ಆಸ್ಕರ್ ಅಂಗಳಕ್ಕೆ ಕಾಲಿಟ್ಟ ಕಾಂತಾರ ಚಾಪ್ಟರ್ -1 ಸಿನಿಮಾ – ಅತ್ಯುತ್ತಮ ಚಿತ್ರ ವಿಭಾಗದ ಸ್ಪರ್ಧೆಗೆ ಎಂಟ್ರಿ

ಕನ್ನಡಿಗರೇ ಇದು ಹೆಮ್ಮೆ ಪಡುವ ವಿಚಾರ. ಹೌದು. ಕನ್ನಡದ ಅದ್ಭುತ ಸಿನಿಮಾ ಕಾಂತಾರ ಚಾಪ್ಟರ್ ಒನ್ ಸಿನಿಮಾ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಿನಿಮಾ ಆಸ್ಕರ್ ರೇಸ್ ಅಲ್ಲಿ ಸ್ಥಾನ ಪಡೆದಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಈ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿದೆ.
ಇದನ್ನೂ ಓದಿ:ಟಾಕ್ಸಿಕ್ ಚಿತ್ರದ ಟೀಸರ್ ಮೆಚ್ಚಿಕೊಂಡ ಕಿಚ್ಚ – ಬರ್ತ್ಡೇ ವಿಶ್ ಜೊತೆ ಕಿಚ್ಚ ಹೇಳಿದ್ದೇನು ಗೊತ್ತಾ?
ಆಸ್ಕರ್ ರೇಸ್ಗೆ ಸಿನಿಮಾಗಳು ಎಂಟ್ರಿಯಾಗೋದೇ ದೊಡ್ಡ ವಿಚಾರ. ಇದೀಗ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದೆ ಕಾಂತಾರ ಚಾಪ್ಟರ್ ಒನ್ ಚಿತ್ರ. ಈ ಮೂಲಕ ಕಾಂತಾರ ಚಾಪ್ಟರ್ ಒನ್ ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸದೊಂದು ಹೆಜ್ಜೆ ಇಟ್ಟಿದೆ. ಆಸ್ಕರ್ ಅತ್ಯುತ್ತಮ ಚಿತ್ರ ವಿಭಾಗದ ರೇಸ್ಗೆ ಈಗ ಕಾಂತಾರಾ ಕಾಲಿಟ್ಟಿದೆ. ಈ ಒಂದು ವಿಚಾರವನ್ನ ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ. ಸೋಷಿಯಲ್ ಮೀಡಿಯಾದ ತಮ್ಮ ಅಧಿಕೃತ ಪೇಜ್ ಅಲ್ಲಿಯೇ ಇದನ್ನ ಪೋಸ್ಟರ್ ಸಮೇತ ಹೇಳಿಕೊಂಡಿದೆ. ಹಾಗೆ ಈ ವಿಷಯವನ್ನ ಇಂಗ್ಲಿಷ್ ಅಲ್ಲೂ ಹೀಗೆ ಬರೆದುಕೊಂಡಿದೆ. ನಮ್ಮ ಕಾಂತಾರ ಚಾಪ್ಟರನ್ ಒನ್ ನಮ್ಮ ಸಂಸ್ಕೃತಿಯಲ್ಲಿ ಬೇರೂರಿರುವ ಹಾಗೂ ದೈವಿಕತೆಯಿಂದ ಪ್ರೇರಿತವಾದ ಕಥೆಯ ಚಿತ್ರವೇ ಆಗಿದೆ. ಈ ಚಿತ್ರ ಆಸ್ಕರ್ (ಅಕಾಡೆಮಿ ಅವಾರ್ಡ್ಸ್) ನ ಅತ್ಯುತ್ತಮ ಚಿತ್ರ ವಿಭಾಗದ ಸ್ಪರ್ಧಾ ಕಣಕ್ಕೆ ಪ್ರವೇಶಿಸಿದೆ. ಇದು ನಮಗೆ ಹೆಮ್ಮೆಯ ವಿಷವೇ ಆಗಿದೆ. ಗೌರವದ ವಿಷಯವೂ ಆಗಿದೆ ಅಂತಲೇ ಹೊಂಬಾಳೆ ಸಂಸ್ಥೆ ಹೇಳಿಕೊಂಡಿದೆ.

ನೋಡಿರಿ

