ಕಾಂತಾರಾ-1ರಲ್ಲಿ ಸಪ್ತಮಿ ರೋಲ್‌ ರಿವೀಲ್! – ಸಿಂಗಾರ ಸಿರಿ ಹೇಳಿದ ಸತ್ಯ..!

ಕಾಂತಾರಾ-1ರಲ್ಲಿ ಸಪ್ತಮಿ ರೋಲ್‌ ರಿವೀಲ್! – ಸಿಂಗಾರ ಸಿರಿ ಹೇಳಿದ ಸತ್ಯ..!

ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದಿದ್ದು ಗೊತ್ತೇ ಇದೆ. ಈ ಸಿನಿಮಾ ಮೂಲಕವೇ ರಿಷಬ್​ ಶೆಟ್ಟಿ ಹಾಗೂ ಸಪ್ತಮಿ ಗೌಡ  ಪ್ಯಾನ್ ಇಂಡಿಯಾ ಸ್ಟಾರ್ ಆದ್ರು. ಇದೀಗ ಕಾಂತಾರ ಸಿನಿಮಾದ ಪ್ರೀಕ್ವೆಲ್ ಕೂಡ ಸಿದ್ಧವಾಗ್ತಿದೆ. ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಇದರ ಮಧ್ಯೆ ಚಿತ್ರದ ನಾಯಕಿ ಯಾರಾಗಲಿದ್ದಾರೆ ಅನ್ನೋ ಕುತೂಹಲ ಕೂಡ ಶುರುವಾಗಿದೆ. ಈ ಬೆನ್ನಲ್ಲೇ ಕಾಂತಾರ ಸಿನಿಮಾ ಬಗ್ಗೆ ಬಿಗ್ ಅಪ್ ಡೇಟ್ ಸಿಕ್ಕಿದೆ..

ಇದನ್ನೂ ಓದಿ: ಪ್ರಚಂಡ ಕುಳ್ಳನ ಏಳುಬೀಳಿನ ಬದುಕು ಹೇಗಿತ್ತು? – 18 ವರ್ಷ ಚಿತ್ರರಂಗ ಬಿಟ್ಟಿದ್ದೇಕೆ? – ದ್ವಾರಕೀಶ್ ಕೈಬಿಡಲಿಲ್ಲ ಆಪ್ತಮಿತ್ರ ವಿಷ್ಣುವರ್ದನ್

ಕನ್ನಡ ಸಿನಿಮಾ ಇಂಡಸ್ಟ್ರಿಯತ್ತ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಕಾಂತಾರ.. ಕಾಂತಾರ ಸಿನಿಮಾ ಬಗ್ಗೆ ಹೇಳಿದ್ರೆ ಮೊದಲು ಕಣ್ಮುಂದೆ ಬರೋದೆ ರಿಷಬ್ ಶೆಟ್ಟಿ. ಇವರ ಜತೆಗೆ ನಾಯಕಿ ಸಪ್ತಮಿ ಗೌಡ. ಕಾಡುಬೆಟ್ಟಿನ ಶಿವ ಹಾಗು ಲೀಲಾ, ಪ್ರೇಮಿಗಳ ಫೇವರಿಟ್ ಜೋಡಿಯಾಗಿದ್ರು. ಕಾಂತಾರ ಚಿತ್ರದಿಂದ ನಟ ರಿಷಬ್ ಶೆಟ್ಟಿಗೆ ಎಷ್ಟೂ ಜನಪ್ರಿಯತೆ ಸಿಕ್ಕಿದೆಯೋ ಅಷ್ಟೇ ಜನಪ್ರಿಯತೆ ಸಿಂಗಾರ ಸಿರಿ, ಸಪ್ತಮಿ ಗೌಡಗೂ ದೊರಕಿತ್ತು. ಇದೀಗ ಕಾಂತಾರ ಪ್ರೀಕ್ವೆಲ್​ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ.

