ವರ್ಕ್ ಆಯ್ತು ‘ಡೆವಿಲ್’ ಪ್ಲ್ಯಾನ್.. ಬೆನ್ನು ನೋವು ಮಾಯ.. ಜಾಲಿ ಜಾಲಿ.. – ಸುಪ್ರೀಂನಲ್ಲಿ ಪಿಕ್ಚರ್ ಅಭೀ ಬಾಕಿ ಹೈ
ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ದರ್ಶನ್‌ಗೆ ಬಳ್ಳಾರಿ ಜೈಲಿಗೆ ಹೋದ ಮೇಲೆ ಬೆನ್ನು ನೋವು ಶುರುವಾಗಿತ್ತು. ದರ್ಶನ್‌ಗೆ ಆಪರೇಷನ್ ಮಾಡಿಸಿಲ್ಲ ಅಂದ್ರೆ ಅವರ ಜೀವನ ತುಂಬಾ ಕಷ್ಟ ಆಗುತ್ತೆ. ಸ್ಟ್ರೋಕ್ ಆಗುತ್ತೆ?, ಕೆರಿಯರ್ ಹಾಳಾಗಿ ಹೋಗುತ್ತೆ.. ಹಾಗೇ ಹೀಗೇ ಅಂತಾ ಸಾಕಷ್ಟು ಕಾರಣಗಳನ್ನ ನೀಡಿ ಮೆಡಿಕಲ್ ಬೇಲ್ ಪಡೆದಿದ್ರು.. ಆದ್ರೆ ದರ್ಶನ್‌ಗೆ ಈಗ ಪೂರ್ಣ ಪ್ರಮಾಣದ ಬೇಲ್ ಹೈಕೋರ್ಟ್ ನೀಡಿದೆ. ಬೇಲ್ ಸಿಗೋ ಮುಂಚೆ ಆಪರೇಷನ್ ಮಾಡೋಕೆ ಬಿಪಿ ಕಾರಣ ಹೇಳುತ್ತಿದ್ದವರ ವರಸೆ ಈಗ ಬದಲಾಗಿದೆ. ದರ್ಶನ್ ಆಪರೇಷನ್ ಮಾಡಿಸೋದು ಡೌಟ್ ಆಗಿದೆ .. ಹಾಗಿದ್ರೆ ದರ್ಶನ್ ಮುಂದಿನ ಪ್ಲ್ಯಾನ್ ಏನು? ಆಪರೇಷನ್ ಮಾಡಿಸಿದ್ರೆ ಏನಾಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರಜತ್ ತಪ್ಪು.. ಧನರಾಜ್‌ಗೆ ಶಿಕ್ಷೆ! – ದೊಡ್ಮನೆ ಜಗಳಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್!
ರೇಣುಕಾಸ್ವಾಮಿ ಕೇಸ್‌ನಲ್ಲಿ ಅಂದರ್ ಆಗಿರೋ ದರ್ಶನ್‌ಗೆ ಈಗ ರೆಗ್ಯೂಲರ್ ಬೇಲ್ ಸಿಕ್ಕಿದೆ. ಆದ್ರೆ ಈ ಬೇಲ್ ಸಿಗುತ್ತಿದ್ದಂತೆ ದರ್ಶನ್‌ಗೆ ಬೆನ್ನು ನೋವು ಮಾಯವಾಯ್ತಾ ಅನ್ನೋ ಪ್ರಶ್ನೆಗಳು ಎದ್ದಿವೆ.. ಯಾಕಂದ್ರೆ ದರ್ಶನ್ ಈ ಹಿಂದೆ ಮೆಡಿಕಲ್ ಬೇಲ್ ಪಡೆದಿದ್ದು, ಬೆನ್ನು ನೋವಿನ ಆಪರೇಷನ್‌ಗಾಗಿ. ಬೆನ್ನಿನ ಮೂಳೆ ಸರಿದಿದೆ. ಅವರಿಗೆ ವಿಪರಿತ ಬೆನ್ನು ನೋವು ಇದೆ. ಆಪರೇಷನ್ ಮಾಡಿಸಿಲ್ಲ ಅಂದ್ರೆ ಜೀವಕ್ಕೆ ತೊಂದ್ರೆ ಇದೆ. ಲಕ್ವ ಹೊಡೆಯುತ್ತೆ ಅಂತಾ ಹೇಳಲಾಗಿತ್ತು. ಆದ್ರೆ ಮೆಡಿಕಲ್ ಬೇಲ್ ಸಿಕ್ಕಿ 1 ತಿಂಗಳು ಕಳೆದ್ರು ಆಪರೇಷನ್ ಮಾಡಿಸಿರಲಿಲ್ಲ.. ಬಿಪಿ ಕಂಟ್ರೋಲ್‌ಗೆ ಬರುತ್ತಿದ್ದಂತೆ ಆಪರೇಷನ್ ಮಾಡಲಾಗುತ್ತೆ ಅಂತಾ ಹೇಳಲಾಗಿತ್ತು.. ಆದ್ರೆ ಈಗ ಆಪರೇಷನ್ ಮಾಡಿಸೋದೇ ಡೌಟ್ ಎನ್ನಲಾಗುತ್ತಿದೆ..
ಸರ್ಜರಿ ಬದಲು ಫಿಸಿಯೋಥೆರಸಿಯಷ್ಟೇ?
ಹೌದು.. ಇಷ್ಟು ದಿನ ಆಪರೇಷನ್ ಅಂತ ಹೇಳುತ್ತಿದ್ದವರು ಈಗ ಆಪರೇಷನ್ ಬೇಡ್ವೇ ಬೇಡ ಅಂತಿದ್ದಾರೆ. ಆಪರೇಷನ್ ಬದಲು ಫಿಸಿಯೋಥೆರಸಿಯಷ್ಟೇ ಸಾಕು ಎನ್ನುತ್ತಿದ್ದಾರಂತೆ..ಹಾಗೇ ದರ್ಶನ್ 2-3 ಅಥವಾ ಒಂದು ವಾರದೊಳಗೆ ಆಸ್ಪತ್ರೆಯಿಂದ ಮನೆೆಗೆ ಹೋಗಲಿದ್ದಾರೆ. ಒಂದಿಷ್ಟು ದಿನ ಮನೆಯಲ್ಲೇ ರೆಸ್ಟ್ ಮಾಡೋ ದಾಸ, ನಂತ್ರ ಹಳೇ ಖದರ್‌ನಲ್ಲೇ ಅಖಾಡಕ್ಕೆ ಇಳಿಯಲಿದ್ದಾರಂತೆ.. ಹೀಗಾಗಿ ಆದಷ್ಟು ಬೇಗ ಡಿಸ್ಟಾರ್ಜ್ ಮಾಡಿ ಅಂತಾ ಡಾಕ್ಟರ್ಸ್ ಹತ್ರ ಡಿ ಬಾಸ್ ರಿಕ್ವೇಸ್ಟ್ ಮಾಡಿದ್ದಾಂತೆ. ಮನೆಯಲ್ಲೇ ಸ್ಪಲ್ಪ ದಿನ ರೆಸ್ಟ್ ಮಾಡಿ ನಂತ್ರ ಸಿನಿಮಾ ಶೂಟಿಂಗ್‌ಗೆ ದಾಸ ಹೊರಡಲಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಬೆನ್ನು ನೋವಿಗೆ ಫಿಸಿಯೋಥೆರಪಿ ನೀಡಿ ಗುಣ ಮುಖ ಮಾಡುವ ಪ್ರಯತ್ನ ಮಾಡಬಹುದು. ಆಪರೇಷನ್ ಮಾಡದೇ ವ್ಯಾಯಾಮಗಳನ್ನು ಮಾಡಿಸಿ ಬೆನ್ನು ನೋವನ್ನ ಗುಣಮುಖ ಮಾಡುವ ಪ್ರಯತ್ನ ನಡೆಬಹುದು. ಈ ನಡುವೆ ಬೇಲ್‌ಗಾಗಿ ಬೆನ್ನು ನೋವುನ್ನ ದೊಡ್ಡಾದಾಗಿ ಬಿಂಬಿಸಲಾಗಿತ್ತು ಅನ್ನೋ ಮಾತು ಕೂಡ ಕೇಳಿ ಬಂದಿತ್ತು.
