ್ಯಕ್ಟಿಂಗ್ ಕೂಡ ಇಷ್ಟ ಆಗುತ್ತೆ.

ನಿರ್ದೇಶಕ ಗುರುದತ್ತ ಗಾಣಿಗ ಅವರ ಅದ್ಭುತ ನಿರ್ದೇಶನ.  ಸಚಿನ್ ಬಸ್ರೂರು ಅವರ ಮ್ಯೂಸಿಕ್‌ ಚಿತ್ರದ   ತೂಕವನ್ನು ಹೆಚ್ಚಿಸಿದೆ. ಕರಾವಳಿಯ ನೈಜತೆಯನ್ನು ಕಿಂಚಿತ್ತೂ ಕಮ್ಮಿಯಾಗದಂತೆ ತೆರೆಯ ಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಸಂಪದ ಅವರ ಅಭಿನಯವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಎಡಿಟಿಂಗ್, ಲೈಟಿಂಗ್,  ಕ್ಯಾಮರಾ ವರ್ಕ್‌ ಸೂಪರ್‌.. ಹೆಚ್ಚು ಕ್ಲೋಸ್‌ ಅಪ್‌ ಶಾರ್ಟ್ಸ್‌ ಸಿನಿಮಾದಲ್ಲಿದೆ.  ಫಸ್ಟ್ ಹಾಫ್‌ನಲ್ಲಿ ಕುತೂಹಲ ಕೆರಳಿಸಿದ್ರೆ,  ಸೆಕೆಂಡ್ ಹಾಫ್‌ನಲ್ಲಿ ಇಡೀ ಚಿತ್ರಕ್ಕೆ ದೊಡ್ಡ ಸಕ್ಸಸ್ ಕೊಡುತ್ತೆ..

Kishor KV

Leave a Reply

Your email address will not be published. Required fields are marked *