ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ ಪ್ರಕಟ – ಕನ್ನಡಕ್ಕೆ ಈ ಬಾರಿ ಜಾಕ್‌ಪಾಟ್! – ಯಾವ್ಯಾವ ಸಿನಿಮಾಗೆ ಬಂತು ಪ್ರಶಸ್ತಿ?

ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ ಪ್ರಕಟ – ಕನ್ನಡಕ್ಕೆ ಈ ಬಾರಿ ಜಾಕ್‌ಪಾಟ್! – ಯಾವ್ಯಾವ ಸಿನಿಮಾಗೆ ಬಂತು ಪ್ರಶಸ್ತಿ?

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದೆ.  ಎಲ್ಲರ ನಿರೀಕ್ಷೆಯಂತೆ ಕನ್ನಡದ ಕಾಂತಾರ ಹಾಗೂ ಕೆಜಿಎಫ್ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಬಾರಿಯ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ ನಾಲ್ಕು ಪ್ರಶಸ್ತಿಗಳು ಬಂದಿದೆ.

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಾಗಿ ಈ ವರ್ಷ ದೇಶದಾದ್ಯಂತ ಹಲವು ಭಾಷೆಗಳ ಸಿನಿಮಾಗಳು ಗುರಿಯಿಟ್ಟಿದ್ದವು. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಕನ್ನಡ ಸಿನಿಮಾಗಳು ಅದರಲ್ಲಿಯೂ ಕನ್ನಡದ ‘ಜನಪ್ರಿಯ’ ಸಿನಿಮಾಗಳು ಉತ್ತಮ ಪ್ರದರ್ಶನ ತೋರಿದ್ದು, ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಕಾಣುವಂತಾಗಿದೆ. ‘ಕಾಂತಾರ’, ‘ಕೆಜಿಎಫ್ 2’ ಸೇರಿದಂತೆ ಇನ್ನೂ ಕೆಲವು ಉತ್ತಮ ಕನ್ನಡ ಸಿನಿಮಾಗಳು ಈ ಬಾರಿ ರಾಷ್ಟ್ರೀಯ ಪ್ರಶಸ್ತಿಗಾಗಿ ವಿವಿಧ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಿದ್ದವು. ರಿಷಬ್ ಶೆಟ್ಟಿಗೆ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರಕಿದೆ. ‘ಕಾಂತಾರ’ದ ಅತ್ಯುತ್ತಮ ನಟನೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ – ಖಾಸಗಿ ಸಂಸ್ಥೆ ಮೂಲಕ ಸರ್ವೆಗೆ ಮುಂದಾದ ಸರ್ಕಾರ

ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಮೌಲ್ಯ ತಂದುಕೊಟ್ಟ ‘ಕೆಜಿಎಫ್ 2’ ಸಿನಿಮಾ ಸಹ ಒಂದು ಪ್ರಶಸ್ತಿಯನ್ನು ಬಾಚಿಕೊಂಡಿದೆ. ಸಿನಿಮಾದ ಆಕ್ಷನ್ ದೃಶ್ಯಗಳ ಗುಣಮಟ್ಟವನ್ನು ಮೆಚ್ಚಿ, ಅತ್ಯುತ್ತಮ ಸ್ಟಂಟ್ ಕೊರಿಯೋಗ್ರಫಿ ಪ್ರಶಸ್ತಿಯನ್ನು ‘ಕೆಜಿಎಫ್ 2’ ಸಿನಿಮಾಕ್ಕೆ ನೀಡಲಾಗಿದೆ. ಮಾತ್ರವಲ್ಲದೆ ‘ಕೆಜಿಎಫ್ 2’ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೂ ಭಾಜನವಾಗಿದೆ. ಎರಡು ಅತ್ಯುತ್ತಮ ಪ್ರಶಸ್ತಿಗಳನ್ನು ಬಾಚಿಕೊಂಡ ‘ಕೆಜಿಎಫ್ 2’ ಹಾಗೂ ‘ಕಾಂತಾರ’ ಸಿನಿಮಾಗಳು ಹೊಂಬಾಳೆಯದ್ದೇ ನಿರ್ಮಾಣದ ಸಿನಿಮಾಗಳು ಎಂಬುದು ಸಹ ವಿಶೇಷ.

