3211 ದಿನಗಳ ಬಳಿಕ ಕೆಎಲ್ ರಾಹುಲ್ ಶತಕ – ಬೆರಳು ಚೀಪುತ್ತಾ ಮಗಳಿಗೆ ಶತಕ ಅರ್ಪಿಸಿದ ಕನ್ನಡಿಗ

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಶತಕ ಸಿಡಿಸಿದ್ದಾರೆ. 197 ಎಸೆತಗಳಲ್ಲಿ 12 ಫೋರ್ಗಳೊಂದಿಗೆ 100 ರನ್ ಬಾರಿಸಿದ್ದಾರೆ ಕೆ.ಎಲ್ ರಾಹುಲ್. ಇತ್ತ ಶತಕ ಪೂರೈಸುತ್ತಿದ್ದಂತೆ ಕೆಎಲ್ ರಾಹುಲ್ ಬೆರಳು ಚೀಪುತ್ತಾ ಸಂಭ್ರಮಿಸಿದ್ದು, ತನ್ನ ಸಾಧನೆಯನ್ನು ಮಗಳಿಗೆ ಅರ್ಪಿಸಿದ್ದಾರೆ.
ಇದನ್ನೂ ಓದಿ: ವಿಂಡೀಸ್ ವಿರುದ್ಧ ಒಂದೇ ದಿನ ಮೂವರ ಶತಕ – ರಾಹುಲ್, ಜುರೇಲ್ & ಜಡೇಜಾ ಪವರ್ ಫುಲ್ ಬ್ಯಾಟಿಂಗ್!
ಕೆಎಲ್ ರಾಹುಲ್ ಅವರಿಗೆ 7 ತಿಂಗಳ ಮಗಳಿದ್ದಾಳೆ. ಇದೀಗ 9 ವರ್ಷಗಳ ಬಳಿಕ ಭಾರತದ ಪಿಚ್ನಲ್ಲಿ ಬಾರಿಸಿದ ಮೊದಲ ಟೆಸ್ಟ್ ಶತಕವನ್ನು ಮಗಳಿಗೆ ಅರ್ಪಿಸಿದ್ದಾರೆ. ಅದನ್ನು ಸೂಚಿಸುವ ಸಲುವಾಗಿ ಕೆಎಲ್ಆರ್ ಮಗು ಬೆರಳು ಚೀಪುತ್ತಾ ಸಂಭ್ರಮಿಸಿದ್ದಾರೆ.
ಕನ್ನಡಿಗರ ಹೆಮ್ಮೆಯ ಕ್ರಿಕೆಟರ್ ಕೆ.ಎಲ್ ರಾಹುಲ್ ಬರೋಬ್ಬರಿ 3211 ದಿನಗಳ ಬಳಿಕ ಶತಕ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೆಲ್ ರಾಹುಲ್ 197 ಎಸೆತಗಳಲ್ಲಿ 12 ಫೋರ್ಗಳೊಂದಿಗೆ 100 ರನ್ ಬಾರಿಸಿದ್ದಾರೆ. ಈ ಮೂಲಕ ಕೆಎಲ್ ರಾಹುಲ್ 9 ವರ್ಷಗಳ ಟೆಸ್ಟ್ ಶತಕದ ಬರ ನೀಗಿಸಿದ್ದಾರೆ. ಅಂದರೆ ತವರಿನಲ್ಲಿ ಕೆಎಲ್ಆರ್ ಕೊನೆಯ ಟೆಸ್ಟ್ ಶತಕ ಸಿಡಿಸಿದ್ದು 2016 ರಲ್ಲಿ. ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 199 ರನ್ ಬಾರಿಸಿದ್ದರು. ಇದಾದ ಬಳಿಕ ಭಾರತದ ಪಿಚ್ನಲ್ಲಿ ರಾಹುಲ್ ಬ್ಯಾಟ್ನಿಂದ ಒಂದೇ ಒಂದು ಶತಕ ಮೂಡಿಬಂದಿರಲಿಲ್ಲ. ಇದೀಗ 3211 ದಿನಗಳ ಅಂತರದೊಂದಿಗೆ ಈ ದಾಖಲೆಯನ್ನು ಕೆಲ್ ರಾಹುಲ್ ತಮ್ಮದಾಗಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಪರ ಆರಂಭಿಕನಾಗಿ ಅತ್ಯಧಿಕ ಟೆಸ್ಟ್ ಶತಕ ಬಾರಿಸಿದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೋಡಿರಿ

