ಬಾಲಿವುಡ್‌ನಲ್ಲಿ ಮುಂದುವರೆದಿದೆ ಕನ್ನಡದ ಕಾಂತಾರ ಅಬ್ಬರ
ಹಿಂದಿ ಭಾಷೆ ಚಿತ್ರಗಳಿಗೆ ಸೋಲು… ಕನ್ನಡದ ಕಾಂತಾರಕ್ಕೆ ಗೆಲುವು

ಬಾಲಿವುಡ್‌ನಲ್ಲಿ ಮುಂದುವರೆದಿದೆ ಕನ್ನಡದ ಕಾಂತಾರ ಅಬ್ಬರಹಿಂದಿ ಭಾಷೆ ಚಿತ್ರಗಳಿಗೆ ಸೋಲು… ಕನ್ನಡದ ಕಾಂತಾರಕ್ಕೆ ಗೆಲುವು

ಕನ್ನಡದ ಸೂಪರ್ ಹಿಟ್ ಕಾಂತಾರದ ಅಬ್ಬರ ಇನ್ನೂ ಕೂಡಾ ಮುಂದುವರೆದಿದೆ. ಅದರಲ್ಲೂ ಬಾಲಿವುಡ್‌ನಲ್ಲಿ ಕಾಂತಾರ ಹವಾ ಇನ್ನೂ ಜೋರಾಗಿಯೇ ಇದೆ. ಬಾಲಿವುಡ್ ಹೀರೋಗಳೇ ತಮ್ಮ ತಮ್ಮ ಸಿನಿಮಾ ಸಾಲು ಸಾಲು ಸೋಲು ಕಾಣ್ತಿರೋದನ್ನ ನೋಡಿ ನಿರಾಶೆಯಲ್ಲಿದ್ದರೆ, ಕನ್ನಡದ ಕಾಂತಾರ ಮಾತ್ರ ದಿನೇ ದಿನೇ ಅದ್ಭುತ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಬಾಕ್ಸ್‌ ಆಫೀಸ್ ಕಲೆಕ್ಷನ್ ಕೂಡಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಇದನ್ನೂ ಓದಿ: ಮತ್ತೆ ಮುಂದಕ್ಕೆ ಹೋದ ಆದಿಪುರುಷ್ ಚಿತ್ರ ರಿಲೀಸ್ ಡೇಟ್: ಕಾರಣ ಏನು ಗೊತ್ತಾ?

ಸೆ.30 ರಂದು ಕನ್ನಡದ ಸಿನಿಮಾ ‘ಕಾಂತಾರ’ ಬಿಡುಗಡೆಯಾಗಿತ್ತು. ಸ್ಯಾಂಡಲ್‌ವುಡ್‌ನಲ್ಲಿ 100 ಕೋಟಿ ಕ್ಲಬ್‌ಗೆ ಸೇರಿದ ಈ ಚಿತ್ರ ಕನ್ನಡದಿಂದ ಹಿಂದಿಗೆ ಡಬ್ ಆದ ದಿನದಿಂದಲೂ ಉತ್ತಮ ಗಳಿಕೆ ಕಾಣುತ್ತಿದೆ.  ಈ ಚಿತ್ರ ಉತ್ತರ ಭಾರತದಲ್ಲಿ ತನ್ನದೇ ಆದ ಹವಾ ಸೃಷ್ಟಿಸಿದೆ. ಈವರೆಗೂ ಹಿಂದಿಯಲ್ಲಿ ‘ಕಾಂತಾರ’ ಸಿನಿಮಾದ ಕಲೆಕ್ಷನ್ 70 ಕೋಟಿ ರೂಪಾಯಿ ದಾಟಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆಯೇ ಸರಿ. ಇದಕ್ಕಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿಯವ್ರಿಗೆ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಿರೋ ಚಿತ್ರ ಎಲ್ಲಾ ಭಾಷೆಗಳಲ್ಲೂ ಹೊಸ ಮೈಲಿಗಲ್ಲು ಸಾಧಿಸಿದೆ.

ತೆಲುಗು ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ‘ಕಾಂತಾರ’ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಬಂಡವಾಳ ಹೂಡಿದೆ. ರಿಷಬ್ ಶೆಟ್ಟಿ ಜೊತೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಮಾನಸಿ ಸುಧೀರ್, ಕಿಶೋರ್ ಮುಂತಾದವರು ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿಯಲ್ಲೂ ರಿಲೀಸ್ ಆಗಲಿದೆ.

suddiyaana