ಹಾಯ್‌ ಜನರೇ.. ಕಿಪಿ ಕೀರ್ತಿ ಯಾರು?  – ಬ್ಯೂಟಿ ಮುಖದಲ್ಲಾ, ಮನದಲ್ಲಾ?
ರೀಲ್ಸ್ ಕ್ವೀನ್ ಆಗಿದ್ದು ಹೇಗೆ?

ಹಾಯ್‌ ಜನರೇ.. ಕಿಪಿ ಕೀರ್ತಿ ಯಾರು?  – ಬ್ಯೂಟಿ ಮುಖದಲ್ಲಾ, ಮನದಲ್ಲಾ?ರೀಲ್ಸ್ ಕ್ವೀನ್ ಆಗಿದ್ದು ಹೇಗೆ?

ಹಾಯ್ ಜನರೇ.. ಈ ಡೈಲಾಗ್ ಕೇಳಿದ ತಕ್ಷಣ ನೆನಪಾಗೋದೇ ಈ ಪುಟ್ಟ ಹುಡುಗಿ.. ಈ ವಿಡಿಯೋ ನೋಡಿ ಯಾರಿದು ಹುಡುಗಿ ಅಂತಾ ಕೇಳೋದಕ್ಕಿಂತ ಬೈದವರೇ ಹೆಚ್ಚು.. ಸೋಶಿಯಲ್ ಮೀಡಿಯಾದಲ್ಲಂತೂ ಈಕೆಯನ್ನು ಟ್ರೋಲ್ ಮೇಲೆ ಟ್ರೋಲ್ ಮಾಡಿದ್ರು.. ಅದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಹಾಯ್ ಜನರೇ.. ಅನ್ನೋ ಡೈಲಾಗ್ ಒಂದು ಟ್ರೆಂಡ್ ಸೆಟ್ ಮಾಡಿದೆ.. ಜನರೇ ಜನರೇ ಅಂತಾ ಡೈಲಾಗ್ ಹೊಡೆದು ಮನೋರಂಜನೆ ನೀಡುವ ಹುಡುಗಿನೇ ಕಿಪಿ ಕೀರ್ತಿ.. ಇದೀಗ ಕಿಪಿ ಕೀರ್ತಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾಳೆ.. ಅದ್ರ ಮೂಲಕವೇ ಬದುಕಿಗೂ ದಾರಿ ಕಂಡುಕೊಳ್ತಿದ್ದಾಳೆ.. ಇದೀಗ ಆಕೆಯನ್ನ ಕೆಲ ಅವಕಾಶಗಳು ಹುಡುಕಿಕೊಂಡು ಬರ್ತಿದೆ.. ಈಗಾಗಲೇ ಅನೇಕ ಸಂದರ್ಶನಗಳಲ್ಲಿ ಪಾಲ್ಗೊಂಡು ತನ್ನ ಕಣ್ಣೀರಿನ ಕತೆ ಹೇಳಿದ್ದಾಳೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ 15 ಜನರ ಟೀಂ ಅನೌನ್ಸ್  – ರೋಹಿತ್ ಶರ್ಮಾ ಜೊತೆ ಓಪನರ್ ಯಾರು?

ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು.. ಹಾಯ್ ಜನರೇ ಅನ್ನೋ ಮಾತು ಒಂದು‌ ಕ್ಷಣ ಯಾರಪ್ಪಾ ಇವಳು ಅಂತ ನೋಡುವಂತೆ ಮಾಡಿದೆ.. ಹಾಯ್ ಜನರೇ.. ಹೇಳಿ ಜನರೇ ಅನ್ನೋ. ಕಿಪಿ ಕೀರ್ತಿ ವಿಡಿಯೋ ನೋಡಿ.. ಯಾವುದಪ್ಪಾ ಈ ಹೊಸ ಪ್ರತಿಭೆ.. ಇನ್ನೂ ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ.. ಮಾಡೋಕೆ ಕೆಲ್ಸ ಇಲ್ಲ.. ನೋಡೋಕೆ ಚೆನ್ನಾಗಿಲ್ಲ.. ಒಂದು ಡ್ರೆಸ್ ಸೆನ್ಸ್ ಬೇಡ್ವಾ..  ಅಂತಾ ಬೈದು, ನೆಗೆಟಿವ್ ಕಮೆಂಟ್ ಮಾಡಿದವರೇ ಹೆಚ್ಚು.. ಎಷ್ಟೇ ನೆಗೆಟಿವ್ ಕಮೆಂಟ್ ಬರ್ಲಿ.. ಜನ ಏನೇ ಮಾತಾಡಿಕೊಳ್ಳಲಿ.. ಇದಕ್ಕೆ ಕೇರ್ ಮಾಡದ ಕಿಪಿ ಕೀರ್ತಿ.. ಕಷ್ಟ.. ಸುಖ ಎಲ್ಲವನ್ನೂ ವೀವರ್ಸ್ ಜೊತೆ ಹಂಚಿಕೊಳ್ತಾ ಇದ್ದಾರೆ.

