5 ದಿನದ ಕಾಲ್‌ಶೀಟ್..‌ ಕಣ್ಣಪ್ಪ ಸಿನಿಮಾದಲ್ಲಿ ಶಿವನ ಪಾತ್ರಕ್ಕೆ ಅಕ್ಷಯ್‌ ಕುಮಾರ್‌ 10 ಕೋಟಿ ಸಂಭಾವನೆ?

5 ದಿನದ ಕಾಲ್‌ಶೀಟ್..‌ ಕಣ್ಣಪ್ಪ ಸಿನಿಮಾದಲ್ಲಿ ಶಿವನ ಪಾತ್ರಕ್ಕೆ ಅಕ್ಷಯ್‌ ಕುಮಾರ್‌ 10 ಕೋಟಿ ಸಂಭಾವನೆ?

ಮಂಚು ವಿಷ್ಣು ನಟಿಸಿ ನಿರ್ಮಾಣ ಮಾಡಿರುವ ಕಣ್ಣಪ್ಪ  ಸಿನಿಮಾ ಕಳೆದ ವಾರವಷ್ಟೆ ಬಹುಭಾಷೆಯಲ್ಲಿ ರಿಲೀಸ್‌ ಆಗಿತ್ತು. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ ಶಿವ ಪಾತ್ರದಲ್ಲಿ ಮಿಂಚಿದ್ರು.. ಆದ್ರೀಗ ನಟ ಅಕ್ಷಯ್‌ ಸಂಭಾವನೆ ಮಾತ್ರ ಭಾರಿ ಸದ್ದು ಮಾಡ್ತಿದೆ.. ಅಕ್ಷಯ್‌ ಕುಮಾರ್‌ 5 ದಿನದ ಕಾಲ್‌ಶೀಟ್‌ ಗೆ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಆಸ್ಕರ್‌ ಮೇಲೆ ಕಾಂತಾರ – 1 ಕಣ್ಣು.. ನೂರು ವಿಘ್ನ.. ರಿಲೀಸ್‌ ಯಾವಾಗ? – OCT – 7.. ಗುಡ್‌ನ್ಯೂಸ್‌ ಕೊಡ್ತಾರಾ ಶೆಟ್ರು?

ಹೌದು, ಕಣ್ಣಪ್ಪ ಸಿನಿಮಾದಲ್ಲಿ ವಿಷ್ಣು ಮಂಚು ಕಣ್ಣಪ್ಪನಾಗಿ ಅಭಿನಯಿಸಿದರೆ ಅತಿಥಿ ಪಾತ್ರಗಳಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್‌ಲಾಲ್ ಅಭಿನಯಿಸಿದ್ದಾರೆ. ಗೆಸ್ಟ್ ಅಪೀಯರೆನ್ಸ್ ಮಾಡಿದ್ದ ಬೇರೆ ಭಾಷೆ ಕಲಾವಿದರು ಉಚಿತವಾಗಿಯೇ ಅಭಿನಯಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೀಗ ಶಿವನ ಪಾತ್ರ ಮಾಡಿದ್ದ ಅಕ್ಷಯ್ ಕುಮಾರ್ 5 ದಿನದ ಕಾಲ್‌ಶೀಟ್‌ಗಾಗಿ 10 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗುತ್ತಿದೆ. ಆದರೆ ಪ್ರಭಾಸ್ ಹಾಗೂ ಮೋಹನ್‌ಲಾಲ್ ಮೋಹನ್‌ಬಾಬು ಮೇಲಿನ ಸ್ನೇಹ, ವಿಶ್ವಾಸದಿಂದ ರೆಮನ್ಯುರೇಶನ್ ಪಡೆಯದೇ ಅಭಿನಯಿಸಿದ್ದಾರೆ. ಆದರೆ ಐದೇ ದಿನದ ಕಾಲ್‌ಶೀಟ್‌ಗೆ ಅಕ್ಷಯ್ 10 ಕೋಟಿ ಪಡೆದುಕೊಂಡು ಹೋಗಿರುವುದು ಟಾಲಿವುಡ್ ವಲಯದಲ್ಲಿ ಬಹಳ ಚರ್ಚೆಯಾಗುತ್ತಿದೆ.

ಅಕ್ಷಯ್ ದುರಾಸೆಯಿಂದ ಹಣ ಪಡೆದುಕೊಂಡು ಹೋಗಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಆದರೆ ಅಕ್ಷಯ್ ಕೇಳಿದಷ್ಟು ಹಣಕ್ಕೆ ಒಪ್ಪಿಗೆಯಿಂದಲೇ ನಿರ್ಮಾಪಕರು ರೆಮನ್ಯುರೇಷನ್ ಕೊಟ್ಟಿರುತ್ತಾರೆ. ಹೀಗಾಗಿ ಅಕ್ಷಯ್ ಕುಮಾರ್ ಕೂಡ ಕಣ್ಣಪ್ಪ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದು. ಆದರೆ ಮೋಹನ್‌ಲಾಲ್ ಆಗಲಿ ಪ್ರಭಾಸ್ ಆಗಲಿ ಭಾಗಿಯಾಗಿರಲಿಲ್ಲ. ಪ್ರಭಾಸ್ ಹಾಗೂ ಮೋಹನ್‌ಲಾಲ್ ಮುಂದೆ ಅಕ್ಷಯ್ ಸಣ್ಣವರಾದ್ರು ಅಷ್ಟೇ ಎನ್ನುತ್ತಿದ್ದಾರೆ ಪ್ರಭಾಸ್ ಫ್ಯಾನ್ಸ್.

Shwetha M