PAK ಬಣ್ಣ ಬಯಲಿಗೆಳೆದ ಪತ್ರಿಕೆ – ಗಬ್ಬೆದ್ದ ಮೈದಾನಗಳಲ್ಲೇ ICC ಟೂರ್ನಿ
ಚಾಂಪಿಯನ್ಸ್ ಟ್ರೋಫಿ ಟೂರ್ನಿ ಹೊಣೆಯನ್ನ ಹೊತ್ತಿರೋ ಪಾಕಿಸ್ತಾನ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗ್ತಾನೇ ಇದೆ. ಅದ್ರಲ್ಲೂ ಅಲ್ಲಿನ ಕ್ರೀಡಾಂಗಣಗಳ ದುಸ್ಥಿತಿ ಇಡೀ ಜಗತ್ತಿಗೇ ಗೊತ್ತಿದೆ. ಕಳೆದ 8 ತಿಂಗಳಿಂದ ರಿಪೇರಿ ಕೆಲ್ಸ ನಡೀತಿದ್ರೂ ಏನಂದೂ ಕಂಪ್ಲೀಟ್ ಆಗಿಲ್ಲ. ಹೀಗಾಗಿ ಗಬ್ಬೆದ್ದಿರೋ ಸ್ಟೇಡಿಯಮ್ಗಳಲ್ಲೇ ಐಸಿಸಿ ಟೂರ್ನಿ ನಡೆಯೋ ಹಾಗಿದೆ. ಹೀಗಂತ ಅಲ್ಲಿನ ಮಾಧ್ಯಮಗಳೇ ರಿಪೋರ್ಟ್ ಮಾಡಿವೆ.
ಇದನ್ನೂ ಓದಿ : ರಣಜಿಯಲ್ಲೂ KL ಆವರೇಜ್ ಸ್ಕೋರ್ – ಕಳಪೆ ಫಾರ್ಮ್ Or ರೆಸ್ಟ್ ಬೇಕೋ?
ಪಾಕಿಸ್ತಾನದಲ್ಲಿರುವ ಕ್ರಿಕೆಟ್ ಸ್ಟೇಡಿಯಮ್ಗಳ ದುಸ್ಥಿತಿ ಜಾಗತಿಕ ಕ್ರಿಕೆಟ್ ವಲಯದಲ್ಲಿ ಬಾರೀ ಚರ್ಚೆಯಾಗ್ತಿದೆ. ನವೀಕರಣ ಕೆಲಸ ನಡೀತಿದ್ರೂ ಅದು ಆಮೆಗತಿಯಲ್ಲಿ ಸಾಗ್ತಾ ಇದೆ. ಭಾರತ ತನ್ನ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ದುಬೈನಲ್ಲಿ ಆಡಿದ್ರೂ ಇತರ ಎಲ್ಲಾ ಅಂತರರಾಷ್ಟ್ರೀಯ ತಂಡಗಳು ಪಾಕಿಸ್ತಾನದಲ್ಲಿ ಆಡಲಿವೆ. ಇದಕ್ಕಾಗಿ ಮೂರು ಸ್ಟೇಡಿಯಮ್ಗಳನ್ನೂ ಫೈನಲ್ ಮಾಡಿ ದುರಸ್ಥಿ ಕಾರ್ಯ ನಡೆಸಲಾಗ್ತಿದೆ. ವಿಚಿತ್ರ ಅಂದ್ರೆ ಕಳೆದ ಆಗಸ್ಟ್ನಿಂದಲೇ ಕಾಮಗಾರಿ ಶುರುವಾದ್ರೂ ಇನ್ನೂ ಯಾವುದೂ ಕಂಪ್ಲೀಟ್ ಆಗಿಲ್ಲ. ಫೆಬ್ರವರಿ 5ರ ಡೆಡ್ಲೈನ್ ನೀಡಿದ್ರೂ ಅಷ್ಟ್ರಲ್ಲಿ ಯಾವುದೂ ಕಂಪ್ಲೀಟ್ ಆಗಲ್ಲ ಅಂತಾ ಕ್ರೀಡಾಂಗಣಗಳ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ಅಸಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಜನವರಿ 31 ರೊಳಗೆ ಕ್ರೀಡಾಂಗಣಗಳಲ್ಲಿ ನವೀಕರಣ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಅದು ಸಾಧ್ಯವಾಗಿಲ್ಲ. ಪಾಕಿಸ್ತಾನವು