‘ಮಧ್ಯಂತರ’ ಹೆಸರಿನ ಕಿರುಚಿತ್ರಕ್ಕೆ ನಾನ್ ಫೀಚರ್ ವಿಭಾಗದಲ್ಲಿ ಅತ್ಯುತ್ತಮ ಎಡಿಟಿಂಗ್ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಘೋಷಿಸಿದ ಜ್ಯೂರಿ, ‘ಮಧ್ಯಂತರ’ ಬಹಳ ಭಿನ್ನವಾದ ಕಿರುಚಿತ್ರ ಮತ್ತು ಆಸಕ್ತಿಕರ ಎಡಿಟಿಂಗ್ ಇದರಲ್ಲಿದೆ ಎಂದು ಬಣ್ಣಿಸಿದರು. ಸುರೇಶ್ ಅರಸ್ ಅವರಿಗೆ ‘ಮಧ್ಯಂತರ’ ಕಿರುಚಿತ್ರದ ಅತ್ಯುತ್ತಮ ಎಡಿಟಿಂಗ್ ಪ್ರಶಸ್ತಿ ದೊರಕಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅತ್ಯುತ್ತಮ ನಟ ಪ್ರಶಸ್ತಿ ಕನ್ನಡಿಗ ರಿಷಬ್ ಶೆಟ್ಟಿಗೆ ದೊರೆತಿದೆ ಜೊತೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಕನ್ನಡಿತಿಗೆ ದೊರೆತಿದೆ. ಕನ್ನಡದ ನಟಿ ನಿತ್ಯಾ ಮೆನನ್ ಅವರಿಗೆ ತಮಿಳಿನ ‘ತಿರುಚಿತ್ರಂಬಳಂ’ ಸಿನಿಮಾಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ನಿತ್ಯಾ ಮೆನನ್ ಮಾತ್ರವೇ ಅಲ್ಲದೆ ಮಾನಸಿ ಪಾರೆಖ್ ಅವರಿಗೂ ಸಹ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಗಿದ್ದು, ಈ ಪ್ರಶಸ್ತಿಯನ್ನು ಅವರ ‘ಕಚ್ ಎಕ್ಸ್​ಪ್ರೆಸ್’ ಸಿನಿಮಾದ ನಟನೆಗಾಗಿ ನೀಡಲಾಗಿದೆ.

