ಕೆಕೆಆರ್ ಪ್ಲೇಆಫ್ ಕನಸು ಚಿಗುರಿಸಿದ ಕನ್ನಡಿಗ – ಮುಂಬೈ ಇಂಡಿಯನ್ಸ್‌ಗೆ ಮತ್ತೆ ಸೋಲಿನ ಮುಖಭಂಗ

ಕೆಕೆಆರ್ ಪ್ಲೇಆಫ್ ಕನಸು ಚಿಗುರಿಸಿದ ಕನ್ನಡಿಗ – ಮುಂಬೈ ಇಂಡಿಯನ್ಸ್‌ಗೆ ಮತ್ತೆ ಸೋಲಿನ ಮುಖಭಂಗ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಕೆಕೆಆರ್ ಗೆಲುವಿನ ರೂವಾರಿ ಕನ್ನಡಿಗ ಮನೀಶ್ ಪಾಂಡೆ ಅನ್ನೋದು ವಿಶೇಷ. ಕೆಕೆಆರ್ ಗೆಲ್ಲಿಸಿರುವ ಕನ್ನಡಿಗ ಮನೀಶ್ ಪಾಂಡೆ ಪ್ಲೇಆಫ್ ಕನಸನ್ನು ಚಿಗುರಿಸಿದ್ದಾರೆ.

ಇದನ್ನೂ ಓದಿ:RCB ಎದುರಾಳಿ GT Or SRH? – ಟಾಪ್-2 MAGIC ಟಿಕೆಟ್ ಯಾರಿಗೆ?

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಈಡನ್ ಗಾರ್ಡನ್ಸ್‌ ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ ಗೆಲುವು ಸಾಧಿಸಿದೆ.  ಈ ಗೆಲುವಿನೊಂದಿಗೆ ಕೆಕೆಆರ್ ಪ್ಲೇಆಫ್ ರೇಸ್‌ನಲ್ಲಿ ಉಳಿದಿದೆ. ಇನ್ನು ಕೆಕೆಆರ್ ಗೆಲುವಿನ ರೂವಾರಿ ಕನ್ನಡಿಗ ಮನೀಶ್ ಪಾಂಡೆ ಅವರ ಭರ್ಜರಿ ಬ್ಯಾಟಿಂಗ್. ಮುಂಬೈ ವಿರುದ್ಧ ಕಣಕ್ಕಿಳಿದ ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 8 ವಿಕೆಟ್‌ಗಳಿಗೆ 147 ರನ್ ಗಳಿಸಿತು.

ಮುಂಬೈ ತಂಡದ ಆರಂಭ ಅಷ್ಟೇನು ಚೆನ್ನಾಗಿರಲಿಲ್ಲ. ಕಳಪೆ ಆರಂಭ ಪಡೆದುಕೊಂಡ ಮುಂಬೈ ತಂಡ ಕೇವಲ 41 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ರಯಾನ್ ರಿಕಲ್ಟನ್ (6), ರೋಹಿತ್ ಶರ್ಮಾ (15), ನಮನ್ ಧೀರ್ (0), ಮತ್ತು ಸೂರ್ಯಕುಮಾರ್ ಯಾದವ್ (15)  ರನ್ ಗಳಿಸಿ ಔಟಾದರು. ನಂತರ ತಿಲಕ್ ವರ್ಮಾ (20) ಮತ್ತು ಹಾರ್ದಿಕ್ ಪಾಂಡ್ಯ (26) ಸ್ಕೋರ್ ಜಾಸ್ತಿ ಮಾಡಲು ಪ್ರಯತ್ನಿಸಿದರು. ವಿಲ್ ಜ್ಯಾಕ್ಸ್ 14 ರನ್, ಕಾರ್ಬಿನ್ ಬಾಷ್  32 ರನ್, ಮತ್ತು ದೀಪಕ್ ಚಾಹರ್ 10 ರನ್ ಗಳಿಸುವ ಮೂಲಕ ತಂಡವು 8 ವಿಕೆಟ್‌ಗಳ ನಷ್ಟಕ್ಕೆ 147 ರನ್ ಗಳಿಸಿತು.

ಮುಂಬೈ ನೀಡಿದ 148 ರನ್‌ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡ ಉತ್ತಮ ಆರಂಭವನ್ನು ಪಡೆಯಲಿಲ್ಲ. ಫಿನ್ ಅಲೆನ್ ಕೇವಲ 8 ರನ್‌ಗಳಿಗೆ ಕ್ಯಾಚ್ ಔಟಾದರು. ಅಜಿಂಕ್ಯ ರಹಾನೆ 21 ರನ್ ಗಳಿಸಿ ಔಟಾದರು. ನಂತರ ಕ್ಯಾಮರೂನ್ ಗ್ರೀನ್‌ ಕೂಡ ಕೇವಲ 4 ರನ್ ಗಳಿಸಿ ಔಟಾದರು.​ ಕೆಕೆಆರ್ 3 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಆಗ ಶುರುವಾಗಿದ್ದು ಕನ್ನಡಿಗ ಮನೀಶ್ ಪಾಂಡೆ ಬ್ಯಾಟಿಂಗ್ ಆರ್ಭಟ. ಇಲ್ಲಿಂದ ಮನೀಶ್ ಪಾಂಡೆ (45) ಮತ್ತು ರೋವ್‌ಮನ್ ಪೊವೆಲ್ (40) ಉತ್ತಮ ಜೊತೆಯಾಟವಾಡಿದರು. ತಾಳ್ಮೆಯುತ ಬ್ಯಾಟಿಂಗ್ ಮಾಡಿದ ಮನೀಶ್ ಪಾಂಡೆ ಅದ್ಭುತ ಬ್ಯಾಟಿಂಗ್ ಪ್ರರ್ದಶಿಸಿದರು. ಮುಂಬೈ ಬೌಲಿಂಗ್​ಯನ್ನು ಎದುರಿಸಿದ ಪಾಂಡೆ ಅರ್ಧಶತಕದ ಹೊಸ್ತಿಲಲ್ಲಿ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಪಾಂಡೆ ತಮ್ಮ ಮಿಂಚಿನ ಇನ್ನಿಂಗ್ಸ್​​ ಆಡಿದ 33 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 45 ರನ್ ಕಲೆ ಹಾಕಿದರು. ಮತ್ತೊಂದೆಡೆ ಪೊವೆಲ್ ಕೂಡ 40 ರನ್ ಗಳಿಸಿದರು. ಮನೀಶ್ ಪಾಂಡೆ ಮತ್ತು ರೋವ್‌ಮನ್ ಪೊವೆಲ್ ಜೋಡಿ 64 ರನ್ ಗಳಿಸಿ ಕೆಕೆಆರ್ ಗೆಲುವಿಗೆ ಸುಲಭ ದಾರಿ ಮಾಡಿಕೊಟ್ಟರು.

 

Sulekha

Leave a Reply

Your email address will not be published. Required fields are marked *