ಶಿವಣ್ಣಗೆ ಮೂತ್ರಕೋಶವೇ ಕಟ್ – ಹೇಗೆ ನಡೆಯಿತು ಸರ್ಜರಿ?
ದೊಡ್ಮನೆ ದೊರೆ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ಗೆ ಯಶಸ್ವಿಯಾಗಿ ಸರ್ಜರಿ ಮುಗಿದಿದೆ. ಸತತ ಆರು ಗಂಟೆಗಳ ಕಾಲ ನಡೆದ ಆಪರೇಷನ್ ಯಶಸ್ವಿಯಾಗಿದ್ದು ಶಿವಣ್ಣ ಚೇತರಿಸಿಕೊಳ್ತಿದ್ದಾರೆ. ಶಾಕಿಂಗ್ ವಿಚಾರ ಅಂದ್ರೆ ಮೂತ್ರಕೋಶವನ್ನೇ ಕಟ್ ಮಾಡಲಾಗಿದೆ. ಕನ್ನಡ ಚಿತ್ರರಂಗದ ಪ್ರಾರ್ಥನೆ ಫಲಿಸಿದೆ. ಅಭಿಮಾನಿಗಳು ಪೂಜೆಯೂ ಫಲ ಕೊಟ್ಟಿದೆ. ನಟ ಶಿವರಾಜ್ ಕುಮಾರ್ ಅವರ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅಮೆರಿಕದಲ್ಲಿ ಯಶಸ್ವಿಯಾಗಿ ಮುಗಿದಿದೆ. ಡಾ. ಮುರುಗೇಶ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಸರ್ಜರಿ ಯಶಸ್ವಿಯಾಗಿ ನಡೆದಿದೆ. ಪತ್ನಿ ಗೀತಾ ಶಿವರಾಜ್ಕುಮಾರ್ ಹಾಗೇ ಬಾಮೈದ ಮಧು ಬಂಗಾರಪ್ಪ ಜೊತೆಯಲ್ಲೇ ಇದ್ದು ಶಿವಣ್ಣರನ್ನ ಆರೈಕೆ ಮಾಡುತ್ತಿದ್ದಾರೆ.
ಶಿವಣ್ಣಗೆ ಮೂತ್ರಕೋಶದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಪಿತ್ತ ಕೋಶ ಶಸ್ತ್ರಕಿಕಿತ್ಸೆಗಾಗಿ ಶಿವರಾಜ್ ಕುಮಾರ್ ಅಮೆರಿಕದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದರು. ಸತತ 6 ಗಂಟೆಗಳ ಕಾಲ ನಡೆದ ಸರ್ಜರಿ ಯಶಸ್ವಿಯಾಗಿದೆ. ಡಾ.ಮುರುಗೇಶ್ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಸರ್ಜರಿ ಮಾಡಿದೆ. ಕ್ಯಾನ್ಸರ್ ತಗುಲಿದ ಮೂತ್ರಪಿಂಡವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಮೂಲಕ ರೋಗವನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ ಎಂದು ಡಾ. ಮುರುಗೇಶ ಮನೋಹರನ್ ಹೇಳಿದ್ದಾರೆ. ಸರ್ಜರಿ ಬಳಿಕ ಅವರದ್ದೇ ಕರಳು ಬಳಸಿ ಕೃತಕ ಮೂತ್ರಕೋಶ ಮತ್ತೆ ಅಳವಡಿಸಲಾಗಿದೆ. ಶಿವಣ್ಣ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಧೈರ್ಯವಾಗಿದ್ದಾರೆ. ಸರ್ಜರಿ ವೇಳೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಕೆಲವೇ ದಿನಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ಶಿವಣ್ಣ ಆಪರೇಷನ್ ಸಕ್ಸಸ್ – ಎಷ್ಟು ಗಂಟೆಯಲ್ಲಿ ಸರ್ಜರಿ ಆಯ್ತು?
ಇನ್ನು ಶಿವಣ್ಣನ ಪ್ರತೀ ಹೆಜ್ಜೆಯಲ್ಲೂ ಜೊತೆಯಾಗಿ ನಿಂತಿರುವ ಗೀತಕ್ಕ ಕೂಡ ಮಾತನಾಡಿದ್ದಾರೆ. ಅಭಿಮಾನಿಗಳಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಸದ್ಯ ಆಪರೇಷನ್ ಕಾರಣದಿಂದ ಶಿವಣ್ಣ ನಟನೆಯಿಂದ ದೊಡ್ಡ ಬ್ರೇಕ್ ಪಡ್ಕೊಂಡಿದ್ದಾರೆ. ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಆರೋಗದ್ಯದ ಕಡೆ ಗಮನ ಹಾಕಿದ್ದಾರೆ. ತಮ್ಮದೇ ಹೋಂ ಬ್ಯಾನರ್ನಲ್ಲಿ ಮೂಡಿ ಬಂದ ‘ಭೈರತಿ ರಣಗಲ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ ಶಿವಣ್ಣ ಸಿನಿಮಾ ಪ್ರಮೋಷನ್ ವೇಳೆ ಅನಾರೋಗ್ಯದ ವಿಚಾರವನ್ನ ಹೇಳಿದ್ದರು. ಬಟ್ ಕ್ಯಾನ್ಸರ್ ಅನ್ನೋದು ಎಲ್ಲೂ ರಿವೀಲ್ ಆಗಿರಲಿಲ್ಲ. ಶಸ್ತ್ರಚಿಕಿತ್ಸೆಗೆಂದು ಅಮೆರಿಕಕ್ಕೆ ಹೋಗುವುದಕ್ಕೂ ಮೊದಲು ತಮಗೆ ಕ್ಯಾನ್ಸರ್ ಎಂಬ ವಿಚಾರವನ್ನು ರಿವೀಲ್ ಮಾಡಿದ್ದರು.
ಯಾವಾಗ ತಮಗೆ ಕ್ಯಾನ್ಸರ್ ಇದೆ ಅಂತಾ ಗೊತ್ತಾಯ್ತೋ ಶಿವಣ್ಣ ಎದೆಗುಂದಲಿಲ್ಲ. ಆತಂಕಗೊಳ್ಳದೇ ಚಿಕಿತ್ಸೆ ಬಗ್ಗೆ ಶಿವಣ್ಣ ಆಲೋಚಿಸಿದ್ದರು. ಜೊತೆಗೆ ಕುಟುಂಬಸ್ಥರ ಬೆಂಬಲವೂ ಸಿಕ್ಕಿತ್ತು. ಬೆಂಗಳೂರಿನಲ್ಲಿ ಇದ್ದುಕೊಂಡೇ ವಿವಿಧ ಹಂತಗಳಲ್ಲಿ ಚಿಕಿತ್ಸೆಗೆ ಸಿದ್ಧರಾಗಿದರು. ಕೊನೆಯದಾಗಿ ಶಸ್ತ್ರಚಿಕಿತ್ಸೆ ನಡೆಸಿ ಕ್ಯಾನ್ಸರ್ ತಗುಲಿದ್ದ ಅವರ ಮೂತ್ರಕೋಶವನ್ನು ವೈದ್ಯರು ತೆಗೆದಿದ್ದಾರೆ. ಌಕ್ಚುಲಿ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಮಸ್ಯೆ ಬಹಳ ಜಾಸ್ತಿಯಾಗ್ತಿದೆ. ದೇಹದ ವಿವಿಧ ಭಾಗಗಳಿಗೆ ಕ್ಯಾನ್ಸರ್ ತಗಲುತ್ತಿದೆ. ಅದರಲ್ಲೂ ಬ್ಲಾಡರ್ ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆಯೂ ಜಾಸ್ತಿ ಆಗ್ತಿದೆ. ಬಟ್ ಆರಂಭದಲ್ಲೇ ಸಮಸ್ಯೆಯನ್ನು ಗುರ್ತಿಸಿದರೆ ಮೂತ್ರಕೋಶ ಕ್ಯಾನ್ಸರ್ ಸಮಸ್ಯೆಯಿಂದ ಹೊರಬಹುದು ಎಂದು ವೈದ್ಯರೂ ಹೇಳ್ತಾರೆ. ಶಿವಣ್ಣಗೂ ಕೂಡ ಆರಂಭದಲ್ಲೇ ಸಮಸ್ಯೆ ಬಗ್ಗೆ ಗೊತ್ತಾಗಿರೋದ್ರಿಂದ ಸರ್ಜರಿ ಮೂಲಕ ಮೂತ್ರಕೋಚ್ ಕತ್ತರಿಸಿ ತೆಗೆಯಲಾಗಿದೆ. ಶಿವಣ್ಣ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಡಿಸೆಂಬರ್ 18ರಂದು ಪತ್ನಿ ಹಾಗೂ ಪುತ್ರಿ ಜೊತೆ ಶಿವಣ್ಣ ಅಮೆರಿಕಾಗೆ ತೆರಳಿಸಿದ್ದರು. ಇನ್ನು 30 ದಿನಗಳ ಕಾಲ ಅಲ್ಲೇ ಉಳಿಯಲಿದ್ದಾರೆ. ಜನವರಿ 25ರಂದು ಸೆಂಚುರಿ ಸ್ಟಾರ್ ಮತ್ತೆ ಭಾರತಕ್ಕೆ ವಾಪಸ್ ಬರಲಿದ್ದಾರೆ. ಬಟ್ ಮುಂದಿನ ದಿನಗಳಲ್ಲಿ ಶಿವಣ್ಣ ಹೆಚ್ಚು ಜಾಗರೂಕರಾಗಿರಬೇಕಾಗುತ್ತೆ ಎಂದು ವೈದ್ಯರೇ ಹೇಳಿದ್ದಾರೆ. ಸದ್ಯಕ್ಕಂತೂ ಸರ್ಜರಿ ಯಶಸ್ವಿಯಾಗಿರೋದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಮಸ್ಕಾರ.