ಸದ್ಯಕ್ಕೆ ತೆರೆಗೆ ಬರಲ್ಲ ಕಾಂತಾರ ಚಾಪ್ಟರ್ 3! – ಹೊಸ ಪ್ರಯೋಗಕ್ಕೆ ಮುಂದಾದ ರಿಷಬ್ ಶೆಟ್ಟಿ!

ಡಿವೈನ್ ಸ್ಟಾರ್ ಕಾಂತಾರ ಚಾಪ್ಟರ್ 1 ಸಿನಿಮಾ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ದಾಖಲೆ ಬರೆದಿದೆ. ಇದೀಗ ಈ ಸಿನಿಮಾದ ಮುಂದಿನ ಭಾಗ ಬರಲಿದೆ ಎಂದು ಡಿವೈನ್ ಸ್ಟಾರ್ ಹೇಳಿದ್ದರು. ಈ ಬೆನ್ನಲ್ಲೇ ಕಾಂತಾರ 3 ಸಿನಿಮಾದ ಅಪ್ಡೇಟ್ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಇದೀಗ ಈ ಬಗ್ಗೆ ಅಪ್ಡೇಟ್ ಸಿಕ್ಕಿದೆ.
ಇದನ್ನೂ ಓದಿ: ಹೆಲ್ಮೆಟ್ ಬದಲು ಬಾಣಲೆ ಧರಿಸಿ ಬೈಕ್ ರೈಡ್! – ಬೈಕ್ ಸವಾರನ ಐಡಿಯಾ ಕಂಡು ಪೊಲೀಸರೇ ಶಾಕ್!
ಡಿವೈನ್ ಸ್ಟಾರ್ ಸದ್ಯ ಕಾಂತಾರದ ಸಕ್ಸಸ್ ಸಂಭ್ರಮದಲ್ಲಿದ್ದಾರೆ. ದೇಶಾದ್ಯಂತ ನಿರ್ದೇಶ, ನಟನಾಗಿ ರಿಷಬ್ ಅವರನ್ನು ಸಿನಿ ಪ್ರೇಮಿಗಳು ಆರಾಧಿಸುತ್ತಿದ್ದಾರೆ. ಹೀಗಿರುವಾಗಲೇ ಕಾಂತಾರ ಚಾಪ್ಟರ್ 3 ಸಿನಿಮಾ ಶೂಟಿಂಗ್ ಆರಂಭ ಯಾವಾಗ ಅನ್ನೋ ಕ್ಯೂರಿಯಾಸಿಟಿ ಸಿನಿ ಪ್ರೇಮಿಗಳಿಗಿದೆ. ಆದ್ರೀಗ ಶೆಟ್ರು ಬೇರೆ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಕಾಂತಾರ ಮುಂದುವರೆದ ಅಧ್ಯಾಯ ಬರೋದಿಲ್ವಂತೆ.
ಇನ್ನು ಕಾಂತಾರ 1 ನಂತರ ರಿಷಬ್ ಶೆಟ್ಟಿಯ ಮುಂದಿನ ಚಿತ್ರ ಯಾವುದು? ಹೀಗೊಂದು ಸಂಶಯ ಎಲ್ಲರಲ್ಲೂ ಇದೆ. ಜೈ ಹನುಮಾನ್ ಚಿತ್ರದ ಶೂಟಿಂಗ್ನಲ್ಲಿ ರಿಷಭ್ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತು. ಆದ್ರೆ ಈ ಸಿನಿಮಾದ ಸೆಟ್ ನಲ್ಲೂ ರಿಷಬ್ ಶೆಟ್ಟಿ ಕಾಣಿಸೋದಿಲ್ವಂತೆ. ಡಿವೈನ್ ಚಿತ್ರಗಳಿಗೆ ಕೊಂಚ ಬ್ರೇಕ್ ಹಾಕಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದೀಗ ತೆಲುಗು ನಿರ್ಮಾಪಕರ ಜೊತೆ ಕನ್ನಡ ಸಿನಿಮಾದಲ್ಲಿ ರಿಷಬ್ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.
ವಿಜಯ್ ದೇವರಕೊಂಡ ನಿರ್ಮಾಪಕರ ಚಿತ್ರದಲ್ಲಿ ರಿಷಬ್ ಕಾಣಿಸೋ ಸಾಧ್ಯತೆ ಇದ್ದು, ತೆಲುಗಿನ ಕಿಂಗ್ ಡಮ್ ಚಿತ್ರದ ನಿರ್ಮಾಪಕರಿಗೆ ರಿಷಬ್ ಕಾಲಶೀಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಅಂದು ಕೊಂಡಂತೆ ಅದ್ರೆ ಕಿಂಗ್ ಡಮ್ ನಿರ್ಮಾಪಕರ ಜೊತೆ ರಿಷಬ್ ಸಿನಿಮಾ ಮಾಡೋದು ಬುಹತೇಕ ಪಕ್ಕಾ. ಈ ಚಿತ್ರಕ್ಕೆ ತೆಲುಗು ಸ್ಟಾರ್ ಡೈರೆಕ್ಟರ್ ಆಕ್ಷನ್ ಕಟ್ ಹೇಳೊ ಸಾಧ್ಯತೆ ಇದೆ ಎಂಬ ಮಾತೂ ಕೇಳಿ ಬರುತ್ತಿದೆ. ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರೋ ಸಾಧ್ಯತೆ ಇದೆ ಎನ್ನಲಾಗಿದೆ.

ನೋಡಿರಿ