ಅಷ್ಟಕ್ಕೂ ಈ ಕಿಪಿ ಕೀರ್ತಿ ಕೊಡಗಿನವಳು.. ಹುಟ್ಟಿದಾಗಿನಿಂದ ಈಕೆ ತುಂಬಾ ಕಷ್ಟದಲ್ಲೇ ಬೆಳೆದ್ಲು.. ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನ ಕಳೆದುಕೊಂಡ್ಲು.. ಅದಾದನಂತ್ರ  ನನ್ನ ತಾಯಿ ದುಡಿದು ನನ್ನನ್ನು ಸಾಕುತ್ತಿರುವುದು ಎಂದು ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾಳೆ. ನಾನು ಹೆಣ್ಣು ಮಗುವಾಗಿದ್ದರಿಂದ ಸರಿಯಾಗಿ ಪ್ರೀತಿ ಕೊಟ್ಟಿಲ್ಲ.  ‘ಫ್ಯಾಮಿಲಿ ಕೊಟ್ಟ ಕಾಟ ತಾಯಿ ಎದುರಿಸಿದ ನೋವುಗಳನ್ನು ನೋಡಿ ಈಗ ನಾನು ದುಡಿದು ಸಾಧನೆ ಮಾಡಬೇಕು ಅನ್ನೋ ಆಸೆ ಶುರುವಾಗಿದೆ. ಚಿಕ್ಕ ವಯಸ್ಸಿನಲ್ಲಿ ತಿಳುವಳಿಕೆ ಇಲ್ಲದ ಕಾರಣ ಬೆಕ್ಕುಗಳ ಜೊತೆ ಹೆಚ್ಚಿಗೆ ಮಾತನಾಡುತ್ತಿದ್ದೆ. ಆಗ ಸಂಬಂಧಿಕರು ವಿಡಿಯೋ ಮಾಡಿಕೊಂಡು ಅಣ್ಣ ಮತ್ತು ಸ್ನೇಹಿತರಿಗೆ ತೋರಿಸಿ ಹುಚ್ಚಿ ಅಂತ ನನಗೆ ಪಟ್ಟ ಕೊಟ್ಟರು. ಇದರಿಂದ ಮನಸ್ಸಿಗೆ ತುಂಬಾ  ಹಿಂಸೆ ಆಗ್ತಿತ್ತು. ಸೆಕೆಂಡ್ ಪಿಯುಸಿ ಆದ್ಮೇಲೆ ನನಗೆ ಸ್ವಲ್ಪ ತಿಳುವಳಿಕೆ ಬಂತು’ಎಂದು ಕೀರ್ತಿ ತನ್ನ ಜೀವನದ ಕತೆಯನ್ನು ಬಿಚ್ಷಿಟ್ಟಿದ್ದಾಳೆ.

ಇನ್ನು ತನ್ನ ಆಡಿಕೊಳ್ಳೋರಿಗೆ, ಟ್ರೋಲ್ ಮಾಡೋರಿಗೆ ಕಿಪಿ ಕೀರ್ತಿ ಸರಿಯಾಗೇ ವಾರ್ನ್ ಮಾಡ್ತಾ ಬಂದಿದ್ದಾಳೆ.. ತನ್ನ ಸೌಂದರ್ಯದ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ, ಬ್ಯೂಟಿ ಮನಸ್ಸಲ್ಲಿ ಇರೋದು ಮುಖದಲ್ಲಿ ಇಲ್ಲ.. ಟ್ರೋಲ್ ಮಾಡೋರು ನೀವು ಎಷ್ಟು ಸುದಂರವಾಗಿದ್ದೀರಾ ತಿರುಗೇಟು ಕೊಟ್ಟು ಬಾಯಿ ಮುಚ್ಚಿಸುತ್ತಾಳೆ.

