ಕನ್ನಡಿಗ ಕೆ.ಎಲ್ ರಾಹುಲ್‌ಗೆ ಕೈಕೊಟ್ಟ ಲಕ್ – ಮೊದಲ ಪಂದ್ಯ, ಮೊದಲ ಬಾಲ್‌ನಲ್ಲೇ ಸೊನ್ನೆ ಸುತ್ತಿ ನಿರಾಶೆ

ಈ ಬಾರಿಯ ಐಪಿಎಲ್‌ನಲ್ಲಿ ಕನ್ನಡಿಗರು ಮೊದಲ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಕನ್ನಡಿಗರ ಹೀರೋ ಕೆ.ಎಲ್ ರಾಹುಲ್ ಮೇಲೆ ಎಲ್ಲರ ನಿರೀಕ್ಷೆ ಸ್ವಲ್ಪ ಹೆಚ್ಚಾಗಿಯೇ ಇತ್ತು. ಆದರೆ, ಕೆ.ಎಲ್ ರಾಹುಲ್ ಮೊದಲ ಪಂದ್ಯದಲ್ಲಿ ಭಾರೀ ನಿರಾಶೆ ಮೂಡಿಸಿದ್ದಾರೆ.
ಇದನ್ನೂ ಓದಿ:ಲಕ್ನೋಗೆ ಡಿಚ್ಚಿ ಕೊಟ್ಟು ಗೆದ್ದ ಡೆಲ್ಲಿ – ರಿಷಭ್ ಪಂತ್ಗೆ ಕ್ಲಾಸ್ ತೆಗೆದುಕೊಂಡ ಸಂಜೀವ್ ಗೋಯೆಂಕಾ
ಲಕ್ನೋದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯ ಡೆಲ್ಲಿ ಮತ್ತು ಲಕ್ನೋ ಅಭಿಮಾನಿಗಳಿಗೆ ಎಷ್ಟು ಮಹತ್ವದ್ದೋ ಅದಕ್ಕಿಂತ ಹೆಚ್ಚು ಕನ್ನಡಿಗರು ಈ ಪಂದ್ಯ ನೋಡಲು ಕಾಯುತ್ತಿದ್ದರು. ಯಾಕೆಂದರೆ, ಕನ್ನಡಿಗರ ಹೆಮ್ಮೆಯ ಕ್ರಿಕೆಟರ್ ಕೆ.ಎಲ್ ರಾಹುಲ್ ಈ ಪಂದ್ಯದಲ್ಲಿ ಆಡುತ್ತಿದ್ದರು. ಹೀಗಾಗಿ ಕನ್ನಡಿಗನ ಪ್ರದರ್ಶನ ಮತ್ತು ಲಕ್ನೋ ಟೀಮ್ ಓನರ್ ಎದುರು ಕೆ.ಎಲ್ ಹೊಡಿಬಡಿ ಆಟವಾಡಬೇಕು ಅನ್ನೋ ನಿರೀಕ್ಷೆಯಲ್ಲಿದ್ದರು ಕನ್ನಡಿಗರು. ಇನ್ನು ಕೆ.ಎಲ್ ರಾಹುಲ್ ಕೂಡಾ ಓವರ್ ಕಾನ್ಫಿಡೆನ್ಸ್‌ನಲ್ಲೇ ಕ್ರೀಸ್‌ಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಅತಿ ಆತ್ಮವಿಶ್ವಾಸವೇ ಕನ್ನಡಿಗನಿಗೆ ಮುಳುವಾಗಿ ಹೋಗಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಆವೃತ್ತಿಯಿಂದ ತನ್ನ ಆರಂಭಿಕರಲ್ಲಿ ಬದಲಾವಣೆ ಮಾಡಿದೆ. ಅದರಂತೆ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಶ್ರೀಲಂಕಾದ ಪಾತುಮ್ ನಿಸ್ಸಾಂಕ ಇನ್ನಿಂಗ್ಸ್ ಆರಂಭಿಸುವ ಜವಾಬ್ದಾರಿ ಹೊತ್ತಿದ್ದರು. ಇತ್ತ ಲಕ್ನೋ ಪರ ಅನುಭವಿ ಮೊಹಮ್ಮದ್ ಶಮಿ ಬೌಲ್ ಮಾಡಿದ ಮೊದಲ ಓವರ್ನ ಮೊದಲ ಎಸೆತವನ್ನು ಎದುರಿಸಲು ಸ್ಟ್ರೈಕ್ ತೆಗೆದುಕೊಂಡ ಕೆಎಲ್ ರಾಹುಲ್ ಮೊದಲ ಎಸೆತವನ್ನು ಸಿಕ್ಸರ್ ಸಿಡಿಸುವ ಯತ್ನದಲ್ಲಿ ಡೀಪ್ ಬ್ಯಾಕ್ವರ್ಡ್ ಪಾಯಿಂಟ್ ದಿಕ್ಕಿನಲ್ಲಿ ಮೊಹ್ಸಿನ್ ಖಾನ್ಗೆ ಕ್ಯಾಚ್ ನೀಡಿದರು. ಹೀಗಾಗಿ ರಾಹುಲ್‌ಗೆ ಮೊದಲ ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಕನ್ನಡಿಗರ ನಿರೀಕ್ಷೆ ಸೊನ್ನೆಯಲ್ಲೇ ಮುಕ್ತಾಯವಾಗಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ, ಡೆಲ್ಲಿ ಬೌಲಿಂಗ್ ದಾಳಿಗೆ ನಲುಗಿತ್ತು. ಪೂರ್ಣ 20 ಓವರ್ಗಳನ್ನು ಕೂಡಾ ಆಡಿರಲಿಲ್ಲ. ಜೊತೆಗೆ 141 ರನ್ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಕೊನೆಗೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯ್ತು.

ನೋಡಿರಿ

