ಕಂಗನಾಗೆ ಕಪಾಳಕ್ಕೆ‌ಹೊಡೆದಿದ್ದು‌ ಇಷ್ಟಕ್ಕಾ? – ಎಮರ್ಜೆನ್ಸಿ ‌ಸಿನಿಮಾ‌ ಕೈಬಿಡ್ತಾರಾ?
ರಾಜಕೀಯ ರಾಣಿಯಾಗ್ತಾರಾ ಬಾಲಿವುಡ್‌ ಕ್ವೀನ್ ?

ಕಂಗನಾಗೆ ಕಪಾಳಕ್ಕೆ‌ಹೊಡೆದಿದ್ದು‌ ಇಷ್ಟಕ್ಕಾ? – ಎಮರ್ಜೆನ್ಸಿ ‌ಸಿನಿಮಾ‌ ಕೈಬಿಡ್ತಾರಾ?ರಾಜಕೀಯ ರಾಣಿಯಾಗ್ತಾರಾ ಬಾಲಿವುಡ್‌ ಕ್ವೀನ್ ?

ಬಾಲಿವುಡ್ ನಟಿ ಕಂಗನಾ ರಣಾವತ್.. ಎಲೆಕ್ಷನ್ ಗೆ ನಿಂತಿದ್ದು ಆಯ್ತು.. ಕಾಂಗ್ರೆಸ್ ನ ಭದ್ರಕೋಟೆ ಮಂಡಿ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದು ಆಯ್ತು.. ಹೀಗೆ ಮೋದಿ ನೇತೃತ್ವದ ಬಿಜೆಪಿಯಲ್ಲಿ  ಲೋಕಸಭೆಯಲ್ಲಿ ಸಂಸದೆಯಾಗಿ‌ ನಿರ್ವಹಿಸುವ ಅವಕಾಶ ಸಿಕ್ಕಿದೆ… ಎಲೆಕ್ಷನ್ ನಲ್ಲಿ ಗೆದ್ರೆ ಸಿನಿಮಾ ರಂಗ ತೊರೆಯೊದಾಗಿ ಹೇಳಿದ್ರು.. ಈಗ ಕಂಗನಾ ಗೆದ್ದಾಗಿದೆ.. ಇದೀಗ  ಚಿತ್ರರಂಗ ತೊರೆಯುತ್ತಾರೋ, ಇಲ್ಲವೋ ಎನ್ನುವ ಪ್ರಶ್ನೆ ಮೂಡಿದೆ. ಈ ಮಧ್ಯೆ ಅವರು ನಟಿಸಿ, ನಿರ್ದೇಶಿಸಿದ ‘ಎಮರ್ಜೆನ್ಸಿ’ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ಕಂಗನಾ ಈ ಸಿನಿಮಾದಲ್ಲಿ ಮುಂದುವರಿತಾರಾ? ಇಲ್ಲ.. ಅರ್ಧಕ್ಕೆ ಕೈ ಬಿಡ್ತಾರಾ? ಅದ್ರ ಬೆನ್ನಲ್ಲೇ ಕಂಗನಾಗೆ ಏರ್ಪೋರ್ಟ್ ನಲ್ಲಿ CISF ಸಿಬ್ಬಂದಿ  ಕಪಾಳ ಮೋಕ್ಷ ಮಾಡಿದ್ದಾರೆ.. ಅಷ್ಟಕ್ಕೂ ಆ ಅಧಿಕಾರಿ ಕಪಾಳಮೋಕ್ಷ ಮಾಡಿದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪ್ರೀತಿಯ ಹುಡುಕಾಟದಲ್ಲಿ ಮೂಗುತಿ ಸುಂದರಿ – ಸಾನಿಯಾ ಮಿರ್ಜಾ ಮತ್ತೆ LOVE ಲೈಫ್  

