ಕಾಂತಾರ ಚಾಪ್ಟರ್-2 ಚಿತ್ರಕ್ಕೆ ಮುಹೂರ್ತ.. ಪೋಸ್ಟರ್ ರಿಲೀಸ್ – ತ್ರಿಶೂಲ, ಖಡ್ಗ ಹಿಡಿದು ಉಗ್ರಾವತಾರ ತಾಳಿದ ರಿಷಬ್ ಶೆಟ್ಟಿ

ಕಾಂತಾರ ಚಾಪ್ಟರ್-2 ಚಿತ್ರಕ್ಕೆ ಮುಹೂರ್ತ.. ಪೋಸ್ಟರ್ ರಿಲೀಸ್ – ತ್ರಿಶೂಲ, ಖಡ್ಗ ಹಿಡಿದು ಉಗ್ರಾವತಾರ ತಾಳಿದ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದ ಬಿಗ್ ಸಕ್ಸಸ್ ನಲ್ಲಿರೋ ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಡಬಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಾಂತಾರ 2 ಚಿತ್ರದ ಬಗೆಗಿನ ಕುತೂಹಲವನ್ನು ದ್ವಿಗುಣ ಮಾಡುವ ರೀತಿಯಲ್ಲಿ  ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಇದನ್ನೂ ಓದಿ : ಕಾರ್ತಿಕ್, ಸಂಗೀತಾ ಮಧ್ಯೆ ಹುಳಿ ಹಿಂಡ್ತೀನಿ ಎಂದ ವಿನಯ್ – ಹಳೇ ಸ್ನೇಹಿತರ ಗೆಲುವು ಸಹಿಸಿಕೊಳ್ಳದೆ ಚಡಪಡಿಸಿದ ಸಂಗೀತಾ

ದೇಶ, ಭಾಷೆಯ ಗಡಿ ದಾಟಿ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. ಇದೀಗ ಕಾಂತಾರ 2 ಚಿತ್ರೀಕರಣಕ್ಕೆ ಮುಹೂರ್ತ ನೆರವೇರಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನದಲ್ಲಿ ಕಾಂತಾರ ಚಾಪ್ಟರ್ 2 ಚಿತ್ರದ ಮುಹೂರ್ತ ನೆರವೇರಿಸಿದೆ. ಜೊತೆಗೆ ಚಿತ್ರದ ಮೊದಲ ಪೋಸ್ಟರ್ ಅನಾವರಣ ಮಾಡಿದೆ. ಕದಂಬರ ಕಾಲದಲ್ಲಿ ನಡೆಯುವ ಕಥೆಯನ್ನು ಸಿನಿಮಾ ಹೊಂದಿರಲಿದೆ ಎಂದು ಚಿತ್ರತಂಡ ತಿಳಿಸಿದೆ. ಪೋಸ್ಟರ್ ನಲ್ಲಿ ರಿಷಬ್ ಶೆಟ್ಟಿ ಉಗ್ರಾವತಾರ ತಾಳಿರುವ ದೃಶ್ಯ ಮೈ ನವಿರೇಳಿಸುವಂತಿದೆ. ಉದ್ದದ ಕೂದಲು, ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಖಡ್ಗ ಇದ್ದು ಮೈ ತುಂಬಾ ರಕ್ತ ಜಿನುಗುವಂತಿದೆ. ಮೊದಲ ಭಾಗದಲ್ಲಿ ದೈವದ ಕುರಿತು ಇದ್ದ ಕಥೆ ಕಾಂತಾರ 2ನಲ್ಲೂ  ಮುಂದುವರಿಯಲಿದೆ. ಜನವರಿಯಿಂದ ಶೂಟಿಂಗ್ ಆರಂಭವಾಗಲಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.

 

Shantha Kumari