ʼಕಣ್ಣಪ್ಪʼ ಚಿತ್ರದ ಹಾರ್ಡ್ ಡ್ರೈವ್ ಕಳ್ಳತನ – ನೀರಿನಲ್ಲಿ ಹೋಮವಾಯ್ತು ಕೋಟಿ ಕೋಟಿ ದುಡ್ಡು!

ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಣ್ಣಪ್ಪ ತೆರೆಗೆ ಬರಲು ಸಜ್ಜಾಗಿತ್ತು. ಜೂನ್ 27 ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದ್ರೀಗ ಸಿನಿಮಾದ ಹಾರ್ಡ್ಡ್ರೈವ್ ಕಳ್ಳತನವಾಗಿದೆ. ಇದರಿಂದಾಗಿ ನೂರಾರು ಕೋಟಿ ಬಜೆಟ್ ಹಾಕಿ ನಿರ್ಮಿಸಿದ್ದ ಸಿನಿಮಾ ಕಳ್ಳರ ಪಾಲಾದಂತಾಗಿದೆ.
ಇದನ್ನೂ ಓದಿ: ಫೈನಲ್ ನಲ್ಲಿ ಆರ್ ಸಿಬಿ ಎದುರಾಳಿ ಯಾರು? – 18ರ ನಂಟು.. ಈ ಸಲ ಕಪ್ ನಮ್ದು?
ಹೌದು. ನೂರಾರು ಕೋಟಿ ಬಜೆಟ್ನ ಪೌರಾಣಿಕ ಸಿನಿಮಾ ಕಣ್ಣಪ್ಪ ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಇದೆ. ಈ ಸಿನಿಮಾದಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ಲಾಲ್, ಮಂಚು ಮೋಹನ್ಬಾಬು, ಕನ್ನಡದ ನಟ ದೇವರಾಜ್ ಮುಂತಾದ ನಟರು ನಟಿದ್ದಾರೆ. ಇದೀಗ ಈ ಸಿನಿಮಾದ ಹಾರ್ಡ್ಡ್ರೈವ್ ಕಳ್ಳತನವಾಗಿದೆ. ಈ ಸಂಬಂಧ ಹೈದರಾಬಾದ್ನ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ‘ಕಣ್ಣಪ್ಪ’ ಸಿನಿಮಾದ ನಿರ್ಮಾಪಕರು ದೂರು ದಾಖಲಿಸಿದ್ದಾರೆ.
ಯಾರೋ ಕೆಲ ಅಗಂತುಕರು ಕಚೇರಿಗೆ ನುಗ್ಗಿ ಹಾರ್ಡ್ ಡ್ರೈವ್ಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಈಗ ಕಳುವಾಗಿರುವ ಎರಡು ಹಾರ್ಡ್ ಡಿಸ್ಕ್ಗಳಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ಫೈನಲ್ ವಿಎಫ್ಎಕ್ಸ್ ದೃಶ್ಯಗಳು ಇದ್ದವು ಎಂದು ದೂರಿನಲ್ಲಿ ನಿರ್ಮಾಪಕರು ತಿಳಿಸಿದ್ದಾರೆ.
ಮುಂಬೈನ ಎಚ್ಐವಿಇ ಸ್ಟುಡಿಯೋನಲ್ಲಿ ‘ಕಣ್ಣಪ್ಪ’ ಸಿನಿಮಾದ ವಿಎಫ್ಎಕ್ಸ್ ಕೆಲಸ ಮಾಡಿಸಲಾಗಿತ್ತು. ಆ ಬಳಿಕ ಎಚ್ಐವಿಇ ಸ್ಟುಡಿಯೋನವರು ಕೊರಿಯರ್ನಲ್ಲಿ ಎರಡು ಹಾರ್ಡ್ ಡಿಸ್ಕ್ಗಳನ್ನು ಹೈದರಾಬಾದ್ನ ಫಿಲಂ ನಗರ್ನ ಫೋರ್ ಫ್ರೇಮ್ಸ್ ಸ್ಟುಡಿಯೋಕ್ಕೆ ಕೊರಿಯರ್ ಮಾಡಿದ್ದಾರೆ. ಆ ಕೊರಿಯರ್ ಅನ್ನು ರಘು ಎಂಬ ವ್ಯಕ್ತಿ ಪಡೆದುಕೊಂಡಿದ್ದಾರೆ. ಆ ಹಾರ್ಡ್ ಡಿಸ್ಕ್ಗಳನ್ನು ರಘು ಎಂಬಾತ ಚರಿತಾ ಹೆಸರಿನ ಯುವತಿಗೆ ನೀಡಿದ್ದರಂತೆ. ಆದರೆ ಈಗ ರಘು ಮತ್ತು ಚಿತ್ರಾ ಇಬ್ಬರೂ ಸಹ ಕಣ್ಮರೆಯಾಗಿದ್ದಾರೆ.
ಈ ಇಬ್ಬರೂ ಸೇರಿ ಹಾರ್ಡ್ ಡಿಸ್ಕ್ಗಳನ್ನು ತೆಗೆದುಕೊಂಡು ಪರಾರಿ ಆಗಿದ್ದಾರೆ ಎಂಬ ಅನುಮಾನವನ್ನು ನಿರ್ಮಾಪಕರು ವ್ಯಕ್ತಪಡಿಸಿದ್ದು, ಫಿಲಂ ನಗರ್ ಪೊಲೀಸರು ಇದೀಗ ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ರಘು ಹಾಗೂ ಚರಿತಾಗಾಗಿ ಹುಡುಕಾಟ ಆರಂಭವಾಗಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ರಜನೀಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾದ ಹಾರ್ಡ್ ಡ್ರೈವ್ ಸಹ ಇದೇ ರೀತಿ ಕಣ್ಮರೆಯಾಗಿತ್ತು. ಭಾರಿ ಬಜೆಟ್ ಹಾಕಿ ಮಾಡಿದ್ದ ಸಿನಿಮಾದ ಹಾರ್ಡ್ ಡ್ರೈವ್ ಕಾಣೆ ಆದ ಕಾರಣ ಸಿನಿಮಾಕ್ಕೆ ಭಾರಿ ಹೊಡೆತ ಬಿದ್ದಿದೆ.