ವರ ಬಿಸಿನೀರು ಕೇಳಿದ್ದಕ್ಕೆ ಮದುವೆಯೇ ಕಾನ್ಸಲ್!‌

ವರ ಬಿಸಿನೀರು ಕೇಳಿದ್ದಕ್ಕೆ ಮದುವೆಯೇ ಕಾನ್ಸಲ್!‌

ಮದುವೆ ಮನೆ ಅಂದ್ಮೇಲೆ ಸಂಭ್ರಮ ಇದ್ದೇ ಇರುತ್ತದೆ. ಈಗಿನ ಕಾಲದಲ್ಲಂತೂ ಪಾರ್ಟಿ ಕಾಮನ್‌ ಆಗಿರುತ್ತೆ. ಗುಂಡು, ತುಂಡು ಎಲ್ಲವೂ ಇರುತ್ತದೆ. ಆದ್ರೀಗ ಇಲ್ಲೊಂದು ಕಡೆ ಮದುವೆ ದಿನದಂದೇ ವಧು ತನಗೆ ಈ ಮದುವೆ ಬೇಡ ಅಂದಿದ್ದಾಳೆ. ಆಕೆ ಕೊಟ್ಟ ಕಾರಣ ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ಕೆಂಪು ಸುಂದರಿ ಸಖತ್‌ ಕಾಸ್ಟ್ಲಿ! – ಶತಕದ ಅಂಚಿನತ್ತ ಟೊಮ್ಯಾಟೊ ಬೆಲೆ!

ಇತ್ತೀಚಿಗಿನ ದಿನಗಳಲ್ಲಿ ಚಿಕ್ಕ ಚಿಕ್ಕ ವಿಷಯಕ್ಕೆ ಮದುವೆ ಮುರಿದು ಬೀಳುವ ಘಟನೆಗಳು ಹೆಚ್ಚಾಗಿವೆ. ಇದೀಗ ಇಂಥಹದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ವಧು ತಾನು ಮದುವೆ ಆಗಬೇಕಿದ್ದ ವರನ ನಡವಳಿಕೆ ಬಗ್ಗೆ ಆರೋಪ ಮಾಡಿದ್ದಾಳೆ. ಇದರಿಂದ ಮದುವೆಯೇ ನಿಂತೋಗಿದೆ.

ಅಷ್ಟಕ್ಕೂ ಆಗಿದ್ದೇನು?

ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಈ ಹಳ್ಳಿಯಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮಕ್ಕೆ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು. ಮದುವೆ ಮೆರವಣಿಗೆ ಕೂಡ ಆರಂಭವಾಗಿತ್ತು. ಆದರೆ ವಧು ಈ ಮೆರವಣಿಗೆಯಲ್ಲಿ ಬರಲು ಹಿಂದೇಟು ಹಾಕಿದ್ದಾಳೆ. ಮದುವೆಗೂ ಕೂಡ ಎಲ್ಲ ತಯಾರಿಗಳನ್ನು ಮನೆಯವರು ಮಾಡಿಕೊಂಡಿದ್ದಾರೆ. ಆದರೆ ವರನ ವರ್ತನೆ ನೋಡಿ ವಧು ಈ ಮದುವೆ ಬೇಡ ಎಂದಿದ್ದಾಳೆ.

ವಧು ಆರೋಪವೇನು?

ಮದುವೆ ಮೆರವಣಿಗೆಗೆ ವರ ಕಡೆಯವರು ತಡವಾಗಿ ಬಂದಿದ್ದಾರೆ. ಹಾಗೂ ಕೆಲವರು ಅದರಲ್ಲಿ ಕುಡಿದಿದ್ದರು. ಜತೆಗೆ ವರನು ಪದೇ ಪದೇ ಬಿಸಿನೀರು ಕೇಳುತ್ತಿದ್ದ, ಅವನು ಹುಚ್ಚನಂತೆ ಆಡುತ್ತಿದ್ದ ಎಂದು ವಧು ದೂರಿದ್ದಾಳೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ತಮ್ಮ ಮಗನನ್ನು ಹುಚ್ಚ ಎಂದು ಕರೆದಿದ್ದಕ್ಕೆ ವರನ ಕುಟುಂಬದವರು ವಧುವಿನ ವಿರುದ್ಧ ಆಕ್ರೋಶಗೊಂಡಿದ್ದು, ದೊಡ್ಡ ಜಗಳವೇ ನಡೆದಿದೆ. ಮದುವೆಗೆ ಬಂದಿದ್ದ ಸಂಬಂಧಿಕರು ಇವರ ಜಗಳ ನೋಡಿ ಅಲ್ಲಿಂದ ಹೋಗಿದ್ದಾರೆ.

ಜಗಳ ನಿಲ್ಲಿಸಲು ಎಂಟ್ರಿ ಕೊಟ್ಟ ಪೊಲೀಸರು!

ಮದುವೆ ಮನೆಯಲ್ಲಿ ಜಗಳ ಜೋರಾಗಿರುವುದನ್ನು ಕಂಡು ಯಾರೋ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಕೊನೆಗೆ ಪೊಲೀಸರು ಮಧ್ಯೆಪ್ರವೇಶಿಸಿ, ಎರಡೂ ಕಡೆಯವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮದುವೆಯ ಸಾಮಗ್ರಿಗಳು ಮತ್ತು ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವ ವ್ಯವಹಾರದ ಬಗ್ಗೆ ಎರಡೂ ಕಡೆಯವರು ರಾಜಿ ಮಾಡಿಕೊಂಡು, ಒಂದು ಒಪ್ಪಂದಕ್ಕೆ ಬಂದರು. ಈ ಘಟನೆಗೆ ಸಂಬಂಧಿಸಿದಂತೆ ಯಾರೂ ಯಾವುದೇ ಲಿಖಿತ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Shwetha M