ಆಸ್ಕರ್‌ ಮೇಲೆ ಕಾಂತಾರ – 1 ಕಣ್ಣು.. ನೂರು ವಿಘ್ನ.. ರಿಲೀಸ್‌ ಯಾವಾಗ? – OCT – 7.. ಗುಡ್‌ನ್ಯೂಸ್‌ ಕೊಡ್ತಾರಾ ಶೆಟ್ರು?

ಆಸ್ಕರ್‌ ಮೇಲೆ ಕಾಂತಾರ – 1 ಕಣ್ಣು.. ನೂರು ವಿಘ್ನ.. ರಿಲೀಸ್‌ ಯಾವಾಗ? – OCT – 7.. ಗುಡ್‌ನ್ಯೂಸ್‌ ಕೊಡ್ತಾರಾ ಶೆಟ್ರು?

ಕಾಂತಾರ.. ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲವನ್ನೇ ಸೃಷ್ಟಿ ಮಾಡಿದ ಸಿನಿಮಾ. ದೇಶ ವಿದೇಶದಲ್ಲೂ ಈ  ಕನ್ನಡ ಸಿನಿಮಾ ಸದ್ದು ಮಾಡಿತ್ತು. ಸಿನಿ ಪ್ರೇಮಿಗಳು ಕಾಂತಾರವನ್ನ ಕೊಂಡಾಡಿದ್ರು.. ಕಾಂತಾರ ಚಿತ್ರವನ್ನ ನೋಡಿದವ್ರು ಇನ್ನು ಅದೇ ಹ್ಯಾಂಗೋವರ್ ನಲ್ಲೇ ಇದ್ದಾರೆ. ಈಗ ಕಾಂತಾರ ಚಾಪ್ಟರ್-1 ಗಾಗಿ ಭರ್ಜರಿ ಸಿದ್ಧತೆ ನಡೆದಿದೆ. ಕಾಂತಾರ ಚಾಪ್ಟರ್‌ 1 ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್‌ ಮಾಡಿದೆ..  ಕಾಂತಾರ ಚಿತ್ರದ ಶಿವನ ಪ್ರೀಕ್ವೆಲ್ ಕಥೆಯನ್ನೆ ಈ ಚಿತ್ರದಲ್ಲಿ ಹೇಳ್ತೀವಿ ಅಂತಲೂ ರಿಷಬ್ ಶೆಟ್ರು ಹೇಳಿಕೊಂಡಿದ್ದಾರೆ. ಆದ್ರೆ ಕಾಂತಾರಕ್ಕೆ ಒಂದಾದ ಮೇಲೊಂದು ವಿಘ್ನಗಳು ಎದುರಾಗ್ತಾನೆ ಇದೆ.. ಇದೀಗ ನೂರಾರು ವಿಘ್ನಗಳ ನಡುವೆಯೂ ಕಾಂತಾರ 1 ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.. ಅಷ್ಟೇ ಅಲ್ಲ ಕಾಂತಾರ ಚಾಪ್ಟರ್‌ 1 ಆಸ್ಕರ್‌ ರೇಸ್‌ನಲ್ಲೂ ಇರಲಿದೆ ಅಂತ ಹೇಳಲಾಗ್ತಿದೆ.

ಇದನ್ನೂ ಓದಿ: ಭಾರತೀಯ ರೈಲ್ವೆಯಿಂದ ಹೊಸ App ರಿಲೀಸ್- ರೈಲ್ಒನ್ ನಿಂದ ಪ್ರಯಾಣಿಕರಿಗೆ ಏನೆಲ್ಲಾ ಲಾಭ?

