ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಅವಮಾನ – ಸೀರಿಯಲ್ ಗೆ ಗುಡ್‌ಬೈ ಹೇಳಿದ ಹಿರಿಯ ನಟಿ!

ಜೀ ಕನ್ನಡದ ಜನಪ್ರೀಯ ಸೀರಿಯಲ್‌ಗಳಲ್ಲಿ ಲಕ್ಷ್ಮೀನಿವಾಸ ಕೂಡ ಒಂದು. ಟಿಆರ್‌ಪಿ ರೇಸ್‌ನಲ್ಲೂ ಈ ಸೀರಿಯಲ್ ಮುಂದಿದೆ. ಆದ್ರೀಗ ಸೀರಿಯಲ್ ಫ್ಯಾನ್ಸ್‌ಗೆ ಶಾಕಿಂಗ್ ಸುದ್ದಿಯೊಂದಿದೆ. ಹಿರಿಯ ನಟಿಯೊಬ್ರು, ಸೀರಿಯಲ್‌ಗೆ ಏಕಾಏಕಿ ಗುಡ್‌ಬೈ ಹೇಳಿದ್ದಾರೆ.
ಇದನ್ನೂ ಓದಿ: ಗೌತಮ್ ಗಂಭೀರ ಬ್ಲಂಡರ್ – ಮ್ಯಾಚ್ ಗೆದ್ದ ಭಾರತ ಸ್ಲಾಟ್ ನಲ್ಲಿ ಫೇಲ್
ಈ ಹಿಂದೆ ಒಂದು ಗಂಟೆ ಪ್ರಸಾರವಾಗುತ್ತಿದ್ದ ಲಕ್ಷ್ಮೀ ನಿವಾಸ ಇದೀಗ ಅರ್ಧ ಗಂಟೆ ಪ್ರಸಾರವಾಗುತ್ತಿದೆ. ಕಲಾವಿದರು ತಮ್ಮದೇ ಆದ ವೈಯಕ್ತಿಕ ಕಾರಣ ನೀಡಿ ಧಾರಾವಾಹಿಯಿಂದ ಒಬ್ಬೊಬ್ಬರೇ ಹೊರಬರುತ್ತಿದ್ದಾರೆ. ಪದೇ ಪದೇ ಕಲಾವಿದರು ಬದಲಾಗುತ್ತಿರೋದರಿಂದ ವೀಕಕ್ಷಕರು ಸಹ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಶ್ವನ ಪಾತ್ರ ಬದಲಾಗಿತ್ತು. ಇದ್ರ ಬೆನ್ನಲ್ಲೇ ನಟಿ ಅಂಜಲಿ ಸುಧಾಕರ್ ಸೀರಿಯಲ್ ಕಥೆ ಸಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ನಟಿ ಲಕ್ಷ್ಮೀ ನಿವಾಸದಿಂದ ಆಚೆ ಬಂದಿದ್ದಾರೆ.
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಅಂಜಲಿ ಸುಧಾಕರ್ ಅವರು ಸಿದ್ದೇಗೌಡ್ರ ತಾಯಿ ರೇಣುಕಾ ಪಾತ್ರದಲ್ಲಿ ನಟಿಸುತ್ತಿದ್ದರು. ಆರಂಭದಲ್ಲಿ ರೇಣುಕಾ ಪಾತ್ರ ಪಾಸಿಟಿವ್ ಆಗಿ ಕಾಣಿಸುತ್ತಿತ್ತು. ಆದರೆ ಈ ಪಾತ್ರ ನೆಗೆಟಿವ್ ಆಗಿ ಟರ್ನ್ ಆಗುತ್ತಿದೆ. ಕಾರಣವಿಲ್ಲದೇ ಪಾತ್ರ ಬದಲಾಗುತ್ತಿರೋದಕ್ಕೆ ಅಂಜಲಿ ಸುಧಾಕರ್ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಏಕಾಏಕಿ ಸೀರಿಯಲ್‌ನಿಂದ ಹೊರ ಬಂದಿದ್ದಾರೆ. ಇದು ವೀಕ್ಷಕರಿಗೆ ಬೇಸರ ತರಿಸಿದೆ.

ನೋಡಿರಿ