ಫೆಬ್ರವರಿ 8 ರಿಂದ ತವರಿನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತ್ರಿಕೋನ ಏಕದಿನ ಸರಣಿಯನ್ನು ಆಡಲಿದೆ. ಬಟ್ ಕ್ರೀಡಾಂಗಣಗಳಲ್ಲಿನ ಪರಿಸ್ಥಿತಿಯೇ ಟೆನ್ಷನ್ ತಂದಿಟ್ಟಿದೆ. ಸದ್ಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೇವಲ 20 ದಿನಗಳು ಮಾತ್ರ ಬಾಕಿ ಉಳಿದಿದೆ. ಫೆಬ್ರವರಿ 19ರಿಂದ ಐಸಿಸಿ ಟ್ರೋಫಿಗಾಗಿ ಫೈಟ್ ಶುರುವಾಗಲಿದೆ. ಈ ಕಾಮಗಾರಿ ಗದ್ಧಲದ ನಡುವೆಯೇ ಐಸಿಸಿ ಸಿಇಒ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕೂಡ ಕುತೂಹಲ ಕೆರಳಿಸಿದೆ. ಈ ರಾಜೀನಾಮೆಗೆ ಪಾಕಿಸ್ತಾನದ ಸಿದ್ಧತೆಯಲ್ಲಿನ ಕೊರತೆ ಎಂದು ಹೇಳಲಾಗುತ್ತಿದ್ದು, ಟೂರ್ನಿ ಬಗ್ಗೆ ಯಾವುದೇ ಸ್ಪಷ್ಟನೆ ನೀಡದಿರುವುದು ಈ ರಿಸೈನ್ಗೆ ಕಾರಣ ಎನ್ನಲಾಗಿದೆ.
ಇನ್ನು 2017ರ ಬಳಿಕ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದ್ದು, ಪಾಕಿಸ್ತಾನ ಆತಿಥ್ಯ ವಹಿಸುವ ಟೂರ್ನಿಯಲ್ಲಿ ಎಂಟು ತಂಡಗಳು ಭಾಗವಹಿಸಲಿವೆ. ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ಪಾಕಿಸ್ತಾನ ಅಪ್ಗ್ರೇಡ್ ಮಾಡುತ್ತಿದ್ದು, ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಒಟ್ಟಾರೆ ಪಾಕಿಸ್ತಾನದಲ್ಲಿ ನಡೆಯಬೇಕಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸುತ್ತ ದಿನಕ್ಕೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಆರಂಭದಲ್ಲಿ ಹೈಬ್ರಿಡ್ ಮಾದರಿಯನ್ನ ಒಪ್ಪಿಕೊಳ್ಳದ ಫಾಕ್ ಈಗ ತಾನೇ ಇಕ್ಕಟ್ಟಿಗೆ ಸಿಲುಕಿದೆ. ಪಾಕಿಸ್ತಾನದ ಮಾಧ್ಯಮಗಳೇ ಅಲ್ಲಿನ ಕ್ರೀಡಾಂಗಣಗಳ ಬಣ್ಣವನ್ನ ಬಯಲು ಮಾಡಿವೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆಗೂ ಕ್ರೀಡಾಂಗಣಗಳು ಸಿದ್ಧ ಆಗೋದು ಇಂಪಾಸಿಬಲ್ ಎಂದಿವೆ.