ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಸತ್ಯ’ ಸೀರಿಯಲ್ ನಟ – ಹೇಗಿತ್ತು ಅಮೂಲ್ ಬೇಬಿ ಕಲ್ಯಾಣ?
`ಸತ್ಯ’ ಸೀರಿಯಲ್ ನಲ್ಲಿ ಅಮೂಲ್ ಬೇಬಿ ಎಂದೇ ಖ್ಯಾತಿ ಪಡೆದಿರುವ ನಟ ಸಾಗರ್ ಬಿಳಿಗೌಡ ನಟಿ ಸಿರಿ ರಾಜು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ.. ರಾಹುಲ್-ಆಥಿಯಾಗೆ ಎಂತೆಂಥಾ ಉಡುಗೊರೆಗಳು? – ಮದುವೆಗಿಂಥ ಸದ್ದು ಮಾಡ್ತಿವೆ ದುಬಾರಿ ಗಿಫ್ಟ್..!
ಬೆಂಗಳೂರಿನ ಜೆಪಿ ನಗರದಲ್ಲಿ ಗುರುವಾರ ಗುರುಹಿರಿಯರ ಸಮ್ಮುಖದಲ್ಲಿ ಸಾಗರ್ ಹಾಗೂ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಸಿನಿರಂಗದ ಗಣ್ಯರು, ಕಲಾವಿದರು, ಆತ್ಮೀಯರು ಭಾಗಿಯಾಗಿ ವಧು – ವರನಿಗೆ ಶುಭ ಹಾರೈಸಿದ್ದಾರೆ.
ಖಾಸಗಿ ವಾಹಿನಿಯ ಇವೆಂಟ್ ವೇಳೆ ಸಾಗರ್ ಹಾಗೂ ಸಿರಿ ಪರಿಚಯವಾಗಿತ್ತು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್ ಇತ್ತು. ಆದರೆ ಆರಂಭದಲ್ಲಿ ಮದುವೆ ಆಗುವ ಆಲೋಚನೆ ಇಬ್ಬರಿಗೂ ಇರಲಿಲ್ಲ. ಬಳಿಕ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ನಿಶ್ಚಯ ಮಾಡಿಕೊಂಡಿದ್ದರು. ಕಳೆದ ತಿಂಗಳು ನವೆಂಬರ್‌ನಲ್ಲಿ ಸಿರಿ ರಾಜು ಮತ್ತು ಸಾಗರ್ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ದಾಂಪತ್ಯಕ್ಕೆ ಹಲವು ನಟ ನಟಿಯರು ಶುಭ ಹಾರೈಸಿದ್ದಾರೆ.