ಕಾಂತಾರ ಚಾಪ್ಟರ್‌ 1 ಕನಸು ಭಗ್ನ! – ಸಾವಿರ ಕೋಟಿ ರೂಪಾಯಿ ಕಲೆಕ್ಷನ್‌ ಮಾಡಲ್ವಾ ಶೆಟ್ರ ಸಿನಿಮಾ?

ಕಾಂತಾರ ಚಾಪ್ಟರ್‌ 1 ಕನಸು ಭಗ್ನ! – ಸಾವಿರ ಕೋಟಿ ರೂಪಾಯಿ ಕಲೆಕ್ಷನ್‌ ಮಾಡಲ್ವಾ ಶೆಟ್ರ ಸಿನಿಮಾ?

ಸದ್ಯ ರಿಷಬ್‌ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್‌ ಕಾಂಬಿನೇಷನ್‌ ಕಾಂತಾರ ಚಾಪ್ಟರ್‌ 1 ದೇಶ-ವಿದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಜಾಗತಿಕವಾಗಿ ಈಗಾಗಲೇ 800 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದ್ದು, ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರ ಎನಿಸಿಕೊಂಡಿದೆ. ಅಲ್ಲದೆ ಕನ್ನಡ ಮತ್ತು ಹಿಂದಿಯಲ್ಲಿ 200 ಕೋಟಿ ರೂ. ಕ್ಲಬ್‌ ಸೇರುವ ಮೂಲಕ ಇತಿಹಾಸ ಬರೆದಿದೆ. ಆದ್ರೀಗ ಸಿನಿಮಾ ಪಂಡಿತರು ಶಾಕಿಂಗ್‌ ಭವಿಷ್ಯವೊಂದನ್ನ ನುಡಿದಿದ್ದಾರೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ತಲುಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ಪರ್ಧಿಗಳಿಗೆ ಮನೆಯಿಂದ ಕಾಲ್‌ ಬಂದ್ರೂ ಮಾತಾಡಿಲ್ಲ ಯಾಕೆ? – ಬಿಗ್‌ಬಾಸ್‌ನಲ್ಲಿ ರಘು ಫೇವರಿಸಂ ಆಟ?

ಕಾಂತಾರ: ಚಾಪ್ಟರ್  ಸಿನಿಮಾದ ಗಳಿಕೆ ಸಾವಿರ ಕೋಟಿ ತಲುಪಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದ್ರೆ ದೀಪಾವಳಿ ಸಮಯದಲ್ಲಿ ಸಿನಿಮಾ ಗಳಿಕೆ ಕುಸಿದಿತ್ತು. ಆದ್ರೂ ಈಗ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಆದ್ರೀಗ ಕಾಂತಾರ ಚಾಪ್ಟರ್‌ 1 ಸಿನಿಮಾ ಒಟಿಟಿ ರಿಲೀಸ್‌ಗೂ ಡೇಟ್‌ ಫಿಕ್ಸ್‌ ಆಗಿದೆ.  ಅಕ್ಟೋಬರ್ 31ರಂದು ಒಟಿಟಿಗೆ ಬರುತ್ತಿದೆ. ಇದೀಗ ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಗಳಿಸಲು ಸಾಧ್ಯವಿಲ್ಲ ಎಂದು ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದಾರೆ.

ಸಾಮಾನ್ಯವಾಗಿ ಸಿನಿಮಾಗಳು ರಿಲೀಸ್ ಆದ 50 ದಿನಗಳ ಬಳಿಕ ಒಟಿಟಿಗೆ ಬರೋದು ವಾಡಿಕೆ. ಆದರೆ, ಕೆಲವು ಫ್ಲಾಪ್ ಸಿನಿಮಾಗಳು ಒಂದೇ ತಿಂಗಳಿಗೆ ಒಟಿಟಿಗೆ ಕಾಲಿಟ್ಟ ಉದಾಹರಣೆ ಇದೆ. ಕಾಂತಾರ: ಚಾಪ್ಟರ್ 1 ಸೂಪರ್ ಹಿಟ್ ಆದ ಹೊರತಾಗಿಯೂ ಸಿನಿಮಾ ಕೇವಲ 30 ದಿನಕ್ಕೆ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಒಟಿಟಿಗೆ ಕಾಲಿಡುತ್ತಿದೆ. ಇನ್ನು ಕೆಲವು ದಿನ ಸಿನಿಮಾ ಥಿಯೇಟರ್​​ನಲ್ಲಿ ಪ್ರದರ್ಶನ ಕಂಡರೂ ಸಿನಿಮಾ ಸಾವಿರ ಕೋಟಿ ರೂಪಾಯಿ ತಲುಪುತ್ತಿತ್ತೇನೋ. ಆದರೆ, ಚಿತ್ರ ಒಟಿಟಿಗೆ ಬರುತ್ತಿದೆ. ಸಿನಿಮಾ ಒಟಿಟಿಗೆ ಬಂದ ಬಳಿಕವೂ ಥಿಯೇಟರ್​ನಲ್ಲಿ ಚಿತ್ರ ಪ್ರದರ್ಶನ ಕಾಣುತ್ತದೆ ನಿಜ. ಆದರೆ, ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಆಗುವುದಿಲ್ಲ. ಕೆಲ ವಾರಗಳ ಬಳಿಕ ಆ ಪ್ರದರ್ಶನವನ್ನು ಕೂಡ ನಿಲ್ಲಿಸಲಾಗುತ್ತದೆ ಎನ್ನಲಾಗ್ತಿದೆ.

ಕಾಂತಾರ: ಚಾಪ್ಟರ್ 1 ಸಿನಿಮಾ ಥಿಯೇಟರ್​​ ಅನುಭವದಲ್ಲಿ ಅದ್ಭುತ ಎನಿಸಿಕೊಂಡಿದೆ. ಆದರೆ, ಒಟಿಟಿಯಲ್ಲಿ ಇದೇ ರೀತಿಯ ಅನುಭವ ಕೊಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಒಟಿಟಿ ಮಂದಿ ಸಿನಿಮಾನ ಯಾವ ರೀತಿಯಲ್ಲಿ ಸ್ವಿಕರಿಸುತ್ತಾರೆ ಎಂಬ ಕುತೂಹಲ ಮೂಡಿದೆ.

Shwetha M