ಬಾಲಿವುಡ್ ಕ್ವೀನ್ ಕಂಗನಾ ಈಗ ಚುನಾವಣೆಯಲ್ಲಿ ಗೆದ್ದು ರಾಜಕೀಯ ಕ್ವೀನ್ ಕೂಡ ಆಗಿದ್ದಾರೆ.. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಸದೆ ಪಟ್ಟವನ್ನು ಅಲಂಕರಿಸಿದ್ದಾರೆ.. ಎಲೆಕ್ಷನ್ ಗೆದ್ದ ಬೆನ್ನಲ್ಲೇ ಕಂಗನಾ ಬಾಲಿವುಡ್ ಬಿಡ್ತಾರಾ ಅನ್ನೋ ಪ್ರಶ್ನೆ ಅವ್ರ ಅಭಿಮಾನಿಗಳಲ್ಲಿ ಕಾಡ್ತಾ ಇದೆ.  ಚುನಾವಣೆ ಫಲಿತಾಂಶಕ್ಕಿಂತ ಮೊದಲು ಗೆದ್ದರೆ ಚಿತ್ರರಂಗದಿಂದ ದೂರ ಸರಿಯುವುದಾಗಿ ಹೇಳಿದ್ದರು. ಈ ಮಾತನ್ನ ಗಂಭೀರವಾಗಿ ಹೇಳಿದ್ದಾ..? ಅಥವಾ ಚುನಾವಣೆಯಲ್ಲಿ ಸೋಲು ಖಚಿತ ಎಂದುಕೊಂಡು ಸುಮ್ಮನೆ ಹೇಳಿದ್ದಾ..? ಅಂತಾ ಗೊತ್ತಿಲ್ಲ.. ಆದ್ರೆ ಹಣಬಲದ ಜೊತೆ ಅಧಿಕಾರದ ಬಲವನ್ನೂ ಹೊಂದಿರುವ ಕಂಗನಾ  ಮೇಲೆ ಈಗ ಕಂಡ ಕಂಡಲ್ಲಿ ಕಿಡಿ ಕಾರಲು ಸಾಧ್ಯವಾಗಲ್ಲ ಎಂದು ಒಂದು ವರ್ಗಕ್ಕೆ ಚಿಂತೆ ಕಾಡುತ್ತಿದ್ದರೆ, ಮತ್ತೊಂದು ಕಡೆ ಕಂಗನಾ ರಣಾವತ್ ಅವರ ಕನಸಿನ ಕೂಸು ಎಮರ್ಜೆನ್ಸಿಯ ಕಥೆ ಏನಾಗಲಿದೆ ಅನ್ನುವ ಚಿಂತೆ ಕಾಡುತ್ತಿದೆ.

ಅಂದ ಹಾಗೆ ಎಮರ್ಜೆನ್ಸಿ ಸಿನಿಮಾ, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ಎಮರ್ಜೆನ್ಸಿಯ ಕಥೆ. ಇದನ್ನು ಆಧಾರವಾಗಿಟ್ಟುಕೊಂಡು ಕಂಗನಾ ಕಥೆ ಬರೆದು ಸಿನಿಮಾ ಮಾಡಿದ್ದಾರೆ. ಈ ಚಿತ್ರ 2023ರಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ 14ರಂದು ಈ ಸಿನಿಮಾ ರಿಲೀಸ್ ಆಗಬೇಕಿದೆ. ಆದ್ರೀಗ ಎಲ್ಲಕ್ಕಿಂತ ಹೆಚ್ಚಾಗಿ ಕಂಗನಾ ಬಿಜೆಪಿ ಎಂಪಿ. ರಾಜಕೀಯದ ರಣರಂಗಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿ ಆಗಿದೆ. ಹೀಗಾಗಿ ಎಮರ್ಜೆನ್ಸಿಯನ್ನ ಕಂಗನಾ ಶುರು ಮಾಡಿದಾಗ ಕಾಣದ ವಿರೋಧದ ಅಲೆ ಈಗ ಕಾಣಿಸುವ ಸಾಧ್ಯತೆ ಹೆಚ್ಚಿದೆ. ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ಪಡೆ ಎಮರ್ಜೆನ್ಸಿ ಚಿತ್ರವನ್ನ ಹೇಗೆ ಸ್ವೀಕರಿಸಲಿದೆ ಎಂಬ ಕುತೂಹಲ ಕೂಡ ಮನೆ ಮಾಡಿದೆ.

ಇನ್ನೂ ಎಮರ್ಜೆನ್ಸಿಯಲ್ಲಿ ಇಂದಿರಾ ಗಾಂಧಿ ಅವರನ್ನ ಕಂಗನಾ ನಾಯಕಿಯಂತೆ ತೋರಿಸಿದ್ದಾರಾ..? ಅಥವಾ ಖಳನಾಯಕಿಯಂತೆ ಬಿಂಬಿಸಿದ್ದಾರಾ..? ಎಂಬ ಜಿಜ್ಞಾಸೆ ಕೂಡ ಅನೇಕರಲ್ಲಿದೆ. ಬಿಜೆಪಿಯ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾದ ಕಂಗನಾ ವಿರುದ್ಧ ಎಮರ್ಜೆನ್ಸಿ ಚಿತ್ರದ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಸಮರ ಸಾರುವ ಸಾಧ್ಯತೆ ಇದೆ. ಹೀಗಾಗಿ ಈಗ ಸಿನಿಮಾದ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗುತ್ತೋ ಅಥವಾ ಎಮರ್ಜೆನ್ಸಿ ಚಿತ್ರದ ಮೇಲೆ ನಿಷೇಧ ಹೇರುವಂತೆ ಕೈ ಪಡೆ ಒತ್ತಾಯ ಹೇರುತ್ತದೋ ಅನ್ನೋ ಪ್ರಶ್ನೆ ಮೂಡಿದೆ. ಇವೆಲ್ಲ ಕಾರಣಗಳಿಂದ ಎಮರ್ಜೆನ್ಸಿ ಚಿತ್ರದ ಬಿಡುಗಡೆ ಆಗಲಿದ್ಯಾ, ಇಲ್ವಾ ಅನ್ನೋ ಅನುಮಾನ ಮೂಡಿಸಿದೆ. ಒಂದು ವೇಳೆ ಈ ಸಿನಿಮಾ ಬಿಡುಗಡೆ ಆಗಿದ್ದೇ ಆದಲ್ಲಿ ಯಾವತ್ತು ಬಿಡುಗಡೆಯಾಗಲಿದೆ ಅನ್ನುವ ಪ್ರಶ್ನೆ ಎದ್ದಿದೆ. ಬಿಡುಗಡೆಯಾದರೆ ಎಮರ್ಜೆನ್ಸಿ ಚಿತ್ರವನ್ನ ಕಾಂಗ್ರೆಸ್, ಬಿಜೆಪಿ ಹೇಗೆ ಸ್ವೀಕರಿಸುತ್ತವೆ ಅನ್ನುವ ಕುತೂಹಲ ಕೂಡ ಅನೇಕರಲ್ಲಿದೆ.

ಇವೆಲ್ಲದ್ರ ಮಧ್ಯೆ ಕಂಗನಾಗೆ ಕಪಾಳ ಮೋಕ್ಷ ನಡೆದಿದೆ.. ಕಂಗನಾ ಚಂಡಿಗಢ ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಐಎಸ್ಎಫ್ (CISF) ಸಿಬ್ಬಂದಿ ಕೆನ್ನೆಗೆ ಬಾರಿಸಿದ್ದಾರೆ. ಕಂಗನಾಗೆ ಕಪಾಳಮೋಕ್ಷ ಮಾಡಿದ್ದು ಯಾಕೆ ಎಂಬುದನ್ನು ಕೂಡ ಕುಲ್ವಿಂದರ್ ಕೌರ್ ಹೇಳಿದ್ದಾರೆ. 2020 ರಲ್ಲಿ ದೆಹಲಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಕುರಿತು ರೈತರ ಪ್ರತಿಭಟನೆ ನಡೆದಿತ್ತು. ಸಿಐಎಸ್ ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್  ರೈತ ಕುಟುಂಬದವರಾಗಿದ್ದಾರೆ.. ಅವರ ತಾಯಿ ರೈತರ ಚಳುವಳಿಯಲ್ಲಿ ಭಾಗಿ ಆಗಿದ್ದರು. ಆಗ ಕಂಗನಾ ಅವರು ರೈತ ಚಳುವಳಿ ವಿರುದ್ಧ ಹೇಳಿಕೆ ನೀಡಿದ್ದರು.  ಪ್ರತಿಭಟನಾ ನಿರತ ರೈತರ ಬಗ್ಗೆ ಕಂಗನಾ ಕೇವಲವಾಗಿ ಮಾತನಾಡಿದ್ದರು. 100 ರೂ. ಅಥವಾ 200 ರೂ. ನೀಡಿದ್ದರಿಂದ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಯಿಂದ ಆಕ್ರೋಶಕ್ಕೆ ಒಳಗಾಗಿದ್ದ ಕುಲ್ವಿಂದರ್ ಕೌರ್ ಅವರು ಕಂಗನಾಗೆ ಕಪಾಳಮೋಕ್ಷ ಮಾಡಿದ್ದಾರೆ. ಘಟನೆ ಬಳಿಕ ಕಂಗನಾ ಏನೆಲ್ಲಾ ನಡೀತು ಅಂತಾ ವಿವರವಾಗಿ ಮಾಹಿತಿ ನೀಡಿದ್ರು.. ನಾನು ಸುರಕ್ಷತವಾಗಿದ್ದೇನೆ.. ನಾನು ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲಿನ ಸುರಕ್ಷತಾ ಸಿಬ್ಬಂದಿ ಕಪಾಳಕ್ಕೆ ಹೊಡೆದು ಅವಹೇಳನ ಮಾಡಿದರು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ. ದೆಹಲಿಯಲ್ಲಿ ನಡೆದ ರೈತರ ಹೋರಾಟವನ್ನು ನಾನು ಬೆಂಬಲಿಸುತ್ತೇನೆ ಎಂದು ಹೇಳಿದರು ಸದ್ಯ ಸುರಕ್ಷತವಾಗಿದ್ದೇನೆ. ಆದರೆ. ಪಂಜಾಬ್ನಲ್ಲಿ ಬೆಳೆಯುತ್ತಿರುವ ತೀವ್ರವಾದವನ್ನು ಕೊನೆಗಾಣಿಸುವುದು ಹೇಗೆ?” ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ ಕಂಗನಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಒಂದು ಬಣ ಕಂಗನಾರನ್ನ ಸಪೋರ್ಟ್ ಮಾಡ್ತಾ ಇದ್ರೆ, ಇನ್ನೊಂದು ಬಣ ಕಂಗನಾರನ್ನ ಹೇಟ್ ಮಾಡ್ತಾ ಇದೆ.. ಹೀಗಾಗಿ ಕಂಗನಾ ಎಮರ್ಜೆನ್ಸಿ ಕತೆ ಏನಾಗುತ್ತೆ? ಸಿನಿಮಾ ರಿಲೀಸ್ ಆಗುತ್ತಾ ಇಲ್ವಾ ಅಂತ ಅವರೇ ಹೇಳಬೇಕು..

Shwetha M

Leave a Reply

Your email address will not be published. Required fields are marked *