ವಿದೇಶದಲ್ಲೂ ಕಾಂತಾರ ಕ್ರೇಜ್! – ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲೂ ಸಿನಿಮಾ ರಿಲೀಸ್!

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬರೆದು, ನಿರ್ದೇಶಿಸಿ, ನಟಿಸಿರುವ ಸಿನಿಮಾ ಕಾಂತಾರ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಕಾಂತಾರ ಸಿನಿಮಾದ ಮೊದಲ ಭಾಗ ತೆರೆಗೆಬರಲು ಸಿದ್ಧವಾಗಿದೆ. ಇಡೀ ಭಾರತೀಯ ಚಿತ್ರರಂಗವೇ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದು, ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2ಕ್ಕೆ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ. ಇದೀಗ ಸ್ಯಾಂಡಲ್‌ವುಡ್ ಸಿನಿಮಾ ವಿದೇಶಗಳಲ್ಲೂ ಸದ್ದು ಮಾಡ್ತಿದೆ.
ಇದನ್ನೂ ಓದಿ: ಸನ್ ರೂಫ್ ಮೇಲೆ ನಿಂತಿದ್ದ ಬಾಲಕನ ತಲೆಗೆ ಬಡಿದ ಕಬ್ಬಿಣದ ರಾಡ್! – ಕೇಸ್ ದಾಖಲು.. ಶಿಕ್ಷೆ ಏನು ಗೊತ್ತಾ?
ಹೌದು.. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಪ್ಯಾನ್ಸ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದೆ. ಇದೇ ಅಕ್ಟೋಬರ್ 2 ರಂದು ಈ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಇದೀಗ ವಿದೇಶದಲ್ಲೂ ಈ ಸಿನಿಮಾ ರಿಲೀಸ್ ಮಾಡಲಾಗ್ತಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿನ ವೀಕ್ಷಕರಿಗಾಗಿ ಈ ಚಿತ್ರವನ್ನು ಡ್ರೀಮ್ ಸ್ಕ್ರೀನ್ಸ್ ಇಂಟರ್‌ನ್ಯಾಷನಲ್ ವಿತರಿಸಲಿದ್ದು, ಅಲ್ಲಿನ ಸಿನಿಪ್ರಿಯರು ಈ ದೈವಿಕ ಕಥೆಯನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜಾಗತಿಕವಾಗಿ ಮೆಚ್ಚುಗೆ ಗಳಿಸಿದ್ದ ಕಾಂತಾರ (2022) ಚಿತ್ರದ ಪ್ರಿಕ್ವೆಲ್ ಆಗಿರುವ ಈ ಸಿನಿಮಾ, ನಮ್ಮ ಸಂಸ್ಕೃತಿ, ಜಾನಪದ ಮತ್ತು ಆಧ್ಯಾತ್ಮಿಕತೆಯ ಬೇರುಗಳನ್ನು ಮತ್ತಷ್ಟು ಆಳವಾಗಿ ಪರಿಚಯಿಸಲಿದೆ.
ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವು ಭಾರತೀಯ ಹಾಗೂ ಜಾಗತಿಕ ಸಿನಿಪ್ರಿಯರಿಗೆ ಒಂದು ಅದ್ಭುತ ಅನುಭವ ನೀಡಲಿದೆ. ಕಾಲಾತೀತ ಕಥೆಗಳನ್ನು ಸೃಷ್ಟಿಸುವ ಹೊಂಬಾಳೆ ಫಿಲ್ಮ್ಸ್ ದೂರದೃಷ್ಟಿಯ ಭಾಗವಾಗಿರುವ ಕಾಂತಾರ ಚಾಪ್ಟರ್ 1, ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

ನೋಡಿರಿ

