ಟೆಸ್ಟ್ ನಿವೃತ್ತಿಗೆ ಕೊಹ್ಲಿ ಬೇಸರ? – ಇನ್ನೂ 2 ವರ್ಷ ಆಡಬೇಕಿತ್ತಾ?
ವಿರಾಟ್ ದುಡುಕಿದ್ದು ಯಾಕೆ?

ಟೀಂ ಇಂಡಿಯಾ ಈಗ ಟೆಸ್ಟ್ ಫಾರ್ಮೆಟ್ನಲ್ಲಿ ಹಳ್ಳ ಹಿಡಿದಿದೆ. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಲ್ಲಿ ಫೈನಲ್ ಟಿಕೆಟ್ ಪಡೆಯೋಕೂ ತಿಣುಕಾಡ್ತಿದೆ. ಬಟ್ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಯುಗದಲ್ಲಿ ಭಾರತ ಟೆಸ್ಟ್ ಕ್ರಿಕೆಟ್ನ ಸಾಮ್ರಾಟನಾಗಿತ್ತು. ವಿರಾಟ್ ರೆಡ್ ಬಾಲ್ ಮಾದರಿಗೆ ನಿವೃತ್ತಿ ಘೋಷಿಸಿ ವರ್ಷವೇ ಕಳೆದ್ರೂ ಸ್ಟಿಲ್ ಈಗ್ಲೂ ಚರ್ಚೆಯಾಗ್ತಾನೇ ಇದೆ. ಭಾರತಕ್ಕೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಕಪಿಲ್ ದೇವ್ ಕೂಡ ಈಗ ಮಾತನಾಡಿದ್ದಾರೆ.
ಇದನ್ನೂ ಓದಿ : ಏಷ್ಯನ್ ಗೇಮ್ಸ್ನಲ್ಲಿ ಭಾರತದ ಗರ್ಜನೆ! – ಬಿಲ್ಲುಗಾರಿಕೆಯಲ್ಲಿ ಭಾರತಕ್ಕೆ 2ನೇ ಚಿನ್ನ!
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಹಾಗೂ ಶ್ರೇಷ್ಠ ಬ್ಯಾಟರ್. 2011 ರಿಂದ 2025 ರವರೆಗೆ ಸುದೀರ್ಘ 14 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಿದ್ದಲ್ಲ ಅಕ್ಷರಶಃ ರೂಲ್ ಮಾಡಿದ್ರು. 2025ರ ಮೇನಲ್ಲಿ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದರು. ಆದ್ರೆ ಕೊಹ್ಲಿ ಇನ್ನೂ ಎರಡ್ಮೂರು ವರ್ಷ ಟೆಸ್ಟ್ ಆಡ್ಬೇಕಿತ್ತು ಅನ್ನೋ ವಾದ ಇದೆ. ಈ ಬಗ್ಗೆ ಈಗ ಕಪಿಲ್ ದೇವ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಎರಡ್ಮೂರು ವರ್ಷಗಳ ಬಳಿಕ ಕೊಹ್ಲಿಗೂ ನಿವೃತ್ತಿ ನೋವು ಕಾಡುತ್ತೆ!
ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಶತಕ ಬಾರಿಸಿ ಏಕದಿನ ಮಾದರಿಯಲ್ಲಿ 15 ಸಾವಿರ ರನ್ಗಳ ಗಡಿ ದಾಟಿದ ವಿರಾಟ್ ಕೊಹ್ಲಿ ಬಗ್ಗೆ ಇಡೀ ಕ್ರಿಕೆಟ್ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸಿದೆ. ಅಟ್ ದಿ ಸೇಮ್ ಟೈಂ ಟೆಸ್ಟ್ನಲ್ಲೂ ಕೂಡ ಅವ್ರು ಇನ್ನಷ್ಟು ಸಾಧನೆ ಮಾಡ್ಬೇಕಿತ್ತು ಅನ್ನೋದು ಎಲ್ಲರ ಒಪೀನಿಯನ್. ಇತ್ತೀಚೆಗೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ನನಗೆ ವಿರಾಟ್ ಕೊಹ್ಲಿ ಬಗ್ಗೆ ಬೇಸರವಿದೆ. ಟೆಸ್ಟ್ ಪಂದ್ಯಗಳಿಂದ ಏಕೆ ನಿವೃತ್ತಿ ಪಡೆದರು ಎಂದು ನನಗೆ ಗೊತ್ತಿಲ್ಲ. ಒಬ್ಬ ಮಾಜಿ ಕ್ರಿಕೆಟಿಗನಾಗಿ ಮತ್ತು ಪ್ರೇಕ್ಷಕನಾಗಿ ಅವರು ಇನ್ನೂ ಕೆಲವು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಬೇಕಿತ್ತು ಅನಿಸುತ್ತೆ. ಬಹುಶಃ ಕೆಲ ವರ್ಷಗಳ ಬಳಿಕ ವಿರಾಟ್ ಕೊಹ್ಲಿಗೂ ಹೀಗೇ ಅನ್ನಿಸಬಹುದು. ನಾನು ಇನ್ನೂ ಸ್ವಲ್ಪ ಕಾಲ ಟೆಸ್ಟ್ ಕ್ರಿಕೆಟ್ ಆಡಬೇಕಿತ್ತು ಎಂದು ಅವರು ಖಂಡಿತವಾಗಿಯೂ ಭಾವಿಸುತ್ತಾರೆ ಎಂದಿದ್ದಾರೆ. ಹಾಗೇ ಕೊಹ್ಲಿ ಅವರ ಫಿಟ್ನೆಸ್ ಅದ್ಭುತವಾಗಿದೆ. ಅವರು ಇನ್ನೂ 2-3 ವರ್ಷಗಳ ಕಾಲ ಆರಾಮವಾಗಿ ಆಡಬಹುದಿತ್ತು ಮತ್ತು ಟೆಸ್ಟ್ ಕ್ರಿಕೆಟ್ ಕೊಹ್ಲಿ ಅವರ ಶೈಲಿಗೆ ಸೂಕ್ತವಾದ ಮಾದರಿಯಾಗಿತ್ತು. ಹಾಗಂತ ಕೊಹ್ಲಿ ಅವರಿಗೆ ಸಲಹೆ ನೀಡುವಷ್ಟು ತಾವು ದೊಡ್ಡವರಲ್ಲ ಮತ್ತು ಅವರಿಗೆ ಯಾವುದು ಉತ್ತಮವೋ ಅದನ್ನು ಅವರು ನಿರ್ಧರಿಸಿದ್ದಾರೆ ಎಂದೂ ಕಪಿಲ್ ದೇವ್ ಹೇಳಿದ್ದಾರೆ. ಅಷ್ಟಕ್ಕೂ ಇಲ್ಲಿ ವಿರಾಟ್ ಬಗ್ಗೆ ಈ ರೀತಿ ಹೇಳೋಕೆ ಕಾರಣವೇ ಅವ್ರ ಟೆಸ್ಟ್ ಕ್ರಿಕೆಟ್ ಡಾಮಿನೇಷನ್.
10,000 ರನ್ ಗಳ ಇತಿಹಾಸ ತಪ್ಪಿಸಿಕೊಂಡ ಕೊಹ್ಲಿ!
ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. ಅವ್ರ ನಾಯಕತ್ವದಲ್ಲಿ ಭಾರತ ತಂಡ ವಿದೇಶಿ ಮಣ್ಣಿನಲ್ಲಿ ಅದ್ರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸರಣಿಗಳನ್ನು ಗೆದ್ದು ಬೀಗುವ ಮೂಲಕ ಹೊಸ ಆಕ್ರಮಣಕಾರಿ ತಂಡವಾಗಿ ಬೆಳೆಯಿತು. ಟೆಸ್ಟ್ನಲ್ಲಿ 9,230 ರನ್ಸ್ ಕಲೆ ಹಾಕಿದ್ದ ವಿರಾಟ್ 10,000 ರನ್ಗಳ ಗಡಿ ದಾಟೋ ಅವಕಾಶವನ್ನ ಮಿಸ್ ಮಾಡಿಕೊಂಡ್ರು. ಹಾಗಂತ ಅವ್ರಲ್ಲಿ ಸಾಮರ್ಥ್ಯ ಇರ್ಲಿಲ್ಲ ಅಂತಲ್ಲ. ಬಿಸಿಸಿಐನಲ್ಲಿ ನಡೀತಿದ್ದ ಬಣರಾಜಕೀಯಕ್ಕೆ ಬೇಸತ್ತು ದಿಢೀರ್ ಅಂತಾ ನಿವೃತ್ತಿ ಘೋಷಣೆ ಮಾಡಿದ್ರು. ಌಂಡ್ ಇದೆಲ್ಲಕ್ಕಿಂತ ಮುಖ್ಯವಾಗಿ ಕೊಹ್ಲಿ ಯಾವತ್ತೂ ದಾಖಲೆಗಳ ಹಿಂದೆ ಬಿದ್ದವ್ರಲ್ಲ. ತಮ್ಮ ಜರ್ನಿ ಸಾಕು ಅನ್ಸಿದ್ರೆ ಸೀದಾಸಾದಾ ಎದ್ದು ಹೋಗೋ ಆಟಗಾರ. ಇದೆಲ್ಲಕ್ಕಿಂತ ಮೇನ್ ಆಗಿ ಸ್ವಾಭಿಮಾನಿ. ಇದೇ ಕಾರಣಕ್ಕೇ ಟೆಸ್ಟ್ನಿಂದಲೂ ಹೊರಬಂದ್ರು. ಈಗ ಏಕದಿನದಲ್ಲಿ ಚಾನ್ಸ್ ಬಗ್ಗೆ ಮಾತನಾಡುವವರಿಗೆ ಬ್ಯಾಟ್ನಲ್ಲೇ ಉತ್ತರ ಕೊಡ್ತಿದ್ದಾರೆ ಅಷ್ಟೇ.

ನೋಡಿರಿ


One thought on “ಟೆಸ್ಟ್ ನಿವೃತ್ತಿಗೆ ಕೊಹ್ಲಿ ಬೇಸರ? – ಇನ್ನೂ 2 ವರ್ಷ ಆಡಬೇಕಿತ್ತಾ?
ವಿರಾಟ್ ದುಡುಕಿದ್ದು ಯಾಕೆ?”