ಆಸ್ಟ್ರೇಲಿಯಾದ ಸಂಸತ್ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕನ್ನಡದ ಕುವರಿ
ಕೊಡಗು: ಇತ್ತೀಚಿನ ದಿನಗಳಲ್ಲಿ ಭಾರತೀಯರು ಜಗತ್ತಿನ ಎಲ್ಲಾ ಕಡೆ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಇದೀಗ ಕನ್ನಡ ಕುವರಿಯೊಬ್ಬರು ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.
ಇದನ್ನೂ ಓದಿ: ಮತದಾನದ ಬೆನ್ನಲ್ಲೇ ಸಿಂಗಾಪುರಕ್ಕೆ ಹಾರಿದ ಕುಮಾರಣ್ಣ – ಕಾರಣವೇನು ಗೊತ್ತಾ?
ಕೊಡಗು ಮೂಲದ ಚರಿಷ್ಮಾ ಎಂಬುವವರು ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಸದಸ್ಯೆಯಾಗಿ ಆಯ್ಕೆಗೊಂಡಿದ್ದಾರೆ. ಗುರುವಾರ ಸದಸ್ಯರಾಗಿ ಚರಿಷ್ಮಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾದ ರಾಜಕೀಯದಲ್ಲಿ ಚರಿಷ್ಮಾ ಮಾದಪ್ಪ ಗುರುತಿಸಿಕೊಂಡಿದ್ದಾರೆ.
ಚರಿಷ್ಮಾ ಅವರು ಪ್ರಮಾಣ ವಷನ ಸ್ವೀಕಾರದ ವೇಳೆ ಭಾರತೀಯ ಉಡುಗೆಯ ಮೂಲಕ ಮಿಂಚಿದ್ದಾರೆ. ಅವರು ಕೊಡವ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು. ಚರಿಷ್ಮಾ ಸ್ನೇಹಿತರು ಹಾಗೂ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.