ಇನ್ನು ಜೀ ಕನ್ನಡ ವಾಹಿನಿ ಈ ಹಿಂದೆ ಕಾಮಿಡಿ ಪ್ರೀಮಿಯರ್ ಲೀಗ್ ಗೆ ಸೋಶಿಯಲ್ ಮೀಡಿಯಾ ಸ್ಟಾರ್ಸ್ ನ ಕರೆಸಿಕೊಂಡಿದ್ರು.. ಈ ವೇಳೆ ಕಿಪಿ ಕೀರ್ತಿ ಕೂಡ ಬಂದಿದ್ಲು.. ಆಗ ಸ್ಟೇಜ್ ನಲ್ಲಿ ತನ್ನ ಜೀವನದ ಕಹಿ ಘಟನೆಗಳನ್ನ ಹೇಳಿ ಕಣ್ಣೀರು ಹಾಕಿದ್ಲು.. ಆಗ ಅನುಶ್ರೀ..  ಜನರೇ ಎಂಬ ಪದವನ್ನು ಬಳಸಿ ಎಲ್ಲರನ್ನು ನಗಿಸಬೇಕು ಅಂತ ಪ್ರಯತ್ನ ಪಡ್ತಾ ಇದ್ದಾರೆ. ಆದರೆ ಆ ನಗಿಸುವ ಉದ್ದೇಶದ ಹಿಂದಿನ ಇವರನ್ನು ಯಾಕೆ ಹರ್ಟ್ ಮಾಡಬೇಕು? ಯಾಕೆ ಅವರ ನ್ಯೂನತೆಯನ್ನು ಕೆಟ್ಟ ಕೆಟ್ಟ ಕಾಮೆಂಟ್ ಮೂಲಕ ಹೇಳಬೇಕು ಅಂತ ಪ್ರಶ್ನೆ ಮಾಡಿದ್ರು..

ಇನ್ನು ಕಿಪಿ ಕೀರ್ತಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ.. ಅಪ್ಪು ಹಾಗೆ ಎಲ್ಲರಿಗೂ ಮಾದರಿಯಾಗಿ ಬದುಕಬೇಕು ಅನ್ನೋದು ಆಕೆಯ ಕನಸು. ಹೀಗಾಗಿ ಆಗಾಗ ವಿಡಿಯೋಗಳಲ್ಲಿ ಪುನೀತ್ ರಾಜ್ ಕುಮಾರ್ ಕುರಿತು ಮಾತಾಡ್ತಾ ಇದ್ದಾರೆ.. ಆರಂಭದಲ್ಲಿ ಈಕೆಯನ್ನ ಹೇಟ್ ಮಾಡ್ತಿದ್ದವರೆಲ್ಲಾ ಈಗ ಆಕೆಯ ವಿಡಿಯೋವನ್ನ ಇಷ್ಟ ಪಟ್ಟು ನೋಡ್ತಾರೆ. ಇದೀಗ  ಸೋಶಿಯಲ್ ಮೀಡಿಯಾದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ  ಫಾಲೋವರ್ಸ್ ಹೊಂದಿದ್ದಾಳೆ.. ದಿನಕ್ಕೊಂದು ರೀಲ್ಸ್, ವಾರಕ್ಕೊಂದು ಲೈವ್ ಅಂತ ಜನರನ್ನು ಮನೋರಂಜಿಸುತ್ತಾಳೆ. ಸದ್ಯ ಸೋಷಿಯಲ್ ಮೀಡಿಯಾ ಮೂಲಕ ಬರುವ ಪ್ರಮೋಷನ್ಗಳಿಂದ ದುಡಿಮೆ ಮಾಡಲು ಶುರು ಮಾಡಿದ್ದಾರೆ. ತಮ್ಮೆಲ್ಲಾ‌ ನ್ಯೂನತೆಗಳನ್ನು ಇಟ್ಟುಕೊಂಡು ಕೊರಗುವವರ ನಡುವೆ ಈ ಕಿಪಿ‌ಕೀರ್ತಿ ದೊಡ್ಡ ಪಾಸಿಟಿವ್ ಎನರ್ಜಿಯಾಗಿ ಬೆಳೆಯುತ್ತಿರುವುದು ನಿಜಕ್ಕೂ ಎಲ್ಲರಿಗೂ ಮಾದರಿ ಅಂದ್ರೆ ತಪ್ಪಲ್ಲ ಅಲ್ವಾ?

Shwetha M

Leave a Reply

Your email address will not be published. Required fields are marked *