ದಸರಾ ಆನೆ ಅರ್ಜುನನ ಸ್ಮಾರಕ ಕಟ್ಟಿಸ್ತಾರಾ ದರ್ಶನ್? – ಒಂದು ಹೆಜ್ಜೆ ಮುಂದೆ ಇಟ್ಟ ಚಾಲೆಂಜಿಂಗ್ ಸ್ಟಾರ್
ಹಾಸನದ ಅರಣ್ಯದಲ್ಲಿ ಕಾಡಾನೆ ಸೆರೆ ಹಿಡಿದು, ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಮೃತಪಟ್ಟಿದ್ದ. 2023ರ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಈ ಘಟನೆ ಜನರನ್ನ ತೀವ್ರ ನೋವಿಗೆ ತಳ್ಳಿತ್ತು. ಅರ್ಜುನ ಆನೆ ಸಾವು ಕನ್ನಡಿಗರನ್ನು ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿತ್ತು. ಅದರಲ್ಲೂ, 8 ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಬಗ್ಗೆ ಕನ್ನಡಿಗರು ಪ್ರೀತಿಯನ್ನು ಹೊಂದಿದ್ದರು. ನಟ ದರ್ಶನ್ ಕೂಡ ಅರ್ಜುನನ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ. ಇತ್ತೀಚೆಗಷ್ಟೇ ಅರ್ಜುನನ ಸಮಾಧಿ ಬೇಗನೇ ನಿರ್ಮಿಸಿ ಎಂದು ಸರ್ಕಾರದ ಬಳಿ ದರ್ಶನ್ ಮನವಿ ಮಾಡಿದ್ದರು. ಆದರೆ ಅದಕ್ಕೆ ಯಾವುದೇ ರೆಸ್ಪಾನ್ಸ್ ಬಂದ ಹಾಗೆ ಕಾಣ್ತಿಲ್ಲ. ಅದರ ಮಧ್ಯೆ ಇದೀಗ ಒಂದು ಸುದ್ದಿ ಬಂದಿದೆ. ಈ ಸುದ್ದಿಯನ್ನ ದರ್ಶನ್ ಫ್ಯಾನ್ಸ್ ಕೊಟ್ಟಿದ್ದಾರೆ. ಟ್ವಿಟರ್ ಮೂಲಕ, ಫೋಟೋ ಸಮೇತ ಒಂದು ವಿಷಯ ಹಂಚಿಕೊಂಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಒಂದಿಷ್ಟು ಆಕ್ರೋಶ ಕೂಡ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರಾಸಲೀಲೆಗೆ JDSನಲ್ಲಿ ಬಿರುಗಾಳಿ – 13 ದಳ ಶಾಸಕರು ಕಾಂಗ್ರೆಸ್ ಸೇರ್ಪಡೆ?
ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದ ಅರ್ಜುನ ಆನೆಯ ಸಮಾಧಿ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆಯಲ್ಲಿ ಇದೆ. ಆನೆ ಮೃತಪಟ್ಟು ಇಷ್ಟು ಸಮಯವಾದ್ರೂ ಕೂಡ ಅರ್ಜುನನ ಸಮಾಧಿಗೆ ಸೂಕ್ತ ವ್ಯವಸ್ಥೆ ಮಾಡೇ ಇಲ್ಲ. ಸುಮ್ನೆ ಮಣ್ಣು ಮಾಡಿದ್ದ ಜಾಗಲ್ಲಿ ಸುತ್ತಲು ತಂತಿ ಬೇಲೆ ಹಾಕಲಾಗಿತ್ತು. ಆದರೆ ಕಾಡಾನೆಗಳು ಅದನ್ನೂ ನಾಶ ಮಾಡಿದ್ದವು. ಇದೆಲ್ಲವನ್ನೂ ಗಮನಿಸಿದ್ದ ದರ್ಶನ್, ಟ್ವಿಟರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಇತ್ತೀಚಿಗೆ ದರ್ಶನ್ ಈ ಒಂದು ಜಾಗಕ್ಕೆ ಭೇಟಿ ಕೊಟ್ಟಿದ್ದರು. ಇಲ್ಲಿಯ ಸ್ಥಿತಿಯನ್ನ ಕಂಡು ಮರುಗಿದ್ರು. ಸರ್ಕಾರಕ್ಕೆ ಒಂದು ಮನವಿ ಕೂಡ ಮಾಡಿ ದರ್ಶನ್ ಸುಮ್ಮನೆ ಕುಳಿತಿಲ್ಲ. ಈಗ ದರ್ಶನ್ ಸದ್ದೇ ಇಲ್ಲದೆ ತಮ್ಮ ಕೆಲಸ ಮಾಡುತ್ತಿದ್ದಾರೆ. ಅರ್ಜುನನ ಸಮಾಧಿಗೆ ಸ್ಮಾರಕ ಕಟ್ಟಲು ಏನು ಬೇಕೋ ಆ ವ್ಯವಸ್ಥೆಯನ್ನ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ದರ್ಶನ್ ಅಭಿಮಾನಿ ಒಬ್ಬರು ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರು ದರ್ಶನ್ ಅಭಿಮಾನಿ, ಅರ್ಜುನನ ಸಮಾಧಿಯ ಸ್ಮಾರಕಕ್ಕೆ ಬೇಕಿರೋ ಕಲ್ಲುಗಳನ್ನ ದರ್ಶನ್ ಈಗಾಗಲೇ ಕಳಿಸಿಕೊಟ್ಟಿದ್ದಾರೆ. ಅರ್ಜುನನ ಸಮಾಧಿಗೆ ಸ್ಮಾರಕ ನಿರ್ಮಿಸೋ ಕೆಲಸ ಶುರು ಆದಂತಿದೆ. ಇನ್ನೇನು ಕೆಲವೇ ದಿನಗಳಲ್ಲಿ ದರ್ಶನ್ ಇಲ್ಲಿ ಭೇಟಿ ಕೂಡ ಕೊಡಲಿದ್ದಾರೆ ಎಂದು ಅಭಿಮಾನಿ ಬರೆದುಕೊಂಡಿದ್ದಾರೆ.