ಯಾವ ಯಾವ ಚಿತ್ರಗಳಿಗೆ ಪ್ರಶಸ್ತಿಗಳು ಬಂದಿವೆ, ಇಲ್ಲಿದೆ ಲಿಸ್ಟ್

  • ಬೆಸ್ಟ್ ಫೀಚರ್ ಫಿಲ್ಮ್ – ಆಟ್ಟಮ್
  • ಅತ್ಯುತ್ತಮ ನಟ – ರಿಷಭ ಶೆಟ್ಟಿ
  • ಅತ್ಯುತ್ತಮ ನಟಿಯರು- ನಿತ್ಯಾ ಮೆನನ ಮತ್ತು ಮಾನಸಿ ಪರೇಖ್
  • ಅತ್ಯುತ್ತಮ ನಿರ್ದೇಶಕ- ಸೂರಜ್ ಬರ್ಜಾತ್ಯ
  • ಅತ್ಯುತ್ತಮ ಪೋಷಕ ನಟಿ – ನೀನಾ ಗುಪ್ತಾ
  • ಅತ್ಯುತ್ತಮ ಪೋಷಕ ನಟ
  • ಅತ್ಯುತ್ತಮ ಮನೋರಂಜನಾ ಚಿತ್ರ- ಕಾಂತಾರ
  • ಅತ್ಯುತ್ತಮ ಹೊಸ ಮುಖಗಳು- ಫೌಜಾ, ಪ್ರಮೋದ್ ಕುಮಾರ್
  • ಅತ್ಯುತ್ತಮ ತೆಲಗು ಚಿತ್ರ- ಕಾರ್ತಿಕೇಯ 2
  • ಅತ್ಯುತ್ತಮ ಚಿತ್ರ- ಪೊನ್ನಿಯನ್ ಸೆಲ್ವನ್ ಭಾಗ-1
  • ಅತ್ಯುತ್ತಮ ಪಂಜಾಬಿ ಚಿತ್ರ-ಬಾಘಿ ದಿ ಧೀ
  • ಅತ್ಯುತ್ತಮ ಒಡಿಯಾ ಚಿತ್ರ
  • ಅತ್ಯುತ್ತಮ ಮಲಯಾಳಂ ಚಿತ್ರ- ಸೌದಿ ವೆಲಕ್ಕ ಸಿಸಿ .225/2009
  • ಅತ್ಯುತ್ತಮ ಮರಾಠಿ ಚಿತ್ರ-ವಾಲ್ವಿ
  • ಅತ್ಯುತ್ತಮ ಕನ್ನಡ ಚಿತ್ರ-ಕೆಜಿಎಫ್ ಚಾಪ್ಟರ್ 2
  • ಅತ್ಯುತ್ತಮ ಹಿಂದಿ ಚಿತ್ರ-ಗುಲ್ಮೋಹರ್
  • ವಿಶೇಷ ಉಲ್ಲೇಖ- ಗುಲ್ಮೋಹರ್ ಚಿತ್ರಕ್ಕಾಗಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್ ಚಿತ್ರಕ್ಕಾಗಿ ಸಂಜಯ್ ಸಲೀಲ್ ಜೌಧರಿ
  • ಅತ್ಯುತ್ತಮ ಆ್ಯಕ್ಷನ್ ನಿರ್ದೇಶಕ- ಕೆಜಿಎಫ್-2
  • ಅತ್ಯುತ್ತಮ ನೃತ್ಯ ನಿರ್ದೇಶನ- ತಿರುಚಿತ್ರಬಲಮ್
  • ಅತ್ಯುತ್ತಮ ಸಾಹಿತ್ಯ – ಪೌಜಾ
  • ಅತ್ಯುತ್ತಮ ಸಂಗೀತ ನಿರ್ದೇಶಕ- ಪ್ರೀತಮ್ (ಹಾಡು) ಎ.ಆರ್.ರೆಹಮಾನ್ (ಹಿನ್ನೆಲೆ ಸ್ಕೋರ್)
  • ಅತ್ಯುತ್ತಮ ಪ್ರಸಾದನ: ಅಪರಾಜಿತೋ
  • ಅತ್ಯುತ್ತಮ ವಸ್ತ್ರ ವಿನ್ಯಾಸ- ಕಚ್ ಎಕ್ಸ್‌ಪ್ರೆಸ್
  • ಅತ್ಯುತ್ತಮ ಪ್ರೊಡಕ್ಷನ್ ವಿನ್ಯಾಸ -ಅಪರಾಜಿತೋ
  • ಅತ್ಯುತ್ತಮ ಸಂಕಲನ- ಸುರೇಶ್ ಅರಸ್, ಮಧ್ಯಂತರ
  • ಅತ್ಯುತ್ತಮ ಧ್ವನಿ ಸಂಯೋಜನ್-ಪೊನ್ನಿಯಿನ್ ಸೆಲ್ವನ್-1
  • ಅತ್ಯುತ್ತಮ ಸಂಕಲನ-ಆಟ್ಟಮ್
  • ಅತ್ಯುತ್ತಮ ಸಂಭಾಷಮೆ-ಗುಲ್ಮೋಹರ್
  • ಬೆಸ್ಟ್ ಛಾಯಾಗ್ರಹಣ-ಪೊನ್ನಿಯಿನ್ ಸೆಲ್ವನ್-1
  • ಅತ್ಯುತ್ತಮ ಹಿನ್ನೆಲೆ ಗಾಯಕ ಸೌದಿ ವೆಲಕ್ಕ ಸಿಸಿ 225/2009
  • ಅತ್ಯುತ್ತಮ ಹಿನ್ನೆಲೆ ಗಾಯಕಿ- ಬ್ರಹ್ಮಾಸ್ತ್ರ-ಶ್ರೇಯಾ ಗೋಷಾಲ್

Shwetha M