ಕಾಂತಾರ.. ಇಡೀ ಜಗತ್ತು ಕರಾವಳಿಯತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ.. ಕೇವಲ 15 ಕೋಟಿಯಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ 300 ಕೋಟಿ ಕಲೆಕ್ಷನ್ ಮಾಡಿತ್ತು. ತುಳುನಾಡಿನ ಆಚರಣೆ, ನಂಬಿಕೆ, ಸಂಪ್ರದಾಯಗಳನ್ನ ವಿಶ್ವಕ್ಕೆ ಪರಿಚಯ ಮಾಡಿಕೊಟ್ಟಿತ್ತು ಈ ಸಿನಿಮಾ.  ಕಾಂತಾರ ಸಕ್ಸಸ್ ಬೆನ್ನಲ್ಲೇ ಕಾಂತಾರ ಪ್ರೀಕ್ವೆಲ್ ಮಾಡಲು ಹೊರಟ್ರು.. ದೈವದ ಅಭಯ ಪಡೆದು ಈ ಬಾರಿ ಕಾಂತಾರದ ಹತ್ತು ಪಟ್ಟು ದೊಡ್ಡ ಸಿನಿಮಾವನ್ನ ಮಾಡ್ತೇನೆ ಅಂತ ಅದ್ಧೂರಿ ಶುಭಾರಂಭ ಮಾಡಿದ್ರು ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ. ಆದರೆ ಕಾಂತಾರ ಪ್ರೀಕ್ವೆಲ್ ನ ಶೂಟಿಂಗ್ ಅಂದುಕೊಂಡಂತೆ ಸುಸೂತ್ರವಾಗಿ ನಡೆಯುತ್ತಿಲ್ಲ. ಶೂಟಿಂಗ್ ಶುರುವಾದಾಗಿನಿಂದ ಒಂದಲ್ಲ ಒಂದು ಅವಘಡಗಳು ನಡೆಯುತ್ತಲೇ ಇದಾವೆ. ಕಾಕಾತಾಳಿಯವೋ? ಅಥವಾ ದೈವದ ಶಾಪವೋ ಏನೋ ಗೊತ್ತಿಲ್ಲ. ಕಾಂತಾರ ಸಿನಿಮಾದ ತಂಡದ ಮೂವರು ಉಸಿರು ಚೆಲ್ಲಿದ್ದಾರೆ. ಸಿನಿಮಾ ಸೆಟ್‌ನಲ್ಲೂ ಕೆಲ ಅವಘಡಗಳು ನಡೆದ್ದು ನಿಜಕ್ಕೂ ಬೇಸರದ ಸಂಗತಿ. ಇದೀಗ ಎಲ್ಲ ಅಡೆತಡೆಗಳನ್ನ ಮೀರಿ ಕಾಂತಾರ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಅಂದುಕೊಂಡ ದಿನದಂತೆ ಸಿನಿಮಾ ರಿಲೀಸ್‌ ಆಗುತ್ತಿದೆ..

ಹೌದು, ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಶೂಟಿಂಗ್‌ ಕೊನೆಯ ಹಂತದಲ್ಲಿದೆ ಎಂದು ಹೇಳಲಾಗ್ತಿದೆ. ಹಾಲಿವುಡ್ ಸಿನಿಮಾಗಳಿಗೆ ಸೆಟ್ ಹಾಕುವಂತೆ ಬಹಳ ಅದ್ಧೂರಿಯಾಗಿ ಸೆಟ್ ಹಾಕಿ ‘ಕಾಂತಾರ’- 1 ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ನೂರಾರು ಸಹಕಲಾವಿದರನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು ಕೂಡ ಈ ಸಿನಿಮಾಗೆ ಕೈ ಜೋಡಿಸಿದ್ದಾರೆ. ಅಂದಾಜು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ರಿಷಬ್ ಶೆಟ್ಟಿ ಹುಟ್ಟೂರಿನಲ್ಲೇ ಬೀಡು ಬಿಟ್ಟು ಸಿನಿಮಾ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಆದ್ರೆ ಕಾಂತಾರ  ಚಾಪ್ಟರ್‌ 1 ನಲ್ಲಿ ಯಾರೆಲ್ಲಾ ಆಕ್ಟ್‌ ಮಾಡ್ತಿದ್ದಾರೆ ಅನ್ನೋದ್ರ ಬಗ್ಗೆ ರಿಷಭ್‌ ಶೆಟ್ರು ಇಲ್ಲಿವರೆಗೂ ಗುಟ್ಟು ಬಿಟ್ಟು ಕೊಟ್ಟಿಲ್ಲ.. ಒಂದೆರಡು ಪೋಸ್ಟರ್ ಹಾಗೂ ಅನೌನ್ಸ್‌ಮೆಂಟ್ ಟೀಸರ್ ಬಿಟ್ಟರೆ ಚಿತ್ರದ ಯಾವುದೇ ಗ್ಲಿಂಪ್ಸ್ ಇನ್ನು ಹೊರಬಿದ್ದಿಲ್ಲ. ಇದೀಗ ಅದಕ್ಕೆ ಸಮಯ ಹತ್ತಿರವಾಗುತ್ತಿದೆ. ಜುಲೈ 7ರಂದು ರಿಷಬ್ ಶೆಟ್ಟಿ ಹುಟ್ಟುಹಬ್ಬ. ಅದೇ ದಿನ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗೋ ಸಾಧ್ಯತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ  ವಿಚಾರ ಭಾರಿ ಚರ್ಚೆ ಚರ್ಚೆಯಲ್ಲಿದೆ.

