ಹಿರಿಯ ನಟ ಉಮೇಶ್ ಲಿವರ್‌ ಕ್ಯಾನ್ಸರ್?- ಪರೀಕ್ಷೆ ವೇಳೆ ವೈದ್ಯರಿಗೆ ಗೊತ್ತಾಯ್ತು ಶಾಕಿಂಗ್ ವಿಚಾರ

ಹಿರಿಯ ನಟ ಉಮೇಶ್ ಲಿವರ್‌ ಕ್ಯಾನ್ಸರ್?- ಪರೀಕ್ಷೆ ವೇಳೆ ವೈದ್ಯರಿಗೆ ಗೊತ್ತಾಯ್ತು ಶಾಕಿಂಗ್ ವಿಚಾರ

ಸ್ಯಾಂಡಲ್‌ವುಡ್‌ನ ಹಿರಿಯನಟ ಉಮೇಶ್‌ ಅವರು ಶುಕ್ರವಾರ ಬಾತ್‌ರೂಮ್‌ನಲ್ಲಿ ಬಿದ್ದು ಗಾಯಗೊಂಡಿದ್ರು. ಹೀಗಾಗಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೀಗ ವೈದ್ಯಕೀಯ ತಪಾಸನೆ ವೇಳೆ ಶಾಕಿಂಗ್‌ ವಿಚಾರವೊಂದು ಗೊತ್ತಾಗಿದೆ. ಉಮೇಶ್‌ ಅವರಿಗೆ ಲಿವರ್‌ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಪ್ರಿಯತಮನ ಜೊತೆ ಮಗಳು ಪರಾರಿ – ಊರಿಗೆ ತಿಥಿ ಊಟ ಹಾಕಿಸಿದ ತಂದೆ

ಹಾಸ್ಯ ನಟ ಉಮೇಶ್‌ ಗೆ 80 ವರ್ಷ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಉಮೇಶ್‌ ಅವರು ಬಿದ್ದು ಕಾಲಿಗೆ ಗಂಭೀರ ಗಾಯವಾಗಿತ್ತು. ಹೀಗಾಗಿ ಇಂದು ಕಾಲಿಗೆ ಸರ್ಜರಿ ಮಾಡುವ ಪ್ಲ್ಯಾನ್‌ ಇತ್ತು. ಹೀಗಾಗಿ ಕೆಲ ಪರೀಕ್ಷೆಗಳನ್ನ ಮಾಡಲಾಗಿತ್ತು. ಈ ವೇಳೆ ಲಿವರ್​ನಲ್ಲಿ ಹಾನಿ ಉಂಟುಮಾಡುವ ಗಡ್ಡೆ ಇರುವ ವಿಚಾರ ಗೊತ್ತಾಗಿದೆ. ಸದ್ಯ ವೈದ್ಯರ ಪರೀಕ್ಷೆ ಪ್ರಕಾರ ಲಿವರ್​ನಲ್ಲಿ ಕ್ಯಾನ್ಸರ್ ಉಂಟಾಗಿದ್ದು, ಅದು ಬೇರೆ ಅಂಗಗಳಿಗೆ ಸ್ಪ್ರೆಡ್ ಆಗಿದೆ. ‘ಉಮೇಶ್ ಅವರು ನೋಡಲು ಆರೋಗ್ಯವಾಗಿಯೇ ಕಾಣಿಸಿದ್ದಾರೆ. ಆದರೆ, ಕ್ಯಾನ್ಸರ್ ಇದೆ. ಇದನ್ನು ಖಚಿತಪಡಿಸಲು ಕೆಲವು ಟೆಸ್ಟ್ ಮಾಡಬೇಕಿದೆ. ಲಿವರ್ ಒಳಗೆ ಇರೋ ಗಡ್ಡೆಯನ್ನು ತೆಗೆದು ಪರೀಕ್ಷೆಗೆ ಕಳುಹಿಸಬೇಕಿದೆ ಎಂದು ವೈದ್ಯರು ಉಮೇಶ್‌ ಅವರ ಕುಟುಂಬದವರ ಬಳಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಟೆಸ್ಟ್‌ ರಿಪೋರ್ಟ್‌ ಬಂದ ಕೂಡಲೇ ಕಿಮೋಥೆರಪಿ‌‌, ಇಮಿನೋಥೆರಪಿ ಮಾಡಬೇಕಾಗಿದೆ. ಕ್ಯಾನ್ಸರ್ ಸ್ಪೆಶಲಿಸ್ಟ್ ಬಂದಿದ್ದಾರೆ. ಇಂಜೆಕ್ಷನ್ ಅಲ್ಲಿ ಗಡ್ಡೆ ಕರಗಿಸೋ ಪ್ರಯತ್ನ ನಡೆಯುತ್ತಿದೆ. ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ. ರಿಕವರಿ ಆಗುವ ಚಾನ್ಸ್ ಇದೆ ಎಂದು ವೈದ್ಯರು ಹೇಳಿದ್ದಾರೆ.

ಸದ್ಯ ವೈದ್ಯರು ಪ್ರಾಥಮಿಕ ಆರೋಗ್ಯ ತಪಾಸಣೆಯಿಂದ ಬಂದ ಮಾಹಿತಿಗಳನ್ನು ಇಟ್ಟುಕೊಂಡು ಉಮೇಶ್​ಗೆ ಕ್ಯಾನ್ಸರ್ ಇದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಸಂಪೂರ್ಣ ಪರೀಕ್ಷೆ ಬಳಿಕ ಅಸಲಿ ವಿಚಾರ ಏನು ಎಂಬ ವಿಚಾರ ರಿವೀಲ್ ಆಗಲಿದೆ.

Shwetha M