ಆಹಾರ ಸಿಗದೆ ನಾಡಿನತ್ತ ಕಾಂಗರೂಗಳು – ಕಂಡಲ್ಲಿ ಕೊಲ್ಲುವಂತೆ ಸರ್ಕಾರಕ್ಕೆ ಮನವಿ!

ಆಸ್ಟೇಲಿಯಾ ಪ್ರಮುಖ ಆಕರ್ಷಣೆ ಎಂದರೆ ಆ ಪ್ರದೇಶಗಳಲ್ಲಿ ಜೀವಿಸುವ ಕಾಂಗರೂಗಳು. ಹೀಗಾಗಿಯೇ ಈ ದೇಶದ ಹೆಸರು ಹೇಳುತ್ತಿದ್ದಂತೆಯೇ ಕಾಂಗರೂ ನೆನಪಾಗುತ್ತವೆ. ಇದು ಆ ಪ್ರದೇಶದಲ್ಲಿ ಸಂರಕ್ಷಿತ ಪ್ರಾಣಿ ಸಂತತಿಯೂ ಹೌದು. ಆದರೆ ಈಗ ಈ ಮುಗ್ಧ ಜೀವಿಗಳ ಕಂಟಕಕ್ಕೆ ಎದುರಾಗಿದೆ.
ಇದನ್ನೂ ಓದಿ:ಆಹಾ.. ನೀರಲ್ಲಿ ಆಡುವುದು ಮಜಾವೋ ಮಜಾ – ಬಿಸಿಲ ಬೇಗೆ ನಡುವೆ ತೊರೆಯಲ್ಲಿ ಗಜಪಡೆಯ ಮೋಜಿನಾಟ
ಹೌದು, ಆಸ್ಟ್ರೇಲಿಯಾ ಎಂದಾಗಲೇ ನೆನಪಾಗುವುದು ಕಾಂಗರೂಗಳು. ಆದರೆ ಇದೀಗ ಕಾಂಗರೂಗಳನ್ನು ಗುಂಡಿಟ್ಟು ಕೊಲ್ಲುವಂತೆ ಕರೆ ನೀಡಲಾಗಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ದಿನದಿಂದ ದಿನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಕಾಂಗರೂಗಳು ಜನಿಸುತ್ತಿವೆ. ಹೀಗಾಗಿ ಅಲ್ಲಿ ಆಹಾರ ಲಭ್ಯತೆಯ ಕೊರತೆ ಉಂಟಾಗಿದೆ. ಸೊಂಪಾದ ಮೇವು ಸಿಗದೇ ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಅವುಗಳು ಹಸಿವು ನೀಗಿಸಲು ಪೇಪರ್ ಗಳನ್ನು ತಿನ್ನುತ್ತಿವೆ. ಹೀಗಾಗಿ ಜೀವವಿಜ್ಞಾನಿ ಕ್ಯಾಥರಿನ್ ಎಂಬವರು ಕಾಂಗರೂಗಳು ಹಸಿವಿನಿಂದ ಸಾಯುವ ಹಂತ ತಲುಪುವ ಮುನ್ನ ಅವುಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅವುಗಳನ್ನು ಗುಂಡಿಟ್ಟು ಕೊಲ್ಲುವುದು ಉತ್ತಮವೆಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.

ನೋಡಿರಿ

