ಜನರ ನಂಬಿಕೆ, ಆಚರಣೆ ತೆರೆದಿಟ್ಟ ಡಿವೈನ್ ಸ್ಟಾರ್ – ಕಾಂತಾರ ಚಾಪ್ಟರ್ 1 ನಲ್ಲಿ ಶಿವನ ಕತೆ ಹೇಳಿದ ರಿಷಭ್ ಶೆಟ್ಟಿ!

ಸಿನಿ ಪ್ರೇಮಿಗಳು ಕಾಯುತ್ತಿದ್ದ ಬಹುನೀರಿಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. 3 ನಿಮಿಷದ ಟ್ರೈಲರ್ ಹೊಸ ಪ್ರಪಂಚವನ್ನೇ ತೆರೆದಿಟ್ಟಿದೆ. ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಬಬರ್ದಸ್ತ್ ಆಕ್ಷನ್ ನಲ್ಲಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್ – ಚಿನ್ನಯ್ಯನಿಗೆ ಲಕ್ಷ ಲಕ್ಷ ಹಣ ಕೊಟ್ಟವರಿಗೆ ಸಂಕಷ್ಟ!
ಹೊಂಬಾಳೆ ಫಿಲ್ಮ್ ನಿರ್ಮಿಸಿದ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಕಾಂತಾರ ಚಾಪ್ಟರ್ 1 ಇದೇ ಅಕ್ಟೋಬರ್ 2 ರಂದು ರಿಲೀಸ್ ಆಗ್ತಿದೆ. ಈ ಸಿನಿಮಾ ಕುರಿತು ಸಾಕಷ್ಟು ಹೈಪ್ ಇದ್ದು ಚಿತ್ರತಂಡ ಕಳೆದ ಕೆಲವು ದಿನಗಳಿಂದ ಕೈಬಿಟ್ಟಿದ್ದ ಕೆಲವು ಗ್ಲಿಂಪ್ಸ್, ವಿಡಿಯೋ, ಫೋಟೋಗಳು ಇನ್ನಷ್ಟು ಥ್ರಿಲ್ ಮೂಡಿಸಿದ್ದವು. ಇದೀಗ ಟ್ರೈಲರ್ ರಿಲೀಸ್ ಆಗಿದ್ದು ಕಾಂತಾರ ಸಿನಿಮಾದ ಫ್ಯಾನ್ಸ್ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲಗೊಳ್ಳುವಂತೆ ಮಾಡಿದೆ.
ಕಾಂತಾರ ಚಾಪ್ಟರ್ 1 ಸಿನಿಮಾದ ಟ್ರೈಲರ್ ಅದ್ಭುತವಾಗಿ ಮೂಡಿ ಬಂದಿದೆ. ರಿಷಭ್ ಶೆಟ್ಟಿ ಮತ್ತೊಮ್ಮೆ ಡಿವೈನ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರುಕ್ಮಿಣಿ ವಸಂತ್ ಇಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ರಿಷಬ್ ಶೆಟ್ಟಿ ಅವರು ಕಾಡಿನಲ್ಲಿ ಬದುಕುವ ಜನರ ಸಮೂಹವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ಕಾಣಿಸಿಕೊಂಡರೆ, ಬಾಲಿವುಡ್ ನಟ ಇಲ್ಲಿ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಕಾಡು, ಕಾಡಿನ ಜನರು, ಅವರ ನಂಬಿಕೆ, ಆಚರಣೆ, ಜೀವನದ ಹೋರಾಟ ಎಲ್ಲವನ್ನೂ ಕಾಂತಾರ ಚಾಪ್ಟರ್ 1ನಲ್ಲಿ ಕಟ್ಟಿಕೊಡಲಾಗ್ತಿದೆ. ಕಾಂತಾರ ಚಾಪ್ಟರ್ ಒನ್ ಚಿತ್ರ ಅಕ್ಟೋಬರ್-2 ರಂದು ರಿಲೀಸ್ ಆಗುತ್ತಿದೆ. 7ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ದೇಶ ವಿದೇಶದಲ್ಲೂ ಈ ಸಿನಿಮಾ ತೆರೆಗೆ ಬರ್ತಿದೆ.

ನೋಡಿರಿ

