ಕಾಂತಾರ ಚಾಪ್ಟರ್‌ 1 ಟ್ರೇಲರ್‌ ರಿಲೀಸ್‌ ಗೆ ಮುಹೂರ್ತ ಫಿಕ್ಸ್‌! – ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಶೆಟ್ರ ಸಿನಿಮಾ!

ಕಾಂತಾರ ಚಾಪ್ಟರ್‌ 1 ಟ್ರೇಲರ್‌ ರಿಲೀಸ್‌ ಗೆ ಮುಹೂರ್ತ ಫಿಕ್ಸ್‌! – ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಶೆಟ್ರ ಸಿನಿಮಾ!

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆ ಇದೆ. ಅಕ್ಟೋಬರ್‌ 2 ರಂದು ರಿಲೀಸ್‌ ಆಗಲಿದೆ. ಇದೀಗ ಕಾಂತಾರ ಚಾಪ್ಟರ್‌ 1 ಸಿನಿಮಾದ ಟ್ರೇಲರ್ ಯಾವಾಗ ಬಿಡುಗಡೆ ಯಾವಾಗ ಅನ್ನೋ ಪ್ರಶ್ನೆ ಅನೇಕರನ್ನ ಕಾಡ್ತಿದೆ. ಇದೀಗ ಈ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತಮಿತ್ರನ ಹತ್ಯೆ – ಭಾಷಣ ಮಾಡುವಾಗಲೇ ಚಾರ್ಲಿ ಕಿರ್ಕ್ ಮೇಲೆ ಗುಂಡೇಟು

ಕಾಂತಾರ ಚಾಪ್ಟರ್‌ 1 ಸಿನಿಮಾ ರಿಲೀಸ್‌ ಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ಇಲ್ಲಿವರೆಗೂ  ಚಿತ್ರದ ಪೋಸ್ಟರ್, ಮೇಕಿಂಗ್‌ ದೃಶ್ಯ ಹೊರತುಪಡಿಸಿ ತಂಡದ ಕಡೆಯಿಂದ ಯಾವುದೇ ಅಪ್​ಡೇಟ್ ಕೂಡ ಸಿಕ್ಕಿಲ್ಲ. ಸಿನಿಮಾದ ಹಾಡುಗಳು ಹೇಗಿವೆ ಎಂಬ ಬಗ್ಗೆಯೂ ತಂಡದವರು ಹಿಂಟ್ ನೀಡಿಲ್ಲ. ಇದೀಗ ಸಿನಿಮಾ ಟ್ರೇಲರ್ ರಿಲೀಸ್‌ಗೆ ಕಾಯುತ್ತಿದ್ದಾಗ ಫ್ಯಾನ್ಸ್‌ ಗೆ ಸಿನಿಮಾ ತಂಡ ಗುಡ್‌ನ್ಯೂಸ್‌ ಕೊಟ್ಟಿದೆ. ಸೆಪ್ಟೆಂಬರ್ 20ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ. ಈ ವಿಚಾರ ಫ್ಯಾನ್ಸ್ ಖುಷಿಗೆ ಕಾರಣ ಆಗಿದೆ. ಟ್ರೇಲರ್ ನೋಡಿದ ಬಳಿಕ ಸಿನಿಮಾದ ಬಗ್ಗೆ ಒಂದಷ್ಟು ಐಡಿಯಾ ಸಿಗಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಕಾಂತಾರ ಚಾಪ್ಟರ್ 1 ಇಂಡಿಯಾ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸಹ ಏಕಕಾಲಕ್ಕೆ ಅಕ್ಟೋಬರ್​ 2ರಂದು ಕಾಂತಾರ ಚಾಪ್ಟರ್​ 1 ಬಿಡುಗಡೆ ಆಗಲಿದೆ. ಭಾರತ ಸೇರಿದಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಇನ್ನೂ ಹಲವೆಡೆ ಕಾಂತಾರ ಚಾಪ್ಟರ್ 1 ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಇದೀಗ ಸಿನಿಮಾ ರಿಲೀಸ್‌ ಗೂ ಮುನ್ನವೇ ಎಲ್ಲಾ ಭಾಷೆಗಳ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಮ್​ಗೆ ಮಾರಾಟವಾಗಿದೆ. ಸಿನಿಮಾ ಬಿಡುಗಡೆ ಆದ ಎಂಟು ವಾರಗಳ ನಂತರ ಓಟಿಟಿಯಲ್ಲಿ ಕಾಂತಾರ ಚಾಪ್ಟರ್​ 1 ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.‌ ಬರೋಬ್ಬರಿ ₹ 125 ಕೋಟಿಗೆ ಓಟಿಟಿ ರೈಟ್ಸ್ ಸೇಲ್ ಆಗಿದೆ.

Shwetha M