ರಕ್ತಸಿಕ್ತ ಅವತಾರದಲ್ಲಿ ಡಿವೈನ್‌ಸ್ಟಾರ್ ಘರ್ಜನೆ! – ಕಾಂತಾರ ಚಾಪ್ಟರ್ 1 ಪೋಸ್ಟರ್ ರಿಲೀಸ್

ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಫ್ಯಾನ್ಸ್ ಕಾಯ್ತಾ ಇದ್ರು. ಇದೀಗ ಕೊನೆಗೂ ರಿಷಭ್ ಶೆಟ್ರು ಫ್ಯಾನ್ಸ್ ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.. ನೂರು ವಿಘ್ನಗಳ ನಡುವೆಯೂ ಕಾಂತಾರ ಚಾಷ್ಟರ್ 1 ಬಿಡುಗಡೆಗೆ ಸಜ್ಜಾಗಿದೆ. ಇದೇ ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲಂಸ್ ಅಪ್‌ಡೇಟ್ ಕೊಟ್ಟಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು – 58 ವರ್ಷಗಳ ಇತಿಹಾಸ ಅಳಿಸಿ ಹಾಕಿದ ಗಿಲ್ ಪಡೆ
ಕಳೆದ 3 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ವಿಶ್ವ ಮಟ್ಟದಲ್ಲೇ ಸದ್ದು ಮಾಡಿತ್ತು.. ಈ ಸಿನಿಮಾ ಸಕ್ಸಸ್ ಕಾಣುತ್ತಿದ್ದಂತೆ ರಿಷಭ್ ಶೆಟ್ಟಿ ಕಾಂತಾರಾ ಚಾಪ್ಟರ್ 1 ಸಿನಿಮಾಗೆ ಮುನ್ನುಡಿ ಇಟ್ರು.. ಆದ್ರೆ ಕಾಂತಾರ: ಚಾಪ್ಟರ್ 1 ಚಿತ್ರದ ಸೆಟ್ನಲ್ಲಿ ಸಾಕಷ್ಟ ಅವಘಡಗಳು ಸಂಭವಿಸಿದವು. ಈ ಕಾರಣದಿಂದ ಸಿನಿಮಾ ರಿಲೀಸ್ ವಿಳಂಬ ಆಗಲಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಈ ವದಂತಿಗಳನ್ನು ತಳ್ಳಿಹಾಕಿರುವ ಚಿತ್ರತಂಡ ನಿಗದಿತ ದಿನಾಂಕದಂದೇ ಸಿನಿಮಾ ರಿಲೀಸ್ ಮಾಡುವುದಾಗಿ ಹೇಳಿದೆ. ಕಾಂತಾರ ಚಾಪ್ಟರ್ 1 ಅಕ್ಟೋಬರ್ 2ರಂದು ತೆರೆಗೆ ಬರಲು ಸಜ್ಜಾಗುತ್ತಿದೆ. ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ, ಏಕಕಾಲಕ್ಕೆ 7 ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ಹೊಂಬಾಳೆ ಫಿಲಂಸ್ ಮಾಹಿತಿ ಹಂಚಿಕೊಂಡಿದೆ.
ರಿಷಬ್ ಶೆಟ್ಟಿ ಅವರಿಗೆ ಇಂದು (ಜುಲೈ 7) ಜನ್ಮದಿನ. ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಹೊತ್ತಿನಲ್ಲೇ ‘ಕಾಂತಾರ: ಚಾಪ್ಟರ್ 1ʼ ಚಿತ್ರತಂಡದಿಂದ ಬಿಗ್ ಅಪ್‌ಡೇಟ್ ಸಿಕ್ಕಿದೆ. ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿರೋ ತಂಡ ವಿಶೇಷ ಮಾಹಿತಿ ಒಂದನ್ನು ನೀಡಿದೆ. ಇದು ಡಿವೈನ್ ಸ್ಟಾರ್ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.
ಈ ಬಾರಿ ಅ.2ರ ಗಾಂಧಿ ಜಯಂತಿ ಗುರುವಾರ ಬಿದ್ದಿದೆ. ಹೀಗಾಗಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಿನಿಮಾ ಸಹಜವಾಗಿಯೇ ಒಳ್ಳೆಯ ಕಲೆಕ್ಷನ್ ಮಾಡಲಿದೆ. ಆ ಬಳಿಕ ಅಕ್ಟೋಬರ್ ಮಧ್ಯದಲ್ಲಿ ದೀಪಾವಳಿ ಬರಲಿದೆ. ಇದು ಕೂಡ ಸಿನಿಮಾಗೆ ಸಹಕಾರಿ ಆಗಲಿದೆ. ಇಂಥ ಚಾನ್ಸ್ನ ತಂಡ ಬಿಡಲು ರೆಡಿ ಇಲ್ಲ. ಹೀಗಾಗಿ, ಅದಕ್ಕೆ ತಕ್ಕಂತೆ ಕೆಲಸ ನಡೆಯುತ್ತಿದ್ದು, ಅ.2ರಂದೇ ಸಿನಿಮಾ ರಿಲೀಸ್ ತೆರೆಗೆ ಬರುವುದಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಹುಟ್ಟುಹಬ್ಬದ ದಿನವೇ ರಿಷಬ್‌ಗೆ ಭರ್ಜರಿ ಗಿಫ್ಟ್ ಕೊಟ್ಟಿರುವ ಚಿತ್ರತಂಡ ʻದಂತಕಥೆಯ ಮುನ್ನುಡಿ.. ಆ ನುಡಿಗೊಂದು ಪರಿಚಯ.. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ.ʼ ಎನ್ನುವ ಸಾಲಿನೊಂದಿಗೆ ವಿಶೇಷ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ. ಈ ಅದ್ಧೂರಿ ಪೋಸ್ಟರ್‌ನಲ್ಲಿ ರಿಷಭ್ ಶೆಟ್ಟಿ ಕೈಯಲ್ಲಿ ಕೊಡಲಿ ಹಾಗೂ ಗುರಾಣಿ ಹಿಡಿದಿದ್ದಾರೆ. ಗುರಾಣಿಗೆ ಬಾಣಗಳು ಚುಚ್ಚಿವೆ. ಹಿಂಭಾಗದಲ್ಲಿ ಬೆಂಕಿ ಇದೆ. ರಿಷಬ್ ಶೆಟ್ಟಿ ಮುಖದಲ್ಲಿ ಆಕ್ರೋಶದ ಜ್ವಾಲೆ ಎದ್ದು ಕಾಣುತ್ತಿದೆ. ರಕ್ತಸಿಕ್ತ ಅವತಾರದಲ್ಲಿ ಘರ್ಜಿಸುತ್ತಿರುವ ಡಿವೈನ್‌ಸ್ಟಾರ್ ಅವತಾರ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಟ್ಟಿದೆ.

ನೋಡಿರಿ