ಸಾಮಾನ್ಯವಾಗಿ ಸ್ಟಾರ್ ನಟರ ಹುಟ್ಟುಹಬ್ಬದಕ್ಕೆ ಅವರ ನಟಿಸುತ್ತಿರುವ ಸಿನಿಮಾ ಟೀಸರ್, ಪೋಸ್ಟರ್ ರಿಲೀಸ್ ಮಾಡೋದು ವಾಡಿಕೆ. ಈ ಬಾರಿ ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕಾಂತಾರ ಚಾಪ್ಟರ್‌ 1 ಟೀಸರ್ ಗಿಫ್ಟ್ ಸಿಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅದರಲ್ಲೇ ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಸಿಗಲಿದೆ. ಕಾಂತಾರ ಚಿತ್ರದಲ್ಲಿ ಕಾಡು ಹಾಗೂ ಕರಾವಳಿ ದೈವಗಳ ಕಥೆಯನ್ನು ರಿಷಬ್ ಹೇಳಿದ್ದರು. ಸೀಕ್ವೆಲ್‌ನಲ್ಲಿ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಹೊಸ ಪಾತ್ರದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಇನ್ನು ಕಾಂತಾರ ರಿಲೀಸ್‌ ಆಗಿ 3 ವರ್ಷ ಆಗ್ತಾ ಬಂತು.. ಕಾಂತಾರ ಚಾಪ್ಟರ್‌  1 ಸಿನಿಮಾ ತೆರೆಗೆ ಬರೋದು ಯಾವಾಗ ಅನ್ನೋ ಪ್ರಶ್ನೆ ಅಭಿಮಾನಿಗಳಿಗೆ ಕಾಡ್ತಿದೆ.. ಅಕ್ಟೋಬರ್ 2ರಂದು ಸಿನಿಮಾ ರಿಲೀಸ್‌ ಗೆ ತಯಾರಿ ನಡೀತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಲಾಗುತ್ತಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ತೆರೆಗಪ್ಪಳಿಸಲಿದೆ. ಚಿತ್ರವನ್ನು ಆಸ್ಕರ್ ರೇಸ್‌ಗೆ ತೆಗೆದುಕೊಂಡು ಹೋಗಲು ನಿರ್ಮಾಪಕರು ಮುಂದಾಗಿದ್ದಾರೆ. ಚಿತ್ರದ ಕೊನೆ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ ಎಂದು ಹೇಳಲಾಗ್ತಿದೆ. ಒಟ್ಟಾರೆ ಕಾಂತಾರ ಚಾಪ್ಟರ್‌ 1 ಸಿನಿಮಾ ಈಗ ಭಾರಿ ನಿರೀಕ್ಷೆ ಹುಟ್ಟಿಸಿರುವುದು ಸುಳ್ಳಲ್ಲ.. ಸಾಕಷ್ಟು ವಿಘ್ನಗಳ ನಡುವೆಯೂ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.. ಕಾಂತಾರ ಸಿನಿಮಾದಂತೆ ಕಾಂತಾರ ಚಾಪ್ಟರ್‌ 1 ಕೂಡ ರಿಷಭ್‌ ಶೆಟ್ರ ಕೈ ಹಿಡಿಯುತ್ತಾ ಅಂತಾ ಕಾದುನೋಡ್ಬೇಕು.

Shwetha M