ಅನುಕೂಲ್ ಜೊತೆ ವೈಷ್ಣವಿ ಗೌಡ ಜಾಲಿ ಜಾಲಿ! – ಮನಾಲಿಯಲ್ಲಿ ಸೀತಾ ಮಸ್ತ್ ಪೋಸ್!

ಕಿರುತೆರೆ ನಟಿ ವೈಷ್ಣವಿ ಗೌಡ ಇತ್ತೀಚೆಗಷ್ಟೇ ಅನುಕೂಲ್ ಮಿಶ್ರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಇದೀಗ ನಟಿ ವೈಷ್ಣವಿ ಅನುಕೂಲ್ ಜೊತೆ ಹನಿಮೂನ್ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಮೊದಲ ಆಷಾಢ ಶುಕ್ರವಾರ ಸಂಭ್ರಮ – ಸರ್ಕಾರಿ ಬಸ್ಸುಗಳಲ್ಲಿ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ!
ನಟಿ ವೈಷ್ಣವಿ ಗೌಡ ಜೂನ್ 4ರಂದು ಛತ್ತೀಸ್‌ಘಡ್ ಮೂಲದ ಅನುಕೂಲ್ ಮಿಶ್ರಾ ಜೊತೆಗೆ ಅದ್ಧೂರಿಯಾಗಿ ಮದುವೆಯಾಗಿದ್ದರು. ಸದ್ಯ ಪತಿ ಜೊತೆಗೆ ಅಮೂಲ್ಯವಾದ ಸಮಯ ಕಳೆಯುತ್ತಿದ್ದಾರೆ. ವೈಷ್ಣವಿ ಹಾಗೂ ಅನುಕೂಲ್ ಮಿಶ್ರಾ ಸದ್ಯ ಉತ್ತರ ಭಾರತದ ಪ್ರವಾಸದಲ್ಲಿದ್ದಾರೆ. ಇದ್ರ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ.
ಮೊನ್ನೆಯಷ್ಟೇ ರಿಷಿಕೇಶ್‌ಗೆ ಭೇಟಿ ಕೊಟ್ಟು ಅತೀ ಎತ್ತರದ ಪ್ರದೇಶದಿಂದ ವೈಷ್ಣವಿ ಬಂಗೀ ಜಂಪ್ ಮಾಡಿದ್ದರು. ಇದೀಗ ವೈಷ್ಣವಿ ಅವರನ್ನ ಪತಿ ಅನುಕೂಲ್ ಮಿಶ್ರಾ ಮನಾಲಿಗೆ ಕರೆದುಕೊಂಡು ಹೋಗಿದ್ದಾರೆ. ಮನಾಲಿಯಲ್ಲಿ ತಾವು ಕ್ಲಿಕ್ಕಿಸಿಕೊಂಡ ಸಖತ್ ಬ್ಯೂಟಿಫುಲ್ ಆಗಿರೋ ಫೋಟೋಗಳನ್ನ ನಟಿ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಸ್ನಲ್ಲಿ ನಟಿ ವೈಷ್ಣವಿ ಗೌಡ ಸಖತ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ನೋಡಿರಿ

