ಕನ್ನಡದ ಸ್ಟಾರ್ಸ್‌ಗೂ ಗಿಲ್ಲಿನೇ ಫೇವರಿಟ್! – ಡಮಾಲ್ ಡಿಮಿಲ್ ಡಕ್ಕಾ ಟ್ರೆಂಡ್

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಒನ್ ಮ್ಯಾನ್ ಶೋ, ಟಾಸ್ಕ್ ಮಾಸ್ಟರ್ ಅಂದ್ರೆ ಅದು ಗಿಲ್ಲಿನಟ. ಈ ಮಾಸ್ಟರ್ ಮೈಂಡ್ ಆಟಕ್ಕೆ ಇಡೀ ಕನ್ನಡಿಗರೇ ಫಿದಾ ಆಗಿದ್ದಾರೆ. ಪ್ರೋಮೋದಲ್ಲೂ, ಸೋಶಿಯಲ್ ಮೀಡಿಯಾದಲ್ಲೂ ಗಿಲ್ಲಿಯದ್ದೇ ಹವಾ. ಆತನ ಪಂಚಿಂಗ್ ಡೈಲಾಗ್ಸ್, ಕಾಮಿಡಿ, ಫನ್ನಿ ಮಾತು ಸಖತ್ ಟ್ರೆಂಡ್ ಸೆಟ್ ಮಾಡಿದೆ. ಇನ್ನು ಬಿಗ್ ಬಾಸ್ ಸ್ಪರ್ಧಿಗಳು, ಫ್ಯಾನ್ಸ್ ಮಾತ್ರವಲ್ಲ, ಕನ್ನಡದ ಸ್ಟಾರ್ಸ್ ಬಾಯಲ್ಲೂ ಗಿಲ್ಲಿನಟನದ್ದೇ ಹೆಸರು ಕೇಳಿ ಬರ್ತಿದೆ. ಅಷ್ಟಕ್ಕೂ ಈ ಮಂಡ್ಯದ ಹೈದನಿಗೆ ಯಾಕೆ ಇಷ್ಟೊಂದು ಹೈಪ್ ಸಿಕ್ತಾ ಇದೆ? ಬೇಕು ಬೇಕಂತ್ಲೆ ಹೈಪ್ ಕೊಡಲಾಗ್ತಿದ್ಯಾ? ಗಿಲ್ಲಿನಟ ಎಲ್ಲರ ಫೆವರೆಟ್ ಆಗಿದ್ಹೇಗೆ? ಇವ್ವೆಲದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಾಮಿಡಿ ಅಲ್ಲ.. ಗಿಲ್ಲಿ ಕಂಡ್ರೆ ಉರಿ! – ಗೆಲ್ತಾರೆ ಅನ್ನೋ ಭಯಕ್ಕೆ ಕಳಪೆ ಕೊಟ್ಟು ಗಿಲ್ಲಿಯನ್ನ ಕುಗ್ಗಿಸ್ತಿದ್ದಾರಾ ಮನೆ ಮಂದಿ?
ಬಿಗ್‌ಬಾಸ್ ಶೋ ಅಂದ್ರೆ ಇದು ವ್ಯಕ್ತಿತ್ವದ ಆಟ.. ದೊಡ್ಮನೆಯಲ್ಲಿ ಆಟ ಆಡೋದ್ರ ಜೊತೆಗೆ ಸ್ಪರ್ಧಿಗಳು ಹೇಗಿರ್ತಾರೆ? ಎಷ್ಟು ಮನರಂಜನೆ ಕೊಡ್ತಾರೆ ಅನ್ನೋದು ಕೂಡ ತುಂಬಾನೇ ಇಂಪಾರ್ಟೆಂಟ್. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಹವಾ ಮಾತ್ರ ನೆಕ್ಟ್ಸ್ ಲೆವೆಲ್‌ನಲ್ಲಿದೆ. ಈ ಹಿಂದಿನ ಯಾವ ಸೀಸನ್‌ಗಳಲ್ಲೂ ಯಾವ ಸ್ಪರ್ಧಿ ಕೂಡ ಗಿಲ್ಲಿಯಷ್ಟು ಸೌಂಡ್ ಮಾಡಿರ್ಲಿಲ್ಲ. ಮಾತಿನ ಮಲ್ಲ ಆಟಕ್ಕೂ ಸೈ, ಮನರಂಜನೆ ನೀಡೋದಕ್ಕೂ ಜೈ.. ಉಳಿದ ಸ್ಪರ್ಧಿಗಳ ಜೊತೆ ಕಾಮಿಡಿ ಮಾಡೋದು, ಪ್ರತಿ ಮಾತಿಗೂ ಅಲ್ಲಿಯೇ ತಿರುಗೇಟುಕೊಡೋದು, ಅಷ್ಟೇ ಅಲ್ಲ ಇದ್ದ ವಿಷಯವನ್ನು ನೇರವಾಗಿ ಹೇಳೋದರಲ್ಲಿ ಗಿಲ್ಲಿ ನಟ ಎತ್ತಿದ ಕೈ. ಇನ್ನು ಗಿಲ್ಲಿಯನ್ನ ಯಾರಾದ್ರೂ ಕೆಣಕಿದ್ರೆ ರೋಸ್ಟ್ ಆಗೋದು ಪಕ್ಕಾ. ಇದೇ ಕಾರಣಕ್ಕೆ ಗಿಲ್ಲಿ ವೀಕ್ಷಕರ ಅಚ್ಚುಮೆಚ್ಚಿನ ಸ್ಫರ್ಧಿ ಎನಿಸಿಕೊಂಡಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲ.. ಸೆಲೆಬ್ರಿಟಿಗಳಿಗೂ ಗಿಲ್ಲಿನೇ ಫೇವರಿಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಗೆ ಕಾಲಿಡೋದಿಕ್ಕೂ ಮುನ್ನವೇ ಗಿಲ್ಲಿನಟ ಸಿಕ್ಕಾಪಟ್ಟೆ ಫೇಮಸ್. ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಗಿಲ್ಲಿ ತನ್ನ ಪ್ರತಿಭೆಯಿಂದಲೇ ಗುರುತಿಸಿಕೊಂಡ್ರು. ಯಾವುದೇ ಟೇಕ್ ಇಲ್ಲದೆ, ನಿರರ್ಗಳವಾಗಿ ಡೈಲಾಗ್ ಹೊಡೆಯೋ ಗಿಲ್ಲಿ, ನಟ ಜಗ್ಗೇಶ್, ರಕ್ಷಿತಾ ಪ್ರೇಮ್ ಮನಸ್ಸು ಗೆದ್ದಿದ್ದು ಮಾತ್ರವಲ್ಲದೇ, ಕಾಮಿಡಿ ಕಿಲಾಡಿಗಳು ಸೀಸನ್ 4 ರನ್ನರಪ್ ಕೂಡ ಆಗಿದ್ರು,. ಅದಾದ ಬಳಿಕ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಮಿಂಚಿದ್ರು. ನಟಿ ಯಶಸ್ವಿನಿ ಗಿಲ್ಲಿಗೆ ಮೆಂಟರ್ ಆಗಿದ್ರು. ಇವ್ರಿಬ್ಬರ ಕಾಂಬಿನೇಷನ್ ಸಿಕ್ಕಾಪಟ್ಟೆ ವರ್ಕ್ ಆಗಿತ್ತು. ಗಿಲ್ಲಿ ಮೊದಲ ರನ್ನಅಪ್ ಆದ್ರು. ಭರ್ಜರಿ ಬ್ಯಾಚುಲರ್ಸ್ ಶೋನ ಜಡ್ಜ್ ಆಗಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ರಚಿತಾ ರಾಮ್ ಗಿಲ್ಲಿ ಮಾತಿನ ಶೈಲಿ, ವಿಭಿನ್ನ ಮ್ಯಾನರಿಸಂನ ಹಾಡಿ ಹೊಗಳಿದ್ದರು. ಈ ಶೋ ಬಳಿಕ ಡಿಕೆಡಿಯಲ್ಲೂ ಗಿಲ್ಲಿ ಭಾಗವಹಿಸಿದ್ರು. ಯಶಸ್ವಿನಿ, ಗಗನಾಳನ್ನ ಕಾಲೆಳಿತಾ, ಪ್ರಾಪರ್ಟಿ ಕಾಮಿಡಿ ಮಾಡುತ್ತಾ ಮನರಂಜನೆ ನೀಡ್ತಾ ಬಂದ್ರು. ಗಿಲ್ಲಿ ಪ್ರತಿ ವಾರ ಮನರಂಜನೆ ನೀಡಿ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾದ್ರು. ಹೀಗಾಗೇ ಡಿಕೆಡಿ ಶೋನಲ್ಲಿ ಟ್ರೂ ಹೊನೆಸ್ಟ್ ಎಂಟರ್ಟೈನರ್ ಎಂಬ ಬಿರುದು ಕೂಡ ಸಿಕ್ಕಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ಗಿಲ್ಲಿನಟನಿಗೆ ಸಿನಿಮಾದಲ್ಲಿ ಚಾನ್ಸ್ ನಿಡೋದಾಗಿ ಹೇಳಿದ್ರು. ಇದಿಷ್ಟೇ ಅಲ್ಲ ಸ್ಯಾಂಡಲ್‌ವುಡ್ ನಟ ಶರಣ್ ಕೂಡ ಗಿಲ್ಲಿನಟ ದೊಡ್ಡ ಫ್ಯಾನ್. ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನಲ್ಲಿ ಗಿಲ್ಲಿ ಆಕ್ಟಿಂಗ್ ಬಗ್ಗೆ ಹೊಗಳಿದ ಶರಣ್, ನಾನು ನಿಮ್ಮ ಅಭಿಮಾನಿ ಅಂ ಹೇಳಿ ಗಿಲ್ಲಿ ಜೊತೆ ಸೆಲ್ಫಿ ತೆಗೆದುಕೊಂಡಿದ್ರು. ಜೀಕನ್ನಡದ ರಿಯಾಲಿಟಿ ಶೋ ಮೂಲಕ ಹೈಲೈಟ್ ಆದ ಗಿಲ್ಲಿ ಈಗ ಬಿಗ್ ಬಾಸ್ ಮನೆಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಈ ಮಾಜಿ ಸ್ಪರ್ಧಿಗಳಿಗೂ ಗಿಲ್ಲಿಯೇ ಇಷ್ಟ ಅಂತೆ.
ಹೌದು. ದೊಡ್ಮನೆಯಲ್ಲಿ ಗಿಲ್ಲಿ ಆಟವನ್ನ ವೀಕ್ಷಕರು ಮಾತ್ರವಲ್ಲ, ಸೆಲೆಬ್ರಿಟಿಗಳು, ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಕೂಡ ಇಷ್ಟ ಪಟ್ಟಿದ್ದಾರೆ. ಗಿಲ್ಲಿ ಗೆಳೆಯ ಹುಲಿ ಕಾರ್ತಿಕ್ ಗಿಲ್ಲಿ ತುಂಬಾ ಚೆನ್ನಾಗಿ ಆಟ ಆಡ್ತಿದ್ದಾರೆ. ಗಿಲ್ಲಿ ಗೆಲ್ಲೋದು ಪಕ್ಕಾ ಅಂತ ಹೇಳಿದ್ದಾರೆ. ಇನ್ನು ನಟಿ ವೈಷ್ಣವಿ ಕೂಡ ಗಿಲ್ಲಿ ಬುದ್ಧಿವಂತಿಕೆಯ ಆಟ ಲೈಕ್ ಮಾಡಿದ್ದಾರೆ. ಇನ್ನು ಬಿಗ್ ಬಾಸ್ 11ರ ಸ್ಪರ್ಧಿ ಯಮುನಾ ಅವರು ಕೂಡ ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ಯಾವುದೇ ಸೇಡು ಗಿಲ್ಲಿಗಿಲ್ಲ, ಆ ಕ್ಷಣವನ್ನು ಅವರು ಜೀವಿಸ್ತಿದ್ದಾರೆ. ಹಾಗಾಗಿಯೇ ನನಗೆ ಗಿಲ್ಲಿ ಆಟ ನನಗೆ ತುಂಬಾ ಇಷ್ಟ ಎಂದು ಯಮುನಾ ಹೇಳಿದ್ದಾರೆ. ಇವ್ರ ಜೊತೆಗೆ ಶಿಶಿರ್ ಶಾಸ್ತ್ರಿ, ಐಶ್ವರ್ಯ ಶಿಂಧೋಗಿ, ಗೌತಮಿ ಜಾಧವ್ ಗೂ ಗಿಲ್ಲಿನೇ ವಿನ್ ಆಗ್ಬೇಕು ಅಂತ ಹೇಳಿದ್ದಾರೆ.
ಇನ್ನು ಬಿಗ್‌ಬಾಸ್ ನ ಪ್ರತಿ ಪ್ರೋಮೋ, ಎಪಿಸೋಡ್‌ನಲ್ಲೂ ಗಿಲ್ಲಿನೇ ಹೈಲೈಟ್ ಪ್ರತಿ ಸಂಚಿಕೆಯಲ್ಲೂ 60% ಗಿಲ್ಲಿನೇ ಕವರ್ ಆಗಿರ್ತಾರೆ. ವಾರದ ಕತೆ ಕಿಚ್ಚನ ಜೊತೆ, ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ ಸಂಚಿಕೆಯಲ್ಲೂ ಗಿಲ್ಲಿಯದ್ದೇ ದರ್ಬಾರ್. ಗಿಲ್ಲಿ ಮುಗ್ದ ಮಾತು, ಕಾಮಿಡಿ, ಪಂಚಿಂಗ್ ಡೈಲಾಗ್ಸ್ ಕಿಚ್ಚ ಸುದೀಪ್‌ಗೂ ಇಷ್ಟವಾಗಿದೆ. ಹೀಗಾಗೇ ವೀಕೆಂಡ್‌ನಲ್ಲಿ ಕಿಚ್ಚ ಗಿಲ್ಲಿಗೆ ಏನಾದ್ರೂ ಆಕ್ಟಿವಿಟಿ ಕೊಡ್ತಿರ್ತಾರೆ. ಆದ್ರೆ ಇದನ್ನ ನೋಡಿದ ಅನೇಕರು ಗಿಲ್ಲಿಗೆ ಬೇಕಂತಲೇ ಹೈಪ್ ಕೊಡಲಾಗ್ತಿದೆ. ಗಿಲ್ಲಿ ವಿನ್ ಆಗ್ಬೇಕು ಅಂತ ಹೀಗೆ ಮಾಡಲಾಗ್ತಿದೆ ಎಂದು ಹೇಳ್ತಿದ್ದಾರೆ. ಇದೀಗ ಗಿಲ್ಲಿಗೆ ಹೈಪ್ ಕೊಡಲಾಗ್ತಿದೆ ಎಂದವರಿಗೆ ಸೂಪರ್ ಹಿಟ್ ಸಿನಿಮಾದ ನಾಯಕ ಗೌರವ್ ಶೆಟ್ಟಿ ಉತ್ತರಿಸಿದ್ದಾರೆ. ಹೈಪ್ ಅನ್ನೋದಕ್ಕಿಂತ ಗಿಲ್ಲಿ ಅವರು ನ್ಯಾಚುರಲ್ ಆಗಿ ಆಟ ಆಡುತ್ತಿದ್ದಾರೆ. ಹಾಗಾಗಿ ಬೇರೆಯವರಿಗೆ ಅಷ್ಟಾಗಿ ಹೈಪ್ ಸಿಕ್ಕಿಲ್ಲ ಎಂದು ಹೇಳಬಹುದು. ಒಂದೆರಡು ದಿನ ನಾಟಕ ಮಾಡಿಕೊಂಡು ಬಿಗ್‌ಬಾಸ್ ಮನೆಯಲ್ಲಿ ಇರ್ಬೋದು. ಆದ್ರೆ ಹಾಗಿಲ್ಲ. ಈ ಸಲ ಗಿಲ್ಲಿ ಬಿಗ್ ಬಾಸ್ ವಿನ್ ಆಗೋದು ಪಕ್ಕಾ ಅಂದಿದ್ದಾರೆ.
ಇನ್ನು ಗಿಲ್ಲಿ ಹವಾ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಇದೀಗ ಗಿಲ್ಲಿಗಾಗಿ ಅವ್ರ ಫ್ಯಾನ್ಸ್ ಸಾಂಗ್ ವೊಂದನ್ನ ರೆಡಿ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಿದ್ದಾರೆ. ರಗಳೆ ಬೀಟ್ಸ್ ಎಂಬ ಟೀಂ, ಗಿಲ್ಲಿ ಗಿಲ್ಲಿ ಕಿಂಗ್ ಮಾತಲ್ಲಿ.. ಡಿಮಿಲ್ ಡಕ್ಕಾ, ಗಿಲ್ಲಿ ಗೆಲ್ಲೊದು ಪಕ್ಕಾ ಅನ್ನೋ ಸಾಂಗ್ ನ ರೆಡಿ ಮಾಡಿದೆ. ಈ ಸಾಂಗ್‌ನಲ್ಲಿ ಗಿಲ್ಲಿ ಆಟದ ವೈಖರಿ, ಅವರೇ ಬಿಗ್ ಬಾಸ್ ಗೆಲ್ಲುತ್ತಾರೆ ಎಂಬ ರೀತಿಯಲ್ಲಿ ತೋರಿಸಲಾಗಿದೆ.
ಒಟ್ಟಾರೆ, ಗಿಲ್ಲಿ ಈಗ ಎಲ್ಲಾ ಕಡೆ ಕ್ರೇಜ್ ಇದೆ. ಸಾಮಾನ್ಯ ಜನರು ಮಾತ್ರವಲ್ಲದೇ, ಸೆಲೆಬ್ರಿಟಿಗಳು ಕೂಡ ಕಾಮಿಡಿ ಕಿಂಗ್ ಆಟಕ್ಕೆ ಮನಸೋತಿದ್ದಾರೆ. ಗಿಲ್ಲಿ ಇನ್ನೂ ಒಂಚೂರು ಸೀರಿಯಸ್ ಆಗಿ ಆಡಿದ್ರೆ ಸೀಸನ್ 12 ರ ಟ್ರೋಫಿ ಗೆಲ್ಲೋದು ಪಕ್ಕಾ ಅಂತ ಎಲ್ಲರೂ ಹೇಳ್ತಿದ್ದಾರೆ.

ನೋಡಿರಿ

