ಹಿಮಾಲಯನ್ ಗ್ರಿಫನ್ ರಣಹದ್ದುಗೆ 15 ದಿನ ಕ್ವಾರಂಟೈನ್!

ಹಿಮಾಲಯನ್ ಗ್ರಿಫನ್ ರಣಹದ್ದುಗೆ 15 ದಿನ ಕ್ವಾರಂಟೈನ್!

ಅಪರೂಪದ ಹಿಮಾಲಯನ್ ಗ್ರಿಫನ್ ರಣಹದ್ದು, ಕಾನ್ಪುರದ ಬೆನಜಬರ್ ಸ್ಮಶಾನದ ಬಳಿ ಪತ್ತೆಯಾಗಿದೆ. ಈ ರಣಹದ್ದನ್ನು ಅಲೆನ್ ಫಾರೆಸ್ಟ್ ಮೃಗಾಲಯದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ 15 ದಿನ ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾ ಅರಣ್ಯಾಧಿಕಾರಿ ಶ್ರದ್ಧಾ ಯಾದವ್ ತಿಳಿಸಿದ್ದಾರೆ.

ಹಿಮಾಲಯನ್ ಗ್ರಿಫನ್ ರಣಹದ್ದು, ಬೆನಜಬರ್ ಈದ್ಗಾ ಸ್ಮಶಾನದಲ್ಲಿ ಹಾರಲು ಸಾಧ್ಯವಾಗದೇ ನಿತ್ರಾಣದಿಂದ ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಹದ್ದನ್ನು ರಕ್ಷಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಅದನ್ನು  ವೈದ್ಯರು ತಪಾಸಣೆ ನಡೆಸಿ, 15 ದಿನ  ನಿಗಾದಲ್ಲಿ ಇರಿಸಿದ್ದಾರೆ.

ಇದನ್ನೂ ಓದಿ:ಖಾಸಗಿ ಶಾಲೆಗಳಿಗೆ ಒಂದು ವಾರ ರಜೆ – ಚಳಿಗೆ ನಡುಗುತ್ತಿರುವ ದೆಹಲಿಯ ಸ್ಥಿತಿ ಹೇಗಿದೆ ಗೊತ್ತಾ?

ಹಿಮಾಲಯನ್ ರಣಹದ್ದುಗಳ ಜೋಡಿ ಕಾನ್ಪುರದ ಬೆನಜಬರ್ ಪ್ರದೇಶದಲ್ಲಿ  ಕಾಣಿಸಿಕೊಂಡಿತ್ತು. ಅವುಗಳಲ್ಲಿ ಒಂದು ಸಿಕ್ಕಿದೆ ಅದನ್ನು ರಕ್ಷಣೆ ಮಾಡಲಾಗಿದೆ. ಅದೇ ಪ್ರದೇಶದಲ್ಲಿ ಇನ್ನೂ ಒಂದು ರಣಹದ್ದು ಇದೆ. ಅದಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೇ ಸಿಕ್ಕಿರುವ ರಣಹದ್ದನ್ನು 15 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಶ್ರದ್ದಾ ಯಾದವ್ ಹೇಳಿದ್ದಾರೆ.

ಈಗ ಸಿಕ್ಕಿರುವ ರಣಹದ್ದನ್ನು ಆಸ್ಪತ್ರೆಯ ಆವರಣದಲ್ಲಿ ಇತರ ಪಕ್ಷಿಗಳಿಂದ ಪ್ರತ್ಯೇಕವಾಗಿಸಲಾಗಿದೆ. ಇದು 8 ಕೆಜಿ ತೂಕ  ಹೊಂದಿದ್ದು, ವೈದ್ಯರು ಇದನ್ನು ತಪಾಸಣೆ ನಡೆಸಿ, ನಿಗಾದಲ್ಲಿ ಇರಿಸಿದ್ದಾರೆ. ಈ ಮೃಗಾಲಯದಲ್ಲಿ ಈಗಾಗಲೇ ನಾಲ್ಕು ಹಿಮಾಲಯನ್ ಗ್ರಿಫನ್ ರಣಹದ್ದು ಇದೆ ಎಂದು ಮೃಗಾಲಯದ ಪಶುವೈದ್ಯ ಡಾ. ನಾಸಿರ್ ಜೈದಿ ಹೇಳಿದ್ದಾರೆ.

 

suddiyaana