ಕಾಂತಾರದ ಅಪ್ಪು ಕೋಣ ಸಾ*ವು! – ಕಂಬಳದ ಚಾಂಪಿಯನ್‌ಗೆ ಆಗಿದ್ದೇನು?
ರಿಷಬ್ ಶೆಟ್ಟಿ ಕಣ್ಣೀರು ಹಾಕಿದ್ದೇಕೆ?

ಹೌದು.. ಸ್ಯಾಂಡಲ್‌ವುಡ್‌ನ ಸೂಪರ್‌ಹಿಟ್ ಚಲನಚಿತ್ರ ಕಾಂತಾರದ ಕಂಬಳದ ದೃಶ್ಯಗಳಲ್ಲಿ ನಟ ರಿಷಬ್ ಶೆಟ್ಟಿ ಅವರೊಂದಿಗೆ ತೆರೆಯ ಮೇಲೆ ಮಿಂಚಿದ್ದ ಜನಪ್ರಿಯ ಕೋಣ ‘ಅಪ್ಪು’ ಸಾವನ್ನಪ್ಪಿದೆ. ಇದರೊಂದಿಗೆ ಕರಾವಳಿ ಭಾಗದ ಕಂಬಳ ಪ್ರೇಮಿಗಳಲ್ಲಿ ಮತ್ತು ಚಿತ್ರಪ್ರೇಮಿಗಳಲ್ಲಿ ತೀವ್ರ ಬೇಸರ ಮನೆ ಮಾಡಿದೆ.
ಬೈಂದೂರು ತಾಲೂಕಿನ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಅಪ್ಪು ಮತ್ತು ಕಾಲಾ ಎಂಬ ಎರಡು ಕೋಣಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದರು. ಕಾಂತಾರ ಚಿತ್ರದ ಶೂಟಿಂಗ್‌ಗೂ ಮೊದಲಿನಿಂದಲೂ ಈ ಕೋಣಗಳ ಮೂಲಕವೇ ಚಿತ್ರತಂಡಕ್ಕೆ ಕಂಬಳದ ತರಬೇತಿ ನೀಡಲಾಗಿತ್ತು. ಪರಮೇಶ್ವರ ಭಟ್ ಅವರ ಮಗಳು ಚೈತ್ರಾ ಪರಮೇಶ್ವರ ಭಟ್ ಅವರು ಅಪ್ಪು ಕೋಣದ ಆರೈಕೆ ಮಾಡುತ್ತಿದ್ದರು. ಮೃತನಾದ ಅಪ್ಪು ಕೋಣ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ, ಕಂಬಳದ ಕಣದಲ್ಲಿಯೂ ಚಾಂಪಿಯನ್ ಆಗಿ ಗುರುತಿಸಿಕೊಂಡಿತ್ತು.
ಇದನ್ನೂ ಓದಿ: ಬೆಂಚ್ ನಲ್ಲೇ ಬಂಧಿಯಾದ ಅಭಿಮನ್ಯು – ಡೆಬ್ಯೂ ಚಕ್ರವ್ಯೂಹ ಭೇದಿಸೋದೇ ಕಷ್ಟನಾ?
ಸಿನಿಮಾಗಳಲ್ಲಿ ಮಾತ್ರ ಅಪ್ಪು ಹಾಗೂ ಕಾಲಾ ಕೋಣಗಳು ಚಾಂಪಿಯನ್ ಅಲ್ಲ, ನಿಜ ಜೀವನದಲ್ಲೂ ಇವು ಸಾಕಷ್ಟು ಅವಾರ್ಡ್ ಗೆದ್ದಿವೆ. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳದಲ್ಲಿ 5 ವರ್ಷ ಈ ಕೋಣಗಳು ಚಾಂಪಿಯನ್ ಆಗಿದ್ದವು. ಬೆಂಗಳೂರು ಕಂಬಳದಲ್ಲೂ ಕನೆಹಲಗೆ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದವು. 2023ರಲ್ಲಿ ನಡೆದಿದ್ದ ಪ್ರಥಮ ವರ್ಷದ ಬೆಂಗಳೂರು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹರಿಸಿ ಪ್ರಥಮ ಪ್ರಶಸ್ತಿ ಪಡೆದಿತ್ತು ಕರಾವಳಿಯ ಬಹುತೇಕ ಕಂಬಳಗಳಲ್ಲಿ ಕೀರ್ತಿ-ಬಹುಮಾನ ಸಂಪಾದಿಸಿದ್ದ ಅಪ್ಪು ಕೋಣ ಈಗ ಅಗಲಿದೆ.
ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರೋ ಕಾಂತಾರ ಸಿನಿಮಾದಲ್ಲಿ ಈ ಕೋಣಗಳನ್ನ ಬಳಸಿಕೊಳ್ಳಲಾಗಿತ್ತು. ಈ ಸಿನಿಮಾಗಾಗಿ ಕಷ್ಟಪಟ್ಟು ಕಂಬಳ ಓಡಿಸೋದನ್ನು ಕಲಿತಿದ್ದರು. ಚಿತ್ರೀಕರಣಕ್ಕೂ ಮೊದಲಿನಿಂದಲೇ ಅಪ್ಪು ಮತ್ತು ಕಾಲಾ ಕೋಣಗಳ ಮೂಲಕ ರಿಷಬ್ ತಬೇತಿ ಪಡೆದಿದ್ದರು. ಇವುಗಳ ಜೊತೆ ರಿಷಬ್ಗೆ ಆಪ್ತತೆ ಬೆಳೆದಿತ್ತು. ಆ ಬಳಿಕ ಸಿನಿಮಾಗಳಲ್ಲೂ ಕೋಣಗಳು ಕಾಣಿಸಿಕೊಂಡಿದ್ದವು. ಈಗ ಅಪ್ಪು ಕೋಣವನ್ನ ಕಳೆದು ಜೊತೆಗಾರ ಕಾಲ ಮಾತ್ರ ಒಂಟಿಯಾಗಿಲ್ಲ, ಅದ್ರ ಜೊತೆ ಅದರ ಅಭಿಮಾನಿಗಳಿಗೆ ಹಾಗೂ ಕಾಂತಾರ ಸಿನಿಮಾದ ಅಭಿಮಾನಿಗಳು ಈ ಸುದ್ದಿ ಬೇಸರ ತರಿಸಿದೆ.

ನೋಡಿರಿ