ಈಗಾಗಲೇ ರಿಲೀಸ್ ಆದ ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ಟೀಸರ್ ಗೂ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದೆ. ಫಸ್ಟ್​ ಲುಕ್​ನಲ್ಲಿ ರಿಷಬ್ ಶೆಟ್ಟಿ ಅವತಾರ ಕುತೂಹಲ ಮೂಡಿಸಿದೆ. ರಿಷಬ್ ಆಗ ಕಾಂತಾರಾ-1 ಸಿನಿಮಾದ ಟೈಟಲ್ ಟೀಸರ್ ಕೊಟ್ಟಿದ್ದಷ್ಟೆ. ಆ ನಂತ್ರ ಸಿನಿಮಾ ಬಗ್ಗೆ ಯಾವ್ದೇ ಅಪ್ಡೇಟ್ ಕೊಟ್ಟಿಲ್ಲ. ತನ್ನ ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಾರೆ ಅನ್ನೋ ಮಾಹಿತಿ ಬಿಚ್ಚಿಟ್ಟಿರಲಿಲ್ಲ.  ಹೀಗಾಗಿ ಕಾಂತಾರ ಪ್ರೀಕ್ವೆಲ್ನಲ್ಲಿ ನಾಯಕಿಯ ವಿಚಾರ ಬಂದ್ರೆ ಮೊದಲು ಕೇಳಿ ಬರುತ್ತಿದ್ದ ಹೆಸರು ನಟಿ ಸಪ್ತಮಿ ಗೌಡ. ಆದ್ರೆ ಈಗ ಸಿಂಗಾರ ಸಿರಿ,  ಕಾಂತಾರ 1 ನಲ್ಲಿ ಆಕ್ಟ್ ಮಾಡ್ತಾ ಇಲ್ವಂತೆ.. ಈ ಬಗ್ಗೆ ಸ್ವತಃ ಸಪ್ತಮಿ ಗೌಡ ಅವರೇ ಹೇಳಿದ್ದಾರೆ.  ಹೌದು.. ಕಾಂತಾರ ಪ್ರೀಕ್ವೆಲ್ ಶುರುವಾಗ್ತಿದ್ದ ಹಾಗೆ ನಟಿ ಸಪ್ತಮಿ ಗೌಡ ರೋಲ್ ಏನು? ಹೇಗಿರುತ್ತೆ ಅನ್ನೋ ಬಗ್ಗೆ ದೊಡ್ಡ ಚರ್ಚೆ ಆಗುತ್ತಿತ್ತು. ಆದರೆ ಈಗ ನಟಿ ಸಪ್ತಮಿ ಗೌಡ ಆ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ. ‘ನಾನು ನಟಿಸುತ್ತಿಲ್ಲ. ಆ ಪಾತ್ರಕ್ಕೆ ಬೇರೆಯವರು ಬಂದಿದ್ದಾರೆ. ಈಗ ಸಿದ್ಧವಾಗುತ್ತಿರುವುದು ಪ್ರೀಕ್ವೆಲ್. ಆ ಪಾತ್ರವೇ ಇಲ್ಲ ಎಂದಾಗ ನಾನು ನಟಿಸೋದು ಹೇಗೆ’ ಎಂದಿದ್ದಾರೆ ನಟಿ ಸಪ್ತಮಿ ಗೌಡ. ಈ ಮೂಲಕ ಕಾಂತಾರ ಪ್ರೀಕ್ವೆಲ್ನಲ್ಲಿ ಸಪ್ತಮಿ ಇರೋದಿಲ್ಲ ಅನ್ನೋದು ಕನ್ಫರ್ಮ್ ಆಗಿದೆ.

ಒಟ್ಟಿನಲ್ಲಿ, ಕೆಜಿಎಫ್ ಬಳಿಕ ಬಂದ ‘ಕಾಂತಾರ’ ಸಿನಿಮಾ ನಿಜವಾಗಿಯೂ ಸ್ಯಾಂಡಲ್‌ವುಡ್ ಗೆ ದೊಡ್ಡ ಟಾನಿಕ್ ಕೊಟ್ಟಿತ್ತು.. ಇಡೀ ಜಗತ್ತೇ ತಿರುಗಿ ನೋಡುವಂತೆ‌ ಕಾಂತಾರಾ ಮಾಡಿತ್ತು..  ಹೀಗಾಗಿ ಸಹಜವಾಗಿಯೇ ಮುಂಬರುವ ‘ಕಾಂತಾರ- ಪ್ರೀಕ್ವೆಲ್‌’ ಬಗ್ಗೆ ಸಿನಿ ಪ್ರಿಯರು ಭಾರೀ ನಿರೀಕ್ಷೆ ಇಟ್ಡುಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *