ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ‘ನೆಪೋಟಿಸಂ ಮಕ್ಕಳು’- ವಿವಾದಾತ್ಮಕ ಹೇಳಿಕೆ ನೀಡಿದ ನಟಿ ಕಂಗನಾ
ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ಗುಡುಗಲು ಆರಂಭಿಸಿದ್ದಾರೆ. ಇಷ್ಟು ದಿನ ಬಾಲಿವುಡ್ ಮಂದಿಯನ್ನು ಟೀಕಿಸುತ್ತಿದ್ದ ಕಂಗನಾ ಈಗ ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡ್ತಾ ಇದ್ದಾರೆ. ಇದೀಗ ಕಂಗನಾ, ರಾಹುಲ್ ಗಾಂಧಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ರಾಹುಲ್ ಗಾಂಧಿಯನ್ನು ನೆಪೋಟಿಸಂ ಮಗು ಅಂತಾ ಕಂಗನಾ ಕರೆದಿದ್ದಾರೆ.
ಇದನ್ನೂ ಓದಿ:ಮಂಡ್ಯದಿಂದ HDK ಸ್ಪರ್ಧೆ.. – ಸೈಲೆಂಟ್ ಆಗಿ ಸೈಡ್ ಗೆ ಹೋದ್ರಾ ಸುಮಲತಾ ಅಂಬರೀಶ್?
ಸಂದರ್ಶನವೊಂದರಲ್ಲಿ ಈ ಬಗ್ಗೆ ಕಂಗನಾ ಮಾತನಾಡಿದ್ದಾರೆ. ನನ್ನ ಪಾಲಿಗೆ ಕಾಂಗ್ರೆಸ್ ಯಾವಾಗಲೂ ಕೆಟ್ಟ ಪಕ್ಷ ಆಗಿತ್ತು. ಆ ಪಕ್ಷದಲ್ಲಿ ಇರುವ ನೆಪೋಟಿಸಂ ನನಗೆ ಬಹಳ ತೊಂದರೆ ಎನಿಸುತ್ತಿತ್ತು. ಯಾಕೆಂದರೆ ಚಿತ್ರರಂಗದಲ್ಲಿ ನೆಪೋಟಿಸಂ ಕಾರಣದಿಂದಲೇ ನಾನು ಟಾರ್ಗೆಟ್ ಆಗಿದ್ದೆ. ಅದನ್ನು ನಾನು ನೇರವಾಗಿಯೇ ವಿರೋಧಿಸಿದೆ. ಅದು ನನ್ನನ್ನು ಶೋಷಣೆ ಮಾಡುತ್ತಿತ್ತು. ನೆಪೋಟಿಸಂ, ಗುಂಪುಗಾರಿಕೆ, ವಂಶ ಪಾರಂಪರ್ಯ ರಾಜಕೀಯ. ಈ ಕಾರಣದಿಂದಲೇ ನಾನು ಕಾಂಗ್ರೆಸ್ ಪಕ್ಷವನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಬಗ್ಗೆ ಒಂದೇ ಪದದಲ್ಲಿ ವಿವರಿಸಿ ಅಂತಾ ಆಂಕರ್ ಕೇಳಿದ್ದಾರೆ. ಇದಕ್ಕೆ ಕಂಗನಾ ‘ನೆಪೋಟಿಸಂ ಮಕ್ಕಳು’ ಎಂದು ಹೇಳಿದ್ದಾರೆ. ‘ಅವರು ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರವಾಗಿದ್ದಾರೆ’ ಅಂತಾ ಕಂಗನಾ ಟೀಕೆ ಮಾಡಿದ್ದಾರೆ. ಈ ವಿವಾದಾತ್ನಕ ಹೇಳಿಕೆಗೆ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕು.