ಶತ್ರುಗಳಿದ್ದಾರೆ.. ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ! – ನಟ ರಿಷಭ್ ಶೆಟ್ಟಿಗೆ ಎಚ್ಚರಿಕೆ ಕೊಟ್ಟ ಪಂಜುರ್ಲಿ ದೈವ

ರಿಷಭ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡಿತ್ತು. ಬಾಕ್ಸ್‌ಆಫೀಸ್‌ನಲ್ಲೂ ದಾಖಲೆ ಬರೆದಿತ್ತು. ಇದೀಗ ಸಿನಿಪ್ರಿಯರು ಕಾಂತಾರ ಚಾಪ್ಟರ್ 1ಗೆ ಕಾತರದಿಂದ ಎದುರು ನೋಡುತ್ತಿದ್ದಾರೆ. ಆದರೆ ಈ ಸಿನಿಮಾಕ್ಕೆ ವಿಘ್ನಗಳು ಎದುರಾಗುತಿವೆ. ಇದೀಗ ರಿಷಭ್ ಶೆಟ್ಟಿ ದೈವದ ಮೊರೆ ಹೋಗಿದ್ದಾರೆ. ಮಂಗಳೂರಿನಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ 5 ತಿಂಗಳಿನಲ್ಲಿ ಎಲ್ಲಾ ಒಳ್ಳೆಯದಾಗುತ್ತದೆ ಎಂದು ದೈವ ಅಭಯ ನೀಡಿದೆ.
ಇದನ್ನೂ ಓದಿ: RCBಗೆ ಬುಮ್ರಾ ಎಂಟ್ರಿಯೇ ಸವಾಲ್.. ಕೊಹ್ಲಿ & ಸಾಲ್ಟ್ ಸಿಡಿದ್ರೆ ಗೆಲುವು ಫಿಕ್ಸ್ – ಬ್ಯಾಟಿಂಗ್ ಫ್ಲಾಪ್.. MI ವೀಕ್ನೆಸ್ ಏನು?
ಮಂಗಳೂರಿನಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ. ಭೂತಕೋಲದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ಬಳಿ ರಿಷಬ್ ಕಷ್ಟ ಹೇಳಿಕೊಂಡಿದ್ದಾರೆ. ಆಗ ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನನಗೆ ಸೇವೆ ನೀಡುವ ಹರಕೆ ಹೇಳಿಕೋ, 5 ತಿಂಗಳ ಒಳಗೆ ನಿನಗೆ ಒಳ್ಳೆಯದು ಮಾಡುತ್ತೇನೆ ಎಂದು ಪಂಜುರ್ಲಿ ದೈವ ಅಭಯ ನೀಡಿದೆ.
ಅಂದಹಾಗೆ, ‘ಕಾಂತಾರ ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಈ ಸಿನಿಮಾದ ಕೆಲಸ ಭರದಿಂದ ನಡೆಯುತ್ತಿದೆ