ದರ್ಶನ್ ಬೇಲ್‌ಗೆ ಸುಪ್ರೀಂನಲ್ಲಿ ಕೊಕ್ಕೆ ಹಾಕುತ್ತಾ ಖಾಕಿ?
ಇನ್ನು ದರ್ಶನ್ & ಗ್ಯಾಂಗ್‌ಗೆ ಹೈಕೋರ್ಟ್‌ನಲ್ಲಿ ಬೇಲ್ ಸಿಕ್ಕಿದೆ. ಇದು ಪೊಲೀಸರಿಗೆ ಮುಜುಗರ ತಂದಿದೆ.. ಹೀಗಾಗಿ ಪೊಲೀಸರು ಬೇಲ್ ಕ್ಯಾನ್ಸಲ್ ಮಾಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದಾರಂತೆ. ಹೀಗಾಗಿ ಸುಪ್ರೀಂನಲ್ಲಿ ಬೇಲ್ ಕ್ಯಾನ್ಸಲ್ ಆಗುವ ಭಯ ದರ್ಶನ್‌ಗೆ ಎಲ್ಲೋ ಒಂದು ಕಡೆ ಕಾಡುತ್ತಿದೆ.
ಜಾಮೀನು ಮೊದಲ ನಿಯಮ. ಆರೋಪಿಗಳಿಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಆರೋಪಿಗಳು 6 ತಿಂಗಳಿನಿಂದ ಜೈಲಿನಲ್ಲಿ ಇದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಬಂಧನ ಮಾಡುವಾಗ ನಿಯಮಗಳ ಪಾಲನೆ ಆಗಿಲ್ಲ. ಬಂಧನ ವೇಳೆ ಆರೋಪಿಗೆ ಬಂಧನದ ಕಾರಣ ನೀಡಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಆದೇಶವಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಗ್ರೌಂಡ್ಸ್ ಆಫ್ ಅರೆಸ್ಟ್ ಪಾಲಿಸಿಲ್ಲ. ಆರೋಪಿಗಳ ನಿರ್ದಿಷ್ಟ ಪಾತ್ರದ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲೂ ವ್ಯತ್ಯಾಸ ಕಂಡು ಬಂದಿದೆ. ತಡವಾಗಿ ಹೇಳಿಕೆ ಪಡೆದಿದ್ದಾರೆಂದು ಅಭಿಪ್ರಾಯಪಟ್ಟು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಒಟ್ನಲ್ಲಿ ಬೇಲ್ ಸಿಕ್ಕಿದ್ದು ದರ್ಶನ್‌ಗೆ ಎಷ್ಟು ಖುಷಿ ಆಗಿದ್ಯೋ ಗೊತ್ತಿಲ್ಲ. ಆದ್ರೆ ಅವರನ್ನ ನಂಬಿ ಸಿನಿಮಾ ಮಾಡ್ತಾ ಇರೋರಿಗೆ, ಫ್ಯಾನ್ಸ್‌ಗೆ ಭಾರಿ ಖುಷಿಯಾಗಿದಂತು ಸತ್ಯ.. ಆದ್ರೆ ರೇಣುಕಾಸ್ವಾಮಿ ಕುಟುಂಬಕ್ಕೆ ನೋವು ಬಿಟ್ಟು ಬೇರೆ ಏನು ಉಳಿದಿಲ